ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 760 ಕೊವಿಡ್ ಲಸಿಕಾ ಕೇಂದ್ರ ಸ್ಥಾಪನೆ

|
Google Oneindia Kannada News

ಬೆಂಗಳೂರು, ಜನವರಿ 12: ಬೆಂಗಳೂರಿನಲ್ಲಿ 760 ಕೊವಿಡ್ ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ದಾಸಪ್ಪ ಆಸ್ಪತ್ರೆಯಲ್ಲಿ ಕೊವಿಡ್ ಲಸಿಕೆ ಸಂಗ್ರಹಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ನಗರದ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂರು ವಾಹನಗಳಲ್ಲಿ ಲಸಿಕೆ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ.

ರಾಜ್ಯಕ್ಕೆ 7.95 ಲಕ್ಷ ವೈಲ್, ಒಂದು ವೈಲ್ ನಲ್ಲಿ 10 ಮಂದಿಗೆ ಲಸಿಕೆರಾಜ್ಯಕ್ಕೆ 7.95 ಲಕ್ಷ ವೈಲ್, ಒಂದು ವೈಲ್ ನಲ್ಲಿ 10 ಮಂದಿಗೆ ಲಸಿಕೆ

ನಗರದಲ್ಲಿ ಮೊದಲ ಹಂತದಲ್ಲಿ ಕೊವಿಡ್ ಲಸಿಕೆ ಹಾಕುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಬಿಬಿಎಂಪಿ ಮಾಡಿಕೊಂಡಿದೆ.

BBMP Established 760 Covid 19 Vaccine Centre In Bengaluru

ಬಿಬಿಎಂಪಿಯ ದಾಸಪ್ಪ ಆಸ್ಪತ್ರೆಯಲ್ಲಿ ಕೊವಿಡ್ ಲಸಿಕೆ ಸಂಗ್ರಹ ಕೇಂದ್ರ ನಿರ್ಮಿಸಲಾಗಿದೆ. ದಾಸಪ್ಪ ಆಸ್ಪತ್ರೆಯಲ್ಲಿ 40 ಸಾವಿರ ವ್ಯಾಕ್ಸಿನ್ ಸಂಗ್ರಹಿಸುವ ಮೂರು ಐಸ್‌ಲೆಂಡ್ ರೆಫ್ರಿಜರೇಟರ್ ಹಾಗೂ 30 ಸಾವಿರ ವ್ಯಾಕ್ಸಿನ್ ಸಂಗ್ರಹಿಸುವ ಮೂರು ಐಸ್‌ಲೆಂಡ್ ರೆಫ್ರಿಜರೇಟರ್‌ಗಳಿವೆ.

ದಾಸಪ್ಪ ಆಸ್ಪತ್ರೆಯಿಂದ ಬಿಬಿಎಂಪಿಯ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವ್ಯಾಕ್ಸಿನ್ ಸರಬರಾಜು ಮಾಡುವುದಕ್ಕೆ ಮೂರು ವಾಹನ ವ್ಯವಸ್ಥೆ ಮಾಡಲಾಗಿದೆ.

ಬಿಬಿಎಂಪಿ ಎಂಟು ವಲಯಗಳಿಗೆ ಒಬ್ಬ ವಿಶೇಷ ಆಯುಕ್ತರನ್ನು ನೇಮಿಸಲಾಗಿದೆ. ಆ ವಿಶೇಷ ಆಯುಕ್ತರು ತಮ್ಮ ವಲಯಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾಗೂ ಲಸಿಕಾ ಕೇಂದ್ರಗಳಿಗೆ ಲಸಿಕೆ ತಲುಪಿಸುವ ಹಾಗೂ ಲಸಿಕಾ ಕೇಂದ್ರದ ವ್ಯವಸ್ಥೆ ಬಗ್ಗೆ ಪರಿಶೀಲಿಸುವ ಹೊಣೆಯನ್ನು ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

English summary
BBMP Commissioner Manjunath Prasad Informed that BBMP Established 760 Covid 19 Vaccine Centre In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X