ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

198 ವಾರ್ಡ್ ಗಳಿಗೆ ಬಿಬಿಎಂಪಿ ಚುನಾವಣೆ ಆರು ವಾರದಲ್ಲಿ ಪ್ರಕಟಿಸಿ : ಹೈಕೋರ್ಟ್‌ ತೀರ್ಪು

|
Google Oneindia Kannada News

ಬೆಂಗಳೂರು, ಡಿಸೆಂಬರ್ 04: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಎದುರಾಗಿದ್ದ ಅಡ್ಡಿ ಆತಂಕಗಳು ಇಂದು ನಿವಾರಣೆಯಾಗಿವೆ. ಎರಡೂವರೆ ತಿಂಗಳ ಕಾಲ ಮಿತಿಯೊಳಗೆ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮುಗಿಸುವಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಒಳಗೊಂಡ ವಿಭಾಗೀಯ ಪೀಠ ಹೈಕೋರ್ಟ್‌ ತೀರ್ಪು ಪ್ರಕಟಿಸಿದೆ. ಗ್ರಾಮ ಪಂಚಾಯಿತಿ ಚುನಾವಣೆ ಬೆನ್ನಲ್ಲೇ ಇದೀಗ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಬೆಂಗಳೂರು ಮಹಾನಗರ ಪಾಲಿಕೆ ಚುಣಾವಣೆ ಕಾಲಮಿತಿಯಲ್ಲಿ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರ ಅವಧಿ ಮುಗಿದಿದೆ. ಕ್ಷೇತ್ರಗಳ ಪುನರ್‌ ವಿಂಗಡಣೆ ನೆಪ ಹೇಳಿಕೊಂಡು ಸರ್ಕಾರ ಚುನಾವಣೆ ಮುಂದೂಡುವ ತಂತ್ರ ಮಾಡುತ್ತಿದೆ. ಇದು ಪ್ರಜಾ ಪ್ರತಿನಿಧಿ ಹಾಗೂ ಸಂವಿಧಾನ ಬಾಹಿರ. ಸಂವಿಧಾನದ ನಿಯಮದಂತೆ ಚುನಾವಣೆಗೆ ಅನುವು ಮಾಡಿಕೊಡಬೇಕು ಎಂದು ಬಿಬಿಎಂಪಿ ಮಾಜಿ ಸದಸ್ಯ ಶಿವರಾಜ್ ತನ್ನ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗ ಕೂಡ ಅರ್ಜಿ ಸಲ್ಲಿಸಿತ್ತು. ಒಟ್ಟಾರೆ ಬಿಬಿಎಂಪಿ ಚುನಾವಣೆ ವಿಚಾರವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳನ್ನು ನ್ಯಾಯಾಲಯ ಇತ್ಯರ್ಥ ಪಡಿಸಿ.

ಅರ್ಜಿಯ ವಿಚಾರೆ ನಡೆಸಿದ್ದ ನ್ಯಾಯಾಧೀಶರು, ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ಅಭಿಪ್ರಾಯ ಮಂಡಿಸಲು ಸುಚಿಸಿತ್ತು. ನವೆಂಬರ್ 25 ರಂದು ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಬಿಬಿಎಂಪಿ ಮೊದಲಿಗಿಂತಲೂ ಹೆಚ್ಚು ಬೆಳೆದಿದೆ. ಜನ ಸಂಖ್ಯೆಗೆ ಅನುಗುಣವಾಗಿ 250 ವಾರ್ಡ್ ಗಳನ್ನು ಹೆಚ್ಚಿಸಬೇಕಿದೆ. ಹೊಸದಾಗಿ ವಾರ್ಡ್ ವಿಂಗಡಣೆ ಮಾಡಿ ಶೀಘ್ರದಲ್ಲಿ ಚುನಾವಣೆ ನಡೆಸಲು ಅವಕಾಶ ಕಲ್ಪಿಸುವುದಾಗಿ ವಾದ ಮಂಡಿಸಿದ್ದರು.

BBMP Elections to 198 Wards Should Be Announced Within 6 Weeks: Karnataka High Court

ಇದೇ ಅವಧಿಯಲ್ಲಿ ರಾಜ್ಯ ಚುನಾವಣಾ ಆಯೋಗ ಕೂಡ ತನ್ನ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಬಿಬಿಎಂಪಿ ಚುನಾವಣೆ ನಡೆಸಲು ಆಯೋಗ ಎಲ್ಲ ತಯಾರಿ ನಡೆಸಿದೆ. ಪರಿಷ್ಕೃತ ಮತದಾರರ ಪಟ್ಟಿ ಕೂಡ ಸಿದ್ಧವಾಗಿದೆ. ಚುನಾವಣೆ ಮುಂದೂಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವುಂಟಾಗಲಿದೆ. ನಿಗಧಿತ ಅವಧಿಯಂತೆ ಚುನಾವಣೆ ನಡೆಸುವುದು ಸೂಕ್ತ, ಇದಕ್ಕೆ ಆಯೋಗ ಸಿದ್ಧವಿದೆ ಎಂದು ಹೇಳಿತ್ತು. ವಾದ ಮತ್ತು ಪ್ರತಿವಾದ ಆಲಿಸಿದ್ದ ಹೈಕೋರ್ಟ್‌ ವಿಭಾಗೀಯ ಪೀಠ, ತೀರ್ಪನ್ನು ಕಾಯ್ದಿರಿಸಿತ್ತು.

BBMP Elections to 198 Wards Should Be Announced Within 6 Weeks: Karnataka High Court

Recommended Video

Covid-19 Vaccine ಪಡೆಯಲು ಇಂಗ್ಲೆಂಡಿನತ್ತ ಭಾರತೀಯರು! | Oneindia Kannada

ಇಂದು ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಒಕಾ ಮತ್ತು ನ್ಯಾ ವಿಶ್ವನಾಥ್ ಶೆಟ್ಟಿ ಒಳಗೊಂಡಿದ್ದ ಪೀಠ, ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಮುಂದಿನ ಒಂದು ತಿಂಗಳಲ್ಲಿ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಮೀಸಲಾತಿ ಪಟ್ಟಿ ಬಿಡಗುಡೆ ಮಾಡಿದ ಆರು ವಾರದ ಒಳಗೆ 198 . ವಾರ್ಡ್ ಗಳಿಗೆ ಬಿಬಿಎಂಪಿ ಚುನಾವಣೆ ನಡೆಯನ್ನು ನಡೆಸಬೇಕು ಎಂದು ತೀರ್ಪು ಪ್ರಕಟಿಸಿತು. ನ್ಯಾಯಾಲಯದ ಈ ತೀರ್ಪುನಿಂದ ಪಾಲಿಕೆ ಚುನಾವಣೆ ವಾರ್ಡ್ ಪುನರ್ ವಿಂಗಡಣೆ ಹೆಸರಿನಲ್ಲಿ ಮುಂದೂಡುವ ತಂತ್ರ ವಿಫಲವಾಗಿದೆ. . 198 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದ.

English summary
Karmataka High Court passed its judgment in three petitions seeking directions to the State government to conduct BBMP elections on time. Add Kannada version also
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X