ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣಾ ಫಲಿತಾಂಶ : ಸಮಗ್ರ ಮಾಹಿತಿ

|
Google Oneindia Kannada News

ಬೆಂಗಳೂರು, ಆ.25 : 197 ವಾರ್ಡ್‌ಗಳಿಗೆ ನಡೆದ ಬಿಬಿಎಂಪಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಶತಕ ಬಾರಿಸಿದ್ದು ಮತ್ತೆ ಐದು ವರ್ಷಗಳ ಕಾಲ ಅಧಿಕಾರ ಚಲಾಯಿಸಲಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೂ 76 ಸ್ಥಾನ ಗಳಿಸಿರುವ ಕಾಂಗ್ರೆಸ್ ಬಿಬಿಎಂಪಿ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿದೆ. ಜೆಡಿಎಸ್ 14 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಒಟ್ಟು ಸ್ಥಾನಗಳು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ
198
100 76 14 8

ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಆದ್ದರಿಂದ, 198 ವಾರ್ಡ್‌ನ ಪಾಲಿಕೆಯಲ್ಲಿ 197 ವಾರ್ಡ್‌ಗಳಿಗೆ ಆ.22ರ ಶನಿವಾರ ಚುನಾವಣೆ ನಡೆದಿತ್ತು. ಶೇ 49ರಷ್ಟು ಮತದಾನವಾಗಿತ್ತು. ಇಂದು ಫಲಿತಾಂಶ ಪ್ರಕಟವಾಗಿದೆ. [ತೀರ್ಪು ಬಂದ ಮೇಲೇನು?]

bbmp

ಸಮಯ 1.45 : ಅಂತಿಮ ಫಲಿತಾಂಶ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14, ಇತರೆ 8

ಸಮಯ 1.13 : 100 ಸ್ಥಾನಗಳಲ್ಲಿ ಜಯಗಳಿಸಿದ ಬಿಜೆಪಿ

ಸಮಯ 1 ಗಂಟೆ : ಕತ್ರಿಗುಪ್ಪೆ ವಾರ್ಡ್‌ ಬಿಜೆಪಿಯ ಸಂಗಾತಿ ವೆಂಕಟೇಶ್ ಜಯ, ಜೆ.ಸಿ.ನಗರ ವಾರ್ಡ್ ಬಿಜೆಪಿಯ ಗಣೇಶ್ ರಾವ್ ಮಾನೆ ಜಯ, ದೇವಸಂದ್ರದಲ್ಲಿ ಕಾಂಗ್ರೆಸ್‌ನ ಎಂ.ಎನ್.ಶ್ರೀಕಾಂತ್ ಜಯ

ಸಮಯ 12.49 : ನಾಯಂಡನಹಳ್ಳಿ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಎಂ.ಸವಿತಾ ಗೆಲುವು, ಮಲ್ಲೇಶ್ವರಂನಲ್ಲಿ ಬಿಜೆಪಿಯ ಎನ್.ಜಯಪಾಲ್ ಗೆಲುವು

ಸಮಯ 12.45 : ಮುನ್ನಡೆ : ಕಾಂಗ್ರೆಸ್ 74, ಬಿಜೆಪಿ 98, ಜೆಡಿಎಸ್ 14, ಇತರೆ 8

ಸಮಯ 12.42 : ಶಾಂತಿ ನಗರ ವಾರ್ಡ್‌ನಲ್ಲಿ ಕಾಂಗ್ರೆಸ್ ಪಿ.ಸೌಮ್ಯ ಶಿವಕುಮಾರ್ ಗೆಲುವು, ಡಾ.ರಾಜ್ ಕುಮಾರ್ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ರೂಪಾ ಆರ್.ಗೆಲುವು.

ಸಮಯ 12.39 : ದೀಪಾಂಜಲಿ ನಗರ ವಾರ್ಡ್‌ನಲ್ಲಿ ಬಿಜೆಪಿಯ ಅನುಪಮಾ ಧರ್ಮಪಾಲ್ ಗೆಲುವು, ಛಲವಾದಿ ಪಾಳ್ಯದಲ್ಲಿ ಬಿಜೆಯ ರೇಖಾ ಕದಿರೇಶ್ ಗೆಲುವು, ಗುರಪ್ಪನಪಾಳ್ಯದಲ್ಲಿ ಕಾಂಗ್ರೆಸ್‌ನ ರಿಜ್ವಾನ್ ನವಾಬ್ ಗೆಲುವು, ಸುಂಕೇನಹಳ್ಳಿ ವಾರ್ಡ್‌ನಲ್ಲಿ ಬಿಜೆಪಿಯ ಡಿ.ಎನ್ ರಮೇಶ್ ಜಯ

ಸಮಯ 12.29 : ಮುನ್ನಡೆ : ಕಾಂಗ್ರೆಸ್ 70, ಬಿಜೆಪಿ 95, ಜೆಡಿಎಸ್ 14, ಇತರೆ 8 [ಬಿಬಿಎಂಪಿ: ಬೆಂಗಳೂರು ದಕ್ಷಿಣ ಜಿಲ್ಲೆ ಫಲಿತಾಂಶ]

ಸಮಯ 12.26 : ಹೆಗ್ಗನಹಳ್ಳಿ ವಾರ್ಡ್ ಬಿಜೆಪಿಯ ಭಾಗ್ಯಮ್ಮ ಕೃಷ್ಣಯ್ಯ ಗೆಲುವು, ಬೆಳ್ಳಂದೂರು ವಾರ್ಡ್‌ನಲ್ಲಿ ಬಿಜೆಪಿಯ ಆಶಾ ಸುರೇಶ್ ಗೆಲುವು [ಬಿಬಿಎಂಪಿ ಫಲಿತಾಂಶ ಸಿದ್ದರಾಮಯ್ಯ ತುರ್ತು ಸಭೆ]

ಸಮಯ 12.15 : ಬಿಟಿಎಂ ವಾರ್ಡ್‌ನಲ್ಲಿ ಜೆಡಿಎಸ್‌ನ ಕೆ.ದೇವದಾಸ್ ಗೆಲುವು, ಅರಕೆರೆ ವಾರ್ಡ್ ಬಿಜೆಪಿಯ ಆರ್.ಭಾಗ್ಯಲಕ್ಷ್ಮೀ ಗೆಲುವು, ಜಯನಗರ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಗಂಗಾಬಿಕೆ, ಶಕ್ತಿ ಗಣಪತಿ ನಗರದಲ್ಲಿ ಜೆಡಿಎಸ್‌ನ ಗಂಗಮ್ಮ ರಾಜಣ್ಣ ಗೆಲುವು, ಓಕಳೀಪುರಂನಲ್ಲಿ ಬಿಜೆಪಿಯ ಬಿ.ಶಿವಪ್ರಕಾಶ್ ಗೆಲುವು

ಸಮಯ 12.06 : ಕುಮಾರಸ್ವಾಮಿ ಲೇಔಟ್ ವಾರ್ಡ್ ಬಿಜೆಪಿಯ ಎಲ್.ಶ್ರಿನಿವಾಸ್‌ ಗೆಲುವು, ಅಗ್ರಹಾರ ದಾಸರಹಳ್ಳಿಯಲ್ಲಿ ಬಿಜೆಪಿ ಶಿಲ್ಪಾ ಜಿ.ಶ್ರೀಧರ್ ಗೆಲುವು, ಕಾಡುಗೊಂಡನಹಳ್ಳಿ ವಾರ್ಡ್ ಕಾಂಗ್ರೆಸ್‌ನ ನೌಷೀರ್ ಅಹಮದ್ ಗೆಲುವು

ಸಮಯ 12 ಗಂಟೆ : ವೃಷಭಾವತಿ ನಗರ ವಾರ್ಡ್ ಜೆಡಿಎಸ್‌ನ ಎಸ್.ಪಿ.ಹೇಮಲತಾ ಗೆಲುವು, ಸುಬ್ರಮಣ್ಯ ನಗರ ವಾರ್ಡ್ ಕಾಂಗ್ರೆಸ್‌ನ ಕೆ. ಮಂಜುನಾಥ್ ಗೆಲುವು, ಸಂಪಂಗಿ ರಾಮನಗರ ವಾರ್ಡ್ ಕಾಂಗ್ರೆಸ್‌ನ ಆರ್.ವಸಂತ ಕುಮಾರ್ ಗೆಲುವು, ಗಂಗೇನಹಳ್ಳಿ ವಾರ್ಡ್‌ನಲ್ಲಿ ಬಿಜೆಪಿಯ ಎಂ.ನಾಗರಾಜ್ ಗೆಲುವು

ಸಮಯ 11.50 : ರಾಯಪುರಂ ವಾರ್ಡ್‌ನಲ್ಲಿ ಬಿಜೆಪಿಯ ಶಶಿಕಲಾ ಕೇಶವ್ ಗೆಲುವು, ಚಿಕ್ಕಲ್ಲಸಂದ್ರ ವಾರ್ಡ್ ಬಿಜೆಪಿಯ ಸುಪ್ರಿಯಾ ಶೇಖರ್ ಗೆಲುವು, ಬಸವಪುರ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಬಿ.ಎನ್.ಜಯಪ್ರಕಾಶ್ ಗೆಲುವು, ಕೊಡಿಗೇಹಳ್ಳಿ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಕೆ.ಚೇತನ್ ಗೆಲುವು

ಸಮಯ 11.46 : ಮುನ್ನಡೆ : ಕಾಂಗ್ರೆಸ್ 68, ಬಿಜೆಪಿ 86, ಜೆಡಿಎಸ್ 12, ಇತರೆ 7 [ಬಿಬಿಎಂಪಿ : ಬೆಂಗಳೂರು ನಗರ ಜಿಲ್ಲೆ ಫಲಿತಾಂಶ]

ಸಮಯ 11.39 : ಗಾಳಿ ಆಂಜನೇಯ ಸ್ವಾಮಿ ದೇವಾಲಯ ವಾರ್ಡ್ ಕಾಂಗ್ರೆಸ್‌ನ ಎನ್.ಉಮಾ ಗೆಲುವು, ಅಂಜನಾಪುರ ವಾರ್ಡ್‌ ಬಿಜೆಪಿಯ ಕೆ.ಸೋಮಶೇಖರ್ ಗೆಲುವು, ಮಾರತಹಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಎನ್.ರಮೇಶ್ ಗೆಲುವು

ಸಮಯ 11.37 : ಶಿವನಗರ ವಾರ್ಡ್‌ ಕಾಂಗ್ರೆಸ್‌ನ ಮಂಜುಳಾ ವಿಜಯ್ ಕುಮಾರ್ ಗೆಲುವು, ಮಾರುತಿ ಸೇವಾ ನಗರ ಕಾಂಗ್ರೆಸ್ ಹನ್ನಾ ಭುವನೇಶ್ವರಿ ಗೆಲುವು, ಸುಭಾಷ್ ನಗರ ಕಾಂಗ್ರೆಸ್ ಎಲ್.ಗೋವಿಂದರಾಜು ಗೆಲುವು, ಆಜಾದ್ ನಗರ ಕಾಂಗ್ರೆಸ್‌ನ ಸುಜಾತಾಗೆ ಗೆಲುವು

ಸಮಯ 11.32 : ಬಿಬಿಎಂಪಿ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ತುರ್ತು ಸಭೆ ಆರಂಭವಾಗಿದೆ. ಬೆಂಗಳೂರನ್ನು ಪ್ರತಿನಿಧಿಸುವ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಸಮಯ 11.27 : ಕಾಂಗ್ರೆಸ್ 62, ಬಿಜೆಪಿ 85, ಜೆಡಿಎಸ್ 11, ಇತರೆ 7 ಮುನ್ನಡೆ

ಸಮಯ 11.23 : ಕೋನೇನ ಅಗ್ರಹಾರ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಚಂದ್ರಪ್ಪ ಗೆಲುವು ಸಾಧಿಸಿದ್ದಾರೆ. ಕಾಚರಕನಹಳ್ಳಿಯಲ್ಲಿ ಬಿಜೆಪಿಯ ಪದ್ಮನಾಭ ರೆಡ್ಡಿ ಗೆಲುವು, ಧರ್ಮರಾಯಸ್ವಾಮಿ ದೇವಾಲಯ ವಾರ್ಡ್ ಬಿಜೆಪಿಯ ಪ್ರತಭಾ ಧನ್ ರಾಜ್ ಗೆಲುವು

ಸಮಯ 11.22 : ವಸಂತನಗರ ವಾರ್ಡ್ ಬಿಜೆಪಿಯ ಸಂಪತ್ ಕುಮಾರ್‌ ಗೆಲುವು, ಟಿ.ದಾಸರಹಳ್ಳಿ ವಾರ್ಡ್ ಬಿಜೆಪಿಯ ಉಮಾದೇವಿ ನಾಗರಾಜ್ ಗೆಲುವು, ಮಂಗಮ್ಮನಪಾಳ್ಯದಲ್ಲಿ ಕಾಂಗ್ರೆಸ್‌ನ ಶೋಭಾ ಜಗದೀಶ್ ಗೆಲುವು

ಸಮಯ 11.20 : ಮತ್ತಿಕೆರೆ ವಾರ್ಡ್ ಬಿಜೆಪಿಯ ಜಯಪ್ರಕಾಶ್ ಗೆಲುವು, ರಾಜರಾಜೇಶ್ವರಿ ನಗರ ವಾರ್ಡ್ ಬಿಜೆಪಿಯ ನಳಿನಿ ಮಂಜುನಾಥ್ ಗೆಲುವು. ಬಿಳೇಕಳ್ಳಿ ಬಿಜೆಪಿ ಕೆ.ನಾರಾಯಣ ರಾಜು ಗೆಲುವು, ಶಾಕಂಬರಿ ನಗರ ವಾರ್ಡ್ ಬಿಜೆಪಿಯ ಎಂ. ಮಾಲತಿ ಗೆಲುವು, ಹೆಬ್ಬಾಳ ವಾರ್ಡ್‌ ನಲ್ಲಿ ಕಾಂಗ್ರೆಸ್‌ನ ಆನಂದ್‌ ಕುಮಾರ್ ಗೆಲುವು

ಸಮಯ 11.15 : ಕೋನೇನ ಅಗ್ರಹಾರ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಚಂದ್ರಪ್ಪ ಗೆಲುವು ಸಾಧಿಸಿದ್ದಾರೆ. ಕಾಚರಕನಹಳ್ಳಿಯಲ್ಲಿ ಬಿಜೆಪಿಯ ಪದ್ಮನಾಭ ರೆಡ್ಡಿ ಗೆಲುವು, ಧರ್ಮರಾಯಸ್ವಾಮಿ ದೇವಾಲಯ ವಾರ್ಡ್ ಬಿಜೆಪಿಯ ಪ್ರತಭಾ ಧನ್ ರಾಜ್ ಗೆಲುವು

ಸಮಯ 11.08 : ಬ್ಯಾಟರಾಯನಪುರ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಪಿ.ವಿ.ಮಂಜುನಾಥ್ ಜಯ, ಹೊಂಬೇಗೌಡ ನಗರ ವಾರ್ಡ್ ಕಾಂಗ್ರೆಸ್‌ನ ಚಂದ್ರಪ್ಪ ಜಯ, ಪುಲಿಕೇಶಿ ನಗರ ವಾರ್ಡ್‌ ಕಾಂಗ್ರೆಸ್‌ನ ಎ.ಆರ್.ಜಾಕೀರ್ ಜಯ.

ಸಮಯ 11.06 : ಮನೋರಾಯನ ಪಾಳ್ಯ ವಾರ್ಡ್‌ ಕಾಂಗ್ರೆಸ್‌ನ ಅಬ್ದುಲ್ ವಜೀದ್, ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿಜೆಪಿಯ ಉಮೇಶ್ ಶೆಟ್ಟಿ ಗೆಲುವು, ನೀಲಸಂದ್ರದಲ್ಲಿ ಕಾಂಗ್ರೆಸ್‌ನ ಜಿ.ಬಾಲಕೃಷ್ಣ ಗೆಲುವು, ಕೋಣನಕುಂಟೆ ವಾರ್ಡ್‌ ಬಿಜೆಪಿಯ ಶಶಿರೇಖಾ ಜಯರಾಮ್ ಗೆಲುವು, ಜಕ್ಕಸಂದ್ರ ವಾರ್ಡ್‌ನಲ್ಲಿ ಬಿಜೆಪಿಯ ಸರಸ್ವತಮ್ಮ ಗೆಲುವು.

ಸಮಯ 11.04 : ಹನುಮಂತನಗರದಲ್ಲಿ ಬಿಜೆಪಿಯ ಕೆಂಪೇಗೌಡ ಜಯ, ಹೆಮ್ಮಿಗೆಪುರ ವಾರ್ಡ್ ನಲ್ಲಿ ಕಾಂಗ್ರೆಸ್‌ನ ಪಂಚಲಿಂಗಯ್ಯ ಗೆಲುವು, ಬನಶಂಕರಿ ದೇವಾಲಯ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಅನ್ಸರ್ ಪಾಷಾ ಗೆಲುವು, ರಾಮಮೂರ್ತಿ ನಗರದಲ್ಲಿ ಬಿಜೆಪಿಯ ಪದ್ಮಾವತಿ ಶ್ರೀನಿವಾಸ್ ಜಯ.

ಸಮಯ 10.58 : ಕಾಂಗ್ರೆಸ್ 51, ಬಿಜೆಪಿ 73, ಜೆಡಿಎಸ್ 11, ಇತರೆ 6 ಮುನ್ನಡೆ

ಸಮಯ 10.54 : ಮಾರಪ್ಪನಪಾಳ್ಯದಲ್ಲಿ ಬಿಜೆಪಿಯ ದೀಪಿಕಾ ಮಂಜುನಾಥ ರೆಡ್ಡಿಗೆ ಗೆಲುವು, ಲಕ್ಷ್ಮೀ ದೇವಿನಗರ ಕಾಂಗ್ರೆಸ್‌ನ ವೇಲು ನಾಯಕ್ ಗೆಲುವು, ಶಂಕರಮಠ ವಾರ್ಡ್ ಕಾಂಗ್ರೆಸ್‌ನ ಶಿವರಾಜ್‌ ಗೆಲುವು, ಹೆಮ್ಮಿಗೆಪುರ ವಾರ್ಡ್ ಕಾಂಗ್ರೆಸ್‌ನ ಪಂಚಲಿಂಗಯ್ಯ ಗೆಲುವು

ಸಮಯ 10.47 : ಕಾಂಗ್ರೆಸ್ 48, ಬಿಜೆಪಿ 71, ಜೆಡಿಎಸ್ 11, ಇತರೆ 6 ಕ್ಷೇತ್ರದಲ್ಲಿ ಮುನ್ನಡೆ

ಸಮಯ 10.43 : ಕೆ.ಆರ್.ಪುರಂ ವಾರ್ಡ್‌ನಲ್ಲಿ ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್ ಜಯ, ಗಂಗಾನಗರ ವಾರ್ಡ್‌ನಲ್ಲಿ ಬಿಜೆಪಿಯ ಪ್ರಮೀಳಾ ಆನಂದ್ ಜಯ, ಕಾಡುಮಲ್ಲೇಶ್ವರ ವಾರ್ಡ್ ಬಿಜೆಪಿಯ ಮಂಜುನಾಥ್ ರಾಜು ಜಯ, ಹಂಪಿನಗರ ವಾರ್ಡ್ ಬಿಜೆಪಿ ಆನಂದ್‌ ಜಯ.

ಬಾಗಲಕುಂಟೆ ವಾರ್ಡ್‌ನಲ್ಲಿ ಬಿಜೆಪಿಯ ಕೆ.ನರಸಿಂಹ ನಾಯಕ್ ಜಯ, ಗೊಟ್ಟಿಗೆರೆ ವಾರ್ಡ್ ಬಿಜೆಪಿಯ ಲಿಲಿತಾ ಟಿ. ನಾರಾಯಣ್ ಗೆಲುವು, ಸರ್ವಜ್ಞ ನಗರ ವಾರ್ಡ್ ಬಿಜೆಪಿಯ ಶಶಿರೇಖಾ ಮುಕುಂದ್ ಜಯ, ಕಾಮಾಕ್ಷಿ ಪಾಳ್ಯದಲ್ಲಿ ಬಿಜೆಪಿಯ ಪ್ರತಿಮಾ ಜಯ, ಭೈರಸಂದ್ರ ವಾರ್ಡ್ ಬಿಜೆಪಿಯ ಎನ್.ನಾಗರಾಜ್ ಜಯ, ಲಿಂಗಾರಾಜಪುರ ಕಾಂಗ್ರೆಸ್‌ನ ಲಾವಣ್ಯ ಗಣೇಶ್‌ ಗೆಲುವು

ಸಮಯ 10.33 : ಕುವೆಂಪು ನಗರ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಪಾರ್ತಿಭಾ ರಾಜನ್ ಜಯ, ಜ್ಞಾನ ಭಾರತಿ ವಾರ್ಡ್‌ ಬಿಜೆಪಿಯ ತೇಜಸ್ವಿನಿ ಸೀತಾರಾಮಯ್ಯ ಜಯ, ಮೂಡಲಪಾಳ್ಯದಲ್ಲಿ ಬಿಜೆಪಿಯ ದಾಸೇಗೌಡಗೆ ಗೆಲುವು, ಎಚ್‌ಟಿಎಂ ವಾರ್ಡ್‌ನಲ್ಲಿ ಕಾಂಗ್ರೆಸ್ ಆಶಾಗೆ ಜಯ.

ಮಾರಪ್ಪನಪಾಳ್ಯದಲ್ಲಿ ಜೆಡಿಎಸ್‌ನ ಮಹದೇವ್ ಜಯ, ಎಚ್ ಬಿಆರ್ ಲೇಔಟ್ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಪಿ. ಆನಂದ್ ಜಯ, ವಸಂತ ನಗರದಲ್ಲಿ ಕಾಂಗ್ರೆಸ್‌ನ ಶೋಭಾ ಗೌಡಗೆ ಗೆಲುವು

ಸಮಯ 10.27 : ಕಾಂಗ್ರೆಸ್ 43, ಬಿಜೆಪಿ 60, ಜೆಡಿಎಸ್ 10, ಇತರೆ 5 ಕ್ಷೇತ್ರಗಳಲ್ಲಿ ಮುನ್ನಡೆ

ಸಮಯ 10.22 : ಬೇಗೂರು ಕಾಂಗ್ರೆಸ್ ಎಂ.ಆಂಜಿನಪ್ಪಗೆ ಜಯ, ಜೀವನ್ ಭೀಮಾ ನಗರ ವಾರ್ಡ್‌ ಬಿಜೆಪಿ ಮೀನಾ ಕುಮಾರಿ ಜಯ, ಪ್ರಕಾಶ್ ನಗರ ವಾರ್ಡ್‌ ಕಾಂಗ್ರೆಸ್ ಜಿ.ಪದ್ಮಾವತಿ ಜಯ, ಪೀಣ್ಯ ಕೈಗಾರಿಕಾ ಪ್ರದೇಶ ಕಾಂಗ್ರೆಸ್ ಲಲಿತಾ ತಿಮ್ಮನಂಜಯ್ಯ ಜಯ, ಕಾಟನ್ ಪೇಟೆ ಕಾಂಗ್ರೆಸ್‌ನ ಡಿ.ಪ್ರಮೋದ್ ಜಯ.

ಕಾವಲ್ ಭೈರಸಂದ್ರ ಜೆಡಿಎಸ್ ನೇತ್ರ ನಾರಾಯಣ್ ಜಯ, ಕೋರಮಂಗಲ ಕಾಂಗ್ರೆಸ್‌ನ ಚಂದ್ರಪ್ಪಗೆ ಗೆಲುವು, ಹಗದೂರು ವಾರ್ಡ್ ಕಾಂಗ್ರೆಸ್‌ ಉದಯ್ ಕುಮಾರ್‌ಗೆ ಗೆಲುವು, ಜಗಜೀವನ್ ರಾಮ್ ನಗರ ಕಾಂಗ್ರೆಸ್ ಸೀಮಾ ಅಪ್ತಾಫ್ ಗೆ ಜಯ

ಸಮಯ 10.11 : ಬೊಮ್ಮನಹಳ್ಳಿ ವಾರ್ಡ್‌ನಲ್ಲಿ ಬಿಜೆಪಿಯ ಸಿ.ಆರ್.ಮೋಹನ್ ರಾಜು ಗೆಲುವು, ಗಾಂಧಿನಗರ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಆರ್.ಜೆ.ಲತಾ ಗೆಲುವು. ಅಗರ ವಾರ್ಡ್‌ನಲ್ಲಿ ಬಿಜಪಿ ಭವ್ಯಾ ಗೆಲುವು, ನ್ಯೂ ತಿಪ್ಪಸಂದ್ರ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿಲ್ಪಾ ಅಭಿಲಾಷ್‌ಗೆ ಗೆಲುವು

ಸಮಯ 10.04 : ಹೊಸಹಳ್ಳಿ ವಾರ್ಡ್ ಬಿಜೆಪಿ ಅಭ್ಯರ್ಥಿ ಆರ್‌. ಮಹಾಲಕ್ಷ್ಮಿ ಅವರು 2,581 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಮಹಾಲಕ್ಷ್ಮೀ ವಿಜಯನಗರ ವಾರ್ಡ್‌ ಸದಸ್ಯರಾಗಿದ್ದ ಎಚ್‌.ರವೀಂದ್ರ ಅವರ ಪುತ್ರಿ.

ಸಮಯ 10 ಗಂಟೆ : ಕೆಂಗೇರಿ ವಾರ್ಡ್‌ನಲ್ಲಿ ಬಿಜೆಪಿಯ ವಿ.ವಿ.ಸತ್ಯನಾರಾಯಣ, ಸಿದ್ಧಾಪುರ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಮುಜಾಹಿದ್ ಪಾಶಾ ಗೆಲುವು, ಸುದ್ದುಗುಂಟೆ ಪಾಳ್ಯದಲ್ಲಿ ಕಾಂಗ್ರಸ್‌ನ ಜಿ.ಮಂಜುನಾಥ್ ಗೆಲುವು

ಗರುಡಾಚಾರ್ ಪಾಳ್ಯದಲ್ಲಿ ಕಾಂಗ್ರೆಸ್ ನಿತೀಶ್ ಪುರುಷೋತ್ತಮ್, ಬಸವೇಶ್ವರ ನಗರ ವಾರ್ಡ್‌ನಲ್ಲಿ ಬಿಜೆಪಿಯ ಉಮಾವತಿ ಪದ್ಮರಾಜ್, ಭಾರತಿ ನಗರ ವಾರ್ಡ್‌ನಲ್ಲಿ ಕಾಂಗ್ರೆಸ್‌ ಶಕೀಲ್ ಅಹ್ಮದ್ ಗೆಲುವು

ಸಮಯ 9.53 : ಸದ್ಯದ ಮುನ್ನಡೆ : ಕಾಂಗ್ರೆಸ್ 25, ಬಿಜೆಪಿ 50, ಜೆಡಿಎಸ್ 9, ಇತರೆ 5

ಸಮಯ 9.50 : ಬಸವನಗುಡಿ ವಾರ್ಡ್‌ನಲ್ಲಿ ಬಿಜೆಪಿಯ ಕಟ್ಟೆ ಸತ್ಯನಾರಾಯಣಗೆ ಗೆಲುವು

ಸಮಯ 9.47 : ನಾಗಾವಾರ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಇರ್ಷಾದ್ ಬೇಗಂ, ಯಲಚೇನಹಳ್ಳಿ ವಾರ್ಡ್‌ನಲ್ಲಿ ಬಿಜೆಪಿಯ ವಿ.ಬಾಲಕೃಷ್ಣ, ಯಡಿಯೂರು ವಾರ್ಡ್‌ನಲ್ಲಿ ಬಿಜೆಪಿಯ ಪೂರ್ಣಿಮಾ ರಮೇಶ್, ಜಯಮಹಲ್‌ನಲ್ಲಿ ಕಾಂಗ್ರೆಸ್‌ನ ಎಂ.ಕೆ.ಗುಣಶೇಖರ್ ಜಯ

ಸಮಯ 9.40 : ನಾಗಪುರ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಅವರ ಕಿರಿಯ ಸಹೋದರ ನೆ.ಲ. ಮಹೇಶ್‌ ಕುಮಾರ್‌ ಸೋಲು ಅನುಭವಿಸಿದ್ದಾರೆ. ಜೆಡಿಎಸ್‌ನ ಭದ್ರೇಗೌಡ ಗೆಲುವು ಸಾಧಿಸಿದ್ದಾರೆ.

ಸಮಯ 9.37 : ದಯಾನಂದ್ ವಾರ್ಡ್‌ನಲ್ಲಿ ಬಿಜೆಪಿಯ ಕುಮಾರಿ ಪಳನಿಕಾಂತ್ ಗೆಲುವು, ಈಜಿಪುರದಲ್ಲಿ ಕಾಂಗ್ರೆಸ್‌ನ ಟಿ.ರಾಮಚಂದ್ರಗೆ ಗೆಲುವು, ಕೊಟ್ಟಿಗೆ ಪಾಳ್ಯ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಜಿ.ಮೋಹನ್ ಕುಮಾರ್ ಗೆಲುವು

ಸಮಯ 9.28 : ವಿಜಯನಗರ ವಾರ್ಡ್‌ನಲ್ಲಿ ಬಿಜೆಪಿಯ ಶ್ರೀಲತಾ ಗೋಪಿನಾಥ್‌ಗೆ ಜಯ, ಚೊಕ್ಕಸಂದ್ರ ವಾರ್ಡ್‌ನಲ್ಲಿ ಬಿಜೆಪಿಯ ಸರ್ವಮಂಗಳಾ ನಾಗರಾಜ್ ಗೆಲುವು

ಸಮಯ 9.26 : ದೊಡ್ಡ ಬಿದರಕಲ್ಲು ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಎಸ್. ವಾಸುದೇವ್‌ಗೆ ಜಯ, ಕಾವೇರಿಪುರದಲ್ಲಿ ಜೆಡಿಎಸ್‌ನ ರಮೀಳಾ ಉಮಾಶಂಕರ್‌ ಗೆಲುವು, ಬಿಜೆಪಿ ಅಭ್ಯರ್ಥಿ ವಿಜಯಲಕ್ಷ್ಮೀ ಸಿಂಗ್‌ಗೆ ಸೋಲು, ಮೂರನೇ ಸ್ಥಾನ

ಸಮಯ 9.21 : ಕಾಂಗ್ರೆಸ್ 15, ಬಿಜೆಪಿ 31, ಜೆಡಿಎಸ್ 10, ಇತರೆ 5 ಕ್ಷೇತ್ರಗಳಲ್ಲಿ ಮುನ್ನಡೆ

ಸಮಯ 9.18 : ಸುಧಾಮನಗರ ವಾರ್ಡ್‌ನಲ್ಲಿ ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್‌ಗೆ ಗೆಲುವು, ಜೆ.ಪಿ.ಪಾರ್ಕ್ ವಾರ್ಡ್‌ನಲ್ಲಿ ಬಿಜೆಪಿಯ ಕೆ.ಬಿ.ಮಮತಾಗೆ ಗೆಲುವು

ಸಮಯ 9.16 : ನಂದಿನಿ ಲೇಔಟ್ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಕುಮಾರ್ ಗೆಲುವು, ಜೆ.ಪಿ.ನಗರ ವಾರ್ಡ್‌ನಲ್ಲಿ ಬಿಜೆಪಿಯ ಕೆ.ಎನ್. ಲಕ್ಷ್ಮೀ ನಟರಾಜುಗೆ ಗೆಲುವು

ಸಮಯ 9.10 : ಮಾರುತಿ ಮಂದಿರ ವಾರ್ಡ್‌ನಲ್ಲಿ ಮಾಜಿ ಮೇಯರ್ ಶಾಂತ ಕುಮಾರಿಗೆ ಜಯ, ಕೆ.ಆರ್.ಮಾರ್ಕೆಟ್ ವಾರ್ಡ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ನಜೀಮಾ ಖಾನಮ್ ಗೆಲುವು, ಅತ್ತಿಗುಪ್ಪೆ ವಾರ್ಡ್‌ನಲ್ಲಿ ಬಿಜೆಪಿಯ ಡಾ.ಎಸ್.ರಾಜು ಜಯ. ಹೊಸಕೆರೆ ಹಳ್ಳಿ ವಾರ್ಡ್‌ನಲ್ಲಿ ಬಿಜೆಪಿಯ ರಾಜೇಶ್ವರಿ ಚೋಳರಾಜನ್ ಗೆಲುವು

ಸಮಯ 9.05 : ಚೌಡೇಶ್ವರಿ ವಾರ್ಡ್‌ನಲ್ಲಿ ಯಲಹಂಕ ಶಾಸಕ ವಿಶ್ವನಾಥ್‌ಗೆ ಮುಖಭಂಗ. ವಿಶ್ವನಾಥ್ ಪತ್ನಿ ವಾಣಿಶ್ರೀ ವಿಶ್ವನಾಥ್‌ಗೆ ಸೋಲು. ಕಾಂಗ್ರೆಸ್ ಅಭ್ಯರ್ಥಿ ಆರ್.ಪದ್ಮಾವತಿ ಅಮರನಾಥ್‌ಗೆ ಜಯ

ಸಮಯ 9 ಗಂಟೆ : ಪಾದರಾಯನಪುರ ವಾರ್ಡ್‌ನಲ್ಲಿ ಜೆಡಿಎಸ್‌ನ ಇಮ್ರಾನ್, ಸಿಂಗಸಂದ್ರದಲ್ಲಿ ಬಿಜೆಪಿಯ ಶಾಂತಬಾಬು,
ವಿದ್ಯಾರಣ್ಯಪುರ ವಾರ್ಡ್‌ನಲ್ಲಿ ಬಿಜೆಪಿಯ ಎಚ್.ಕುಸುಮಾ, ರಾಜಾಜಿನಗರ ವಾರ್ಡ್‌ನಲ್ಲಿ ಕಾಂಗ್ರೆಸ್ ಜಿ.ಕೃಷ್ಣಮೂರ್ತಿಗೆ ಗೆಲುವು

ಸಮಯ 8.59 : ಸದ್ಯದ ಫಲಿತಾಂಶ : ಕಾಂಗ್ರೆಸ್ 16. ಬಿಜೆಪಿ 25, ಜೆಡಿಎಸ್ 10, ಇತರೆ 5 ಮುನ್ನಡೆ

ಸಮಯ 8.57 : ಆಡುಗೋಡಿ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಮಂಜುಳಾ, ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಕೆ.ನಾಗಭೂಷಣ್‌ ಗೆಲುವು, ಕೆಂಪಾಪುರ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಗಾಯತ್ರಿ ಗೆಲುವು, ಬಾಣಸವಾಡಿ ಬಿಜೆಪಿ ಅಭ್ಯರ್ಥಿ ಕೋದಂಡ ರೆಡ್ಡಿಗೆ ಜಯ

ಸಮಯ 8.54 : ದೇವರಜೀವನಹಳ್ಳಿ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಪತ್ ರಾಜ್ ಅವರಿಗೆ 6 ಸಾವಿರ ಮತಗಳ ಜಯ

ಸಮಯ 8.51 : ಲಗ್ಗೆರೆ ವಾರ್ಡ್‌ನಲ್ಲಿ ಜೆಡಿಎಸ್‌ನ ಮಂಜುಳಾ ನಾರಾಯಣಸ್ವಾಮಿಗೆ ಗೆಲುವು, ಉತ್ತರಹಳ್ಳಿ ವಾರ್ಡ್‌ನಲ್ಲಿ ಬಿಜೆಪಿಯ ಹನುಮಂತಯ್ಯಗೆ ಗೆಲುವು

ಸಮಯ 8.49 : ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗುರುಮೂರ್ತಿ ರೆಡ್ಡಿ ಗೆಲುವು, ಯಲಹಂಕದಲ್ಲಿ ಬಿಜೆಪಿಯ ವಾಣಿಶ್ರೀ ವಿಶ್ವನಾಥ್‌ಗೆ ಹಿನ್ನಡೆ

ಸಮಯ 8.46 : ರಾಧಾಕೃಷ್ಣ ವಾರ್ಡ್ ಜೆಡಿಎಸ್ ಅಭ್ಯರ್ಥಿ ಆನಂದ್ ಗೆಲುವು, ಲಕ್ಕಸಂದ್ರ ವಾರ್ಡ್‌ನಲ್ಲಿ ಬಿಜೆಪಿಯ ಮಹೇಶ್ ಬಾಬುಗೆ ಜಯ

ಸಮಯ 8.41 : ಹಲಸೂರು ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಮಮತಾ ಸರವಣ ಗೆಲುವು, ಜಾಲಹಳ್ಳಿ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಎನ್.ಶ್ರೀನಿವಾಸ ಗೌಡಗೆ ಜಯ

ಸಮಯ 8.38 : ಕೆಂಪೇಗೌಡ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಮ್ಮ ಗೆಲುವು

ಸಮಯ 8.27 : ರಾಮಸ್ವಾಮಿ ಪಾಳ್ಯ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೇತ್ರಾವತಿ ಕೃಷ್ಣೇ ಗೌಡ ಗೆಲುವು ಸಾಧಿಸಿದ್ದಾರೆ.

ಸಮಯ 8.33 : ಹೊಯ್ಸಳ ನಗರ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ

ಸಮಯ 8.31 : ಮಾರುತಿ ಮಂದಿರ ವಾರ್ಡ್‌ನಲ್ಲಿ ಮಾಜಿ ಮೇಯರ್ ಶಾಂತ ಕುಮಾರಿಗೆ ಹಿನ್ನಡೆ

ಸಮಯ 8.30 : ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ನಾಗಾಪುರ ವಾರ್ಡ್‌ನಲ್ಲಿ ಜೆಡಿಎಸ್ ಮುನ್ನಡೆ

ಸಮಯ 8.27 : ಸದ್ಯದ ಫಲಿತಾಂಶ : ಕಾಂಗ್ರೆಸ್ 10, ಬಿಜೆಪಿ 8, ಜೆಡಿಎಸ್ 8 ಸ್ಥಾನಗಳಲ್ಲಿ ಮುನ್ನಡೆ

ಸಮಯ 8.17 : ಬಸವನಗುಡಿ ವಾರ್ಡ್‌ನಲ್ಲಿ ಮಾಜಿ ಮೇಯರ್ ಮತ್ತು ಬಿಜೆಪಿ ಅಭ್ಯರ್ಥಿ ಕಟ್ಟೆ ಸತ್ಯನಾರಾಯಣ ಮುನ್ನಡೆ

ಸಮಯ 8.14 : ಮಾರುತಿ ಮಂದಿರ, ದತ್ತಾತ್ರೇಯ ನಗರ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮುನ್ನಡೆ. ರಾಮಸ್ವಾಮಿ ಪಾಳ್ಯ ವಾರ್ಡ್‌ನಲ್ಲಿ ಬಿಜೆಪಿ ಮುನ್ನಡೆ

ಸಮಯ 8.12 : ಅಂಚೆ ಮತಗಳ ಎಣಿಕೆಯಲ್ಲಿ ನಂದಿನಿ ಲೇಔಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ಕೆ.ವಿ.ರಾಮಚಂದ್ರ ಅವರು ಮುನ್ನಡೆ ಪಡೆದುಕೊಂಡಿದ್ದಾರೆ.

ಸಮಯ 8.08 : ಹೊರಮಾವು ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಮ್ಮ ಮುನ್ನಡೆ

ಸಮಯ 8 ಗಂಟೆ : ಅಂಚೆ ಮತಗಳ ಎಣಿಕೆ ಆರಂಭ, ನಂದಿನಿ ಲೇಔಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಎಂ.ನಾಗರಾಜ್‌ಗೆ ಮುನ್ನಡೆ

English summary
BBMP Election 2015 : Counting of votes begins today in the 27 centers of Bengaluru. On August 22nd election held for 197 wards. 1,121 candidates in the fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X