ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರ ಪೂರ್ವ: ಸ್ವತಂತ್ರ ಅಭ್ಯರ್ಥಿಯಾಗಿ ರಮೇಶ್ ಸ್ಪರ್ಧೆ

|
Google Oneindia Kannada News

ಬೆಂಗಳೂರು, ಆಗಸ್ಟ್. 12: ಬಿಬಿಎಂಪಿ ಚುನಾವಣಾ ಕಣ ರಂಗೇರುತ್ತಿದ್ದು 198 ವಾರ್ಡ್ ಗಳಿಗೆ ವಿವಿಧ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಜಯನಗರ ಪೂರ್ವ ವಾರ್ಡ್ (170) ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಬಿ.ವಿ.ಬಿ.ವಿ. ರಮೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದು ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.[ಬಿಬಿಎಂಪಿ ಚುನಾವಣೆ ಕಣದಲ್ಲಿರುವ ಸ್ಟಾರ್ ಅಭ್ಯರ್ಥಿಗಳು]

bbmp

40 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ನನ್ನನ್ನು ಜನ ಈ ಬಾರಿ ಗುರುತಿಸಲಿದ್ದಾರೆ. ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.[ಖಾಕಿ ಕಿತ್ತಾಕಿ ಖಾದಿ ತೊಡಲು ಹೊರಟ ಮಹಿಳಾ ಪೊಲೀಸ್]

ಯಾವುದೇ ಜಾತಿ, ಪಕ್ಷಗಳ ಬೆಂಬಲವಿಲ್ಲದೇ ಚುನಾವಣೆ ಎದುರಿಸುತ್ತಿದ್ದು ಜಯನಗರ ಪೂರ್ವದ ಅಭಿವೃದ್ಧಿ ನನ್ನ ಮುಂದಿರುಗವ ಏಕೈಕ ಗುರಿ ಎಂದು 14 ವರ್ಷಗಳ ಹಿಂದೆ ಚುನಾವಣೆಗೆ ಸ್ಪರ್ಧಿಸಿ ಕೆಲವೇ ಮತಗಳ ಅಂತರದಲ್ಲಿ ಸೋಲು ಕಂಡಿದ್ದ ರಮೇಶ್ ಹೇಳುತ್ತಾರೆ.

ಸಚಿವ ರಾಮಲಿ0ಗಾರೆಡ್ಡಿ, ಬಿಜೆಪಿ ನಾಯಕ ಎನ್.ವಿಜಯಕುಮಾರ್ ಜತೆಗೂಡಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದೇನೆ. ಜನರೇ ನನ್ನನ್ನು ಚುನಾವಣೆಗೆ ಸ್ಪರ್ಧಿಸಿ ಎಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಕಣದಲ್ಲಿದ್ದೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

English summary
Bruhat Bengaluru Mahanagara Palike (BBMP) election scheduled on August 22, 2015. B.V. Ramesh contesting as an Independent candidate in Jayanagara East ward number 170.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X