ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಅಭ್ಯರ್ಥಿಗಳಿಗೆ ಬಿಪ್ಯಾಕ್ ನಿಂದ ತರಬೇತಿ

|
Google Oneindia Kannada News

ಬೆಂಗಳೂರು, ಆಗಸ್ಟ್. 17: ಬೆಂಗಳೂರು ಮಹಾನಗರದಲ್ಲಿ ಬಿಬಿಎಂಪಿ ಚುನಾವಣೆ ಕಾವು. ಅಭ್ಯರ್ಥಿಗಳು ಕುಡಿಯುವ ನೀರು, ಮೂಲ ಸೌಕರ್ಯ ಅಭಿವೃದ್ಧಿ, ಮಹಿಳಾ ಸುರಕ್ಷತೆ, ಪಾರದರ್ಶಕ ಆಡಳಿತ ಎಂಬ ಅನೇಕ ಅಂಶಗಳ ಆಧಾರದಲ್ಲಿಯೇ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.

ನಗರದ ವಿವಿಧ ವಾರ್ಡ್ ಗಳ ಒಟ್ಟು 20 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿರುವ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ(ಬಿಪ್ಯಾಕ್) ವಿವಿಧ ಬಗೆಯ ತರಬೇತಿ ನೀಡಿದೆ. ಸ್ವಚ್ಛ ಬೆಂಗಳೂರು ನಿರ್ಮಾಣದ ಕುರಿತಾಗಿ ಸಮಗ್ರ ತಿಳಿವಳಿಕೆ ನೀಡಿದೆ. [ಬಿಬಿಎಂಪಿ ಚುನಾವಣೆಯಲ್ಲಿ ನೋಟಾ ಅವಕಾಶ ಏಕಿಲ್ಲ?]

bbmp

ಪ್ರಕಾಶ್ ನಗರ(98) ವಾರ್ಡ್ ನ ಬಿಜೆಪಿಯ ದೇವಿಕಾ ರಾಜ್, ಲೋಕಸತ್ತಾ ಪಕ್ಷದ ಶಿಲ್ಪಾ ಪವಾರ್ ಮತ್ತು ಲಕ್ಷ್ಮೀ ಮೊಳಾ(ಕರಿಸಂದ್ರ ಮತ್ತು ಪಟ್ಟಾಭಿರಾಮನಗರ ವಾರ್ಡ್) ಸೇರಿದಂತೆ ಎಲ್ಲರಿಗೂ ಸ್ವಚ್ಛ ಬೆಂಗಳೂರು ಪರಿಕಲ್ಪನೆಯನ್ನು ಮನದಟ್ಟು ಮಾಡಿಕೊಡಲಾಗಿದೆ.[ಬಿಬಿಎಂಪಿ ಚುನಾವಣೆ ದಿನ ಸಾರ್ವತ್ರಿಕ ರಜಾ ಘೋಷಣೆ]

ಬಿ ಪ್ಯಾಕ್ ನ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಮಾತನಾಡಿ, ಆಡಳಿತದಲ್ಲಿ ಬದಲಾವಣೆ ತರುವುದು ನಮ್ಮ ಉದ್ದೇಶ. ಬಿಬಿಎಂಪಿಯಲ್ಲಿನ ಭ್ರಷ್ಟಾಚಾರಗಳನ್ನು ಹಂತ ಹಂತವಾಗಿ ಕಿತ್ತೆಸೆಯಬೇಕಾಗಿದೆ. ಎಲ್ಲ ಅಭ್ಯರ್ಥಿಗಳಿಗೂ ಆಡಳಿತ ಪಾರದರ್ಶಕತೆ ಬಗ್ಗೆ ವಿಶೇಷ ತರಬೇತಿ ನೀಡಿದ್ದೇವೆ ಎಂದು ತಿಳಿಸಿದರು.

bbmp

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಬಿ ಪ್ಯಾಕ್ ಮತದಾನ ಜಾಗೃತಿ, ಅಭ್ಯರ್ಥಿಗಳ ನಡುವೆ ಸಂವಾದ ಸೇರಿದಂತೆ ಮಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಮತ್ತು ಜನರ ನಡುವೆ ಸಂವಾದ ಏರ್ಪಡಿಸಿತ್ತು.

English summary
Bengaluru: Some of the areas that candidates trained by Bangalore Political Action Committee's (B.PAC) B.CLIP programme want to focus on. Twenty candidates trained under B.CLIP are in the fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X