ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಿಬಿಎಂಪಿ' ಕನಸಿನ ಬೆನ್ನೇರಿ ಬಿಜೆಪಿ: ಮೇಯರ್ ಸ್ಥಾನಕ್ಕೆ ನಾಲ್ವರ ಪೈಪೋಟಿ

|
Google Oneindia Kannada News

ಅನಾಯಾಸವಾಗಿ ಪಡೆಯಬಹುದಾಗಿದ್ದ ಹುದ್ದೆಯನ್ನು, ಅತಿಯಾದ ಆತ್ಮವಿಶ್ವಾಸದಿಂದ ಹೇಗೆ ಕಳೆದುಕೊಳ್ಳಬಹುದು ಎನ್ನುವುದಕ್ಕೆ ಕಳೆದ ಬಿಬಿಎಂಪಿ ಚುನಾವಣೆಯೇ ಒಂದು ಉದಾಹರಣೆ.

ಇನ್ನೇನು, ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ನಮ್ಮದೇ ಹವಾ ಎಂದು ಬೀಗುತ್ತಿದ್ದ, ಪದ್ಮನಾಭ ನಗರದ ಶಾಸಕರಿಗೆ, ಗೌಡ್ರ ಹಾಕಿದ ಗೂಗ್ಲಿಯ ಮರ್ಮವೇ ಅರ್ಥವಾಗದೇ ಹೋಯಿತು. ಈಗ ಅದೆಲ್ಲಾ ಇತಿಹಾಸ..

ಬಿಬಿಎಂಪಿ ಹಾಲಿ ಮೇಯರ್ ಹಾಗೂ ಉಪ ಮೇಯರ್ ಅಧಿಕಾರ ಅವಧಿ ಮುಗಿಯುತ್ತಾ ಬಂದಿದ್ದು ಸೆಪ್ಟೆಂಬರ್ 27ಕ್ಕೆ ಚುನಾವಣೆ ನಡೆಯಲಿದೆ. ಹಾಲಿ ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೇಗೌಡ ಅವರ ಅಧಿಕಾರಾವಧಿ ಸೆಪ್ಟೆಂಬರ್ 28ಕ್ಕೆ ಮುಗಿಯಲಿದೆ.

ಬಿಬಿಎಂಪಿ ಮೇಯರ್ ಚುನಾವಣೆ ಯಾವಾಗ? ಇಲ್ಲಿದೆ ಮಾಹಿತಿಬಿಬಿಎಂಪಿ ಮೇಯರ್ ಚುನಾವಣೆ ಯಾವಾಗ? ಇಲ್ಲಿದೆ ಮಾಹಿತಿ

ಈ ಬಾರಿಯ ಚುನಾವಣೆಗೆ ಒಟ್ಟು 257 ಮತದಾರರಿದ್ದು, 128 ಮತಗಳ ಮ್ಯಾಜಿಕ್ ನಂಬರ್ ಬರಬೇಕಾಗಿದೆ. ಬದಲಾದ ರಾಜಕೀಯ ಮತ್ತು ಬಿಜೆಪಿ ಸರಕಾರ ಅಧಿಕಾರದಲ್ಲಿರುವುದರಿಂದ, ಬಿಜೆಪಿ ಗದ್ದುಗೇರುವುದು ಬಹುತೇಕ ನಿಶ್ಚಿತ ಎಂದು ಹೇಳಲಾಗುತ್ತಿದೆ. ಹಾಗಾಗಿ, ಮೇಯರ್ ಕನಸನ್ನು ಸಾಕಾರ ಮಾಡಿಕೊಳ್ಳಲು, ನಾಲ್ವರು ತಮ್ಮ ರಾಜಕೀಯ ಶಕ್ತಿಗಳನ್ನೆಲ್ಲಾ ಬಳಸಿಕೊಳ್ಳುತ್ತಿದ್ದಾರೆ. ಅವರು ಯಾರು, ಮುಂದೆ ಓದಿ..

ನಾಲ್ವರು ಸದಸ್ಯರ ಬೆಂಬಲ ಬಿಜೆಪಿಗೆ ಅಗತ್ಯ

ನಾಲ್ವರು ಸದಸ್ಯರ ಬೆಂಬಲ ಬಿಜೆಪಿಗೆ ಅಗತ್ಯ

ಸರ್ಕಾರ ಬದಲಾಗಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಈ ಬಾರಿ ಬಿಜೆಪಿ, ಪಾಲಿಕೆ ಅಧಿಕಾರ ಹಿಡಿಯಲು ಸರ್ವ ಪ್ರಯತ್ನ ನಡೆಸುತ್ತಿದೆ. ಏಳು ಜನ ಪಕ್ಷೇತರ ಸದಸ್ಯರ ಪೈಕಿ ಕನಿಷ್ಠ ನಾಲ್ವರು ಸದಸ್ಯರ ಬೆಂಬಲ ಬಿಜೆಪಿಗೆ ಅಗತ್ಯವಾಗಿದೆ. ಅದನ್ನು ದಕ್ಕಿಸಿಕೊಳ್ಳುವ ವಿಶ್ವಾಸದಲ್ಲಿ ಬಿಜೆಪಿಯಿದೆ.

ಪದ್ಮನಾಭ ರೆಡ್ಡಿ ಹಾಲೀ ವಿರೋಧ ಪಕ್ಷದ ನಾಯಕ

ಪದ್ಮನಾಭ ರೆಡ್ಡಿ ಹಾಲೀ ವಿರೋಧ ಪಕ್ಷದ ನಾಯಕ

ಪದ್ಮನಾಭ ರೆಡ್ಡಿ ಹಾಲೀ ವಿರೋಧ ಪಕ್ಷದ ನಾಯಕ
ವಾರ್ಡ್ ಸಂಖ್ಯೆ: 29
ವಾರ್ಡ್: ಕಾಚರಕನಹಳ್ಳಿ
ವಿಧಾನಸಭಾ ವ್ಯಾಪ್ತಿ: ಸರ್ವಜ್ಞ ನಗರ
ಕ್ಷೇತ್ರದ ಶಾಸಕರು: ಕೆ.ಜೆ.ಜಾರ್ಜ್

ಎಲ್ ಶ್ರೀನಿವಾಸ್, ಮಾಜೀ ಉಪಮೇಯರ್

ಎಲ್ ಶ್ರೀನಿವಾಸ್, ಮಾಜೀ ಉಪಮೇಯರ್

ಎಲ್ ಶ್ರೀನಿವಾಸ್, ಮಾಜೀ ಉಪಮೇಯರ್
ವಾರ್ಡ್ ಸಂಖ್ಯೆ: 181
ವಾರ್ಡ್: ಕುಮಾರಸ್ವಾಮಿ ಲೇಔಟ್
ವಿಧಾನಸಭಾ ವ್ಯಾಪ್ತಿ: ಪದ್ಮನಾಭ ನಗರ
ಕ್ಷೇತ್ರದ ಶಾಸಕರು: ಆರ್.ಅಶೋಕ್

ಉಮೇಶ್ ಶೆಟ್ಟಿ

ಉಮೇಶ್ ಶೆಟ್ಟಿ

ಉಮೇಶ್ ಶೆಟ್ಟಿ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ
ವಾರ್ಡ್ ಸಂಖ್ಯೆ: 104
ವಾರ್ಡ್: ಗೋವಿಂದರಾಜ ನಗರ
ವಿಧಾನಸಭಾ ವ್ಯಾಪ್ತಿ: ಗೋವಿಂದರಾಜ ನಗರ
ಕ್ಷೇತ್ರದ ಶಾಸಕರು: ವಿ.ಸೋಮಣ್ಣ

ಮಂಜುನಾಥ್ ರಾಜ್

ಮಂಜುನಾಥ್ ರಾಜ್

ಮಂಜುನಾಥ್ ರಾಜ್
ವಾರ್ಡ್ ಸಂಖ್ಯೆ: 65
ವಾರ್ಡ್: ಕಾಡುಮಲ್ಲೇಶ್ವರ
ವಿಧಾನಸಭಾ ವ್ಯಾಪ್ತಿ: ಮಲ್ಲೇಶ್ವರಂ
ಕ್ಷೇತ್ರದ ಶಾಸಕರು: ಡಾ. ಅಶ್ವಥ್ ನಾರಾಯಣ್

English summary
Much Awaited BBMP Election Will Be Held On Sep 27. Four BJP Corporators Trying For The Mayor Post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X