ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಅಕ್ಟೋಬರ್‍‌ನಲ್ಲೇ ಬಿಬಿಎಂಪಿ ಚುನಾವಣೆ? ಇಂದು ರಾಜ್ಯ ಚುನಾವಣಾ ಆಯೋಗ ಮಹತ್ವದ ಸಭೆ

|
Google Oneindia Kannada News

ಬೆಂಗಳೂರು, ಆಗಸ್ಟ್ 20: ಬಿಬಿಎಂಪಿ ಚುನಾವಣೆಗೆ ಸನ್ನದ್ದವಾಗಲು ರಾಜ್ಯ ಚುನಾವಣಾ ಆಯೋಗ ಪೂರ್ವಭಾವಿ ಸಿದ್ದತಾ ಸಭೆಯನ್ನು ಇಂದು(ಆಗಸ್ಟ್ 20) 3 ಗಂಟೆಗೆ ತಮ್ಮ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿದೆ. ಆಗಸ್ಟ್ 22ಕ್ಕೆ ಮತದಾರ ನೊಂದಣಿ ಕಾರ್ಯ ಪೂರ್ಣವಾಗಲಿದ್ದು ಆಗಸ್ಟ್ 22ರ ಬಳಿಕ ಚುನಾವಣ ಪ್ರಕ್ರಿಯೆಯೂ ಆರಂಭವಾಗುವುದರಿಂದ ಪೂರ್ವಭಾವಿ ಸಭೆ ಮಹತ್ವದ್ದಾಗಿದೆ.

ಚುನಾವಣಾ ಆಯೋಗ ಕರೆದಿರುವ ಮಹತ್ವದ ಸಭೆಯಲ್ಲಿ ಅಕ್ಟೋಬರ್‍‌ ವೇಳೆಗೆ ಚುನಾವಣೆಯನ್ನು ನಡೆಸಲು ಮಾಡಬೇಕಾದ ಸಿದ್ದತೆ ಬಗ್ಗೆ ಚರ್ಚೆ ಕುರಿತು ಚರ್ಚೆಯಾಗುವ ಸಾಧ್ಯತೆಗಳಿವೆ. ಇದರ ಜೊತೆ ಚುನಾವಣೆ ತಯಾರಿಗೆ ಬೇಕಾಗಿರುವ ಅಧಿಕಾರಿಗಳ ಪಟ್ಟಿಯನ್ನು ಶೀಘ್ರವೇ ಸಿದ್ದಪಡಿಸುವ ಸೂಚನೆ ನೀಡುವ ಸಾಧ್ಯತೆಗಳಿವೆ. ಇನ್ನು ಮತದಾರ ಪಟ್ಟಿ ಪರಿಷ್ಕರಣೆಗೆ ಆಗಸ್ಟ್ 22 ಕೊನೆಯ ದಿನಾಗಿರುವುದರಿಂದ ಈ ದಿನಾಂಕವನ್ನು ಮತ್ತೊಂದು ವಾರ ವಿಸ್ತರಿಸುವ ಸಾಧ್ಯತೆಗಳಿವೆ. ಈ ಎಲ್ಲಾ ವಿಚಾರಗಳು ಇಂದಿನ ಸಭೆಯಲ್ಲಿ ಚರ್ಚೆಯಲ್ಲಿ ನಡೆಯಲಿವೆ ಎನ್ನಲಾಗುತ್ತಿದೆ.

ಬಿಬಿಎಂಪಿ ಚುನಾವಣೆ ಮೇಲೆ ಯಾವಾಗ ಅನ್ನೋ ಪ್ರಶ್ನೆಗೆ ಅಡ್ಡ ಗೊಡೆ ಮೇಲೆ ದೀಪವಿಟ್ಟಂತೆ ಸುದ್ದಿಗಳು ಹಬ್ಬುತ್ತಿದ್ದವು. ವಾರ್ಡ್‌ ಪುನರ್ ವಿಂಗಡಣೆ ನೆಪವನ್ನು ಹಾಕವಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ ಖಡಕ್ ಆದೇಶಕ್ಕೆ ಬೆದರಿದ ಬಿಬಿಎಂಪಿ ಮತ್ತು ಸರ್ಕಾರ 198 ವಾರ್ಡ್‌ಗಳನ್ನು 243 ವಾರ್ಡ್‌ಗಳಾಗಿ ಮರು ವಿಂಗಡಣೆ ಮಾಡಿದ್ದರು. ಇದಾದ ಬಳಿಕ ವಾರ್ಡ್‌ ಮೀಸಲಾತಿಯ ಗೊಂದಲ ಸೃಷ್ಟಿಯಾಗಿತ್ತು. ಯಾವುದೇ ಆಕ್ಷೇಪಣೆಗಳಿಗೆ ಸೊಪ್ಪು ಹಾಕದ ನಗರಾಭಿವೃದ್ದಿ ಇಲಾಖೆ ಮೊದಲು ಬಿಡುಗಡೆ ಮಾಡಿದ್ದ ಮೀಸಲಾತಿ ಪಟ್ಟಿಯನ್ನೇ ಅಂತಿಮಗೊಳಿಸಿತ್ತು.

BBMP Election on October ? State Election Commission Called a preliminary preparatory meeting on Today

ಹೈಕೋರ್ಟ್‌ನಲ್ಲಿ ಚುನಾವಣಾ ಆಯೋಗದ ಪರ ವಾದವನ್ನು ಮಂಡಿಸಿದ ಹಿರಿಯ ವಕೀಲರು ಚುನಾವಣೆ ಮತ್ತು ವಾರ್ಡ್‌ ಮರುವಿಂಗಡಣೆಗೆ ಸಂಬಂಧ ಮಧ್ಯಂತರ ಆದೇಶವನ್ನು ನಿರಾಕರಿಸಿದ್ದರು. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಶೀಘ್ರದಲ್ಲೇ ಚುನಾವಣೆ ನಡೆಸಲು ಚುನಾವಣಾ ಆಯೋಗವು ಸನ್ನದ್ದವಾಗಿದೆ.

BBMP Election on October ? State Election Commission Called a preliminary preparatory meeting on Today

ಇಂದು ಮಧ್ಯಾಹ್ನ ಚುನಾವಣಾ ಆಯೋಗದ ಪೂರ್ವಭಾವಿ ಸಭೆ:
ಬಿಬಿಎಂಪಿ ಚುನಾವಣೆಯ ಸಂಬಂಧ ಆಗಸ್ಟ್ 20ಕ್ಕೆ ಚುನಾವಣಾ ಆಯೋಗದ ಪೂರ್ವಭಾವಿ ಸಭೆಯನ್ನು ಕರೆದಿದೆ. ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ 2022ರ ಪೂರ್ವಭಾವಿ ಸಿದ್ದತೆಗಳ ಬಗ್ಗೆ ಚರ್ಚಿಸಲು ಆಯುಕ್ತರು, ರಾಜ್ಯ ಚುನಾವಣಾ ಆಯೋಗ ಆ.20 ರಂದು ಅಪರಾಹ್ನ 03.30ಕ್ಕೆ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸಭೆಯನ್ನು ನಡೆಸಲಿದ್ದು ತಪ್ಪದೇ ಹಾಜರಾಗಬೇಂದು ಆದೇಶ ಹೊರಡಿಸಿದೆ.

BBMP Election on October ? State Election Commission Called a preliminary preparatory meeting on Today

ಯಾರು ಯಾರು ಭಾಗಿ?
ಬಿಬಿಎಂಪಿ ಚುನಾವಣೆಯ ಸಂಬಂಧ ಚುನಾವಣಾ ಆಯೋಗದ ಪೂರ್ವಭಾವಿ ಸಭೆಗೆ ಬಿಬಿಎಂಪಿ ಮುಖ್ಯ ಆಯುಕ್ತರು, ವಾರ್ತಾ ಇಲಾಖೆಯ ಆಯುಕ್ತರು, ಬೆಂಗಳೂರು ಜಿಲ್ಲಾಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು( ಆಡಳಿತ, ದಕ್ಷಿಣ ಮತ್ತು ಮಹದೇವಪುರ) ಬಿಬಿಎಂಪಿ , ಬಿಬಿಎಂಪಿಯ ಎಲ್ಲಾ ವಲಯದ ಆಯುಕ್ತರನ್ನು ಸಭೆಗೆ ಆಹ್ವಾನಿಸಲಾಗಿದೆ.

Recommended Video

Siddaramaiah ವಿಚಾರವಾಗಿ ಕೊಡಗಿನಲ್ಲಿ Mantar Gowda ಖಡಕ್ ಮಾತು | *Karnataka | OneIndia Kannada

English summary
The State Election Commission has called a preliminary preparatory meeting at its office on August 20 to prepare for the BBMP elections. The preliminary meeting is important as the voter registration will be completed on August 22 and the election process will begin after August 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X