ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಇನ್ನೆರಡು ದಿನ ಮದ್ಯ ಮಾರಾಟ ಇಲ್ಲ

|
Google Oneindia Kannada News

ಬೆಂಗಳೂರು, ಆಗಸ್ಟ್. 20: ಶನಿವಾರ ಆಗಸ್ಟ್ 22 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಗುರುವಾರ ಸಂಜೆ 5.30 ರಿಂದ ಶನಿವಾರ (22) ಮಧ್ಯರಾತ್ರಿಯವರೆಗೆ ನಗರದ ಎಲ್ಲ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ಕ್ಲಬ್‌ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಗುರುವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ.[ಬಿಬಿಎಂಪಿ ಚುನಾವಣೆ, ಅಂಕಿ-ಸಂಖ್ಯೆಗಳ ವಿವರ]

BBMP Election: No sale of liquor on August 21, 22, 2015

ಆದರೆ ಕಳೆದ ವಾರದಿಂದ ಮದ್ಯ ಮಾರಾಟದಲ್ಲಿ ತೀವ್ರ ತೆರನಾದ ಇಳಿಕೆ ಕಂಡುಬಂದಿದೆ. ಬಾರ್ ಮತ್ತು ಎಂಆರ್ ಪಿ ಔಟ್ ಲೆಟ್ ಗಳಲ್ಲೂ ಸಹ ವ್ಯಾಪಾರ ಕಡಿಮೆಯಾಗಿದೆ. ವಾರಾಂತ್ಯದಲ್ಲೂ ವ್ಯಾಪಾರ ಕಡಿಮೆಯಾಗಿದ್ದಕ್ಕೆ ಕಾರಣ ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾರೆ ಇಟ್ಟಮಡುವಿನ ಬಾರ್ ಮಾಲೀಕ ಸುಖೇಶ್.[ಈ ಐಡಿ ಕಾರ್ಡ್‌ಗಳನ್ನು ತೋರಿಸಿ ಮತದಾನ ಮಾಡಬಹುದು]

ಪ್ರಚಾರದ ಭರಾಟೆಯೂ ಕೊನೆಗೊಳ್ಳಲಿದ್ದು ಇನ್ನು ಮುಂದೆ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಮೊರೆ ಹೋಗಲಿದ್ದಾರೆ. ಅಂತಿಮ ಹಂತದ ಮನವೊಲಿಕೆ ಕಸರತ್ತು ನಡೆಸಲಿದ್ದಾರೆ.

English summary
Bengaluru city police have imposed a ban on the sale of liquor in the city for two days in order to facilitate peaceful conduct of BBMP polls on August 22. The order comes into effect till midnight of August 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X