ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯ 243 ವಾರ್ಡ್‌ಗೆ ಚುನಾವಣೆ ಯಾವಾಗ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಯಾವಾಗ?. 2020ರ ಸೆಪ್ಟೆಂಬರ್‌ನಲ್ಲಿ ಕೌನ್ಸಿಲ್ ಅವಧಿ ಪೂರ್ಣಗೊಂಡ ಬಳಿಕ ಪಾಲಿಕೆಯ ಅಧಿಕಾರವನ್ನು ಅಧಿಕಾರಿಗಳೇ ನಡೆಸುತ್ತಿದ್ದಾರೆ.

ಬಿಬಿಎಂಪಿ ಚುನಾವಣೆಯನ್ನು ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ಬಿಬಿಎಂಪಿ ಸದಸ್ಯರಾದ ಎಂ. ಶಿವರಾಜು ಮತ್ತು ಅಬ್ದುಲ್ ವಾಜೀದ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಗೆ ದಿನ ನಿಗದಿ ಮಾಡುವಂತೆ ಕೋರ್ಟ್‌ ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದೆ.

ಬಿಬಿಎಂಪಿ ಮೀಸಲಾತಿ ಪಟ್ಟಿ; ಮಾಜಿ ಮೇಯರ್‌ಗಳ ಕೈ ತಪ್ಪಿದ ವಾರ್ಡ್! ಬಿಬಿಎಂಪಿ ಮೀಸಲಾತಿ ಪಟ್ಟಿ; ಮಾಜಿ ಮೇಯರ್‌ಗಳ ಕೈ ತಪ್ಪಿದ ವಾರ್ಡ್!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 198 ವಾರ್ಡ್‌ಗಳನ್ನು ಹೊಂದಿತ್ತು. ಈಗ 243 ವಾರ್ಡ್‌ಗಳಾಗಿ ಪುನರ್ ವಿಂಗಡನೆ ಮಾಡಲಾಗುತ್ತಿದೆ. ಹೊಸ ವಾರ್ಡ್‌ಗಳ ಗಡಿಯನ್ನು ಗುರಿತಿಸಲು ಕರ್ನಾಟಕ ಸರ್ಕಾರ 6 ತಿಂಗಳ ಕಾಲಾವಕಾಶ ನೀಡಿತ್ತು.

 ಬಾಲ್ಕನಿಗಳ ಮಾರ್ಪಾಡು ವಿರುದ್ಧ ಜನರಿಗೆ ಬಿಬಿಎಂಪಿ ಎಚ್ಚರಿಕೆ ಬಾಲ್ಕನಿಗಳ ಮಾರ್ಪಾಡು ವಿರುದ್ಧ ಜನರಿಗೆ ಬಿಬಿಎಂಪಿ ಎಚ್ಚರಿಕೆ

 BBMP Election For 243 Wards In 2022 March Or April

ಹೊಸ ವಾರ್ಡ್‌ಗಳ ಗುರುತಿಸುವಿಕೆ ಮತ್ತು ವಾರ್ಡ್ ಪುನರ್ ವಿಂಗಡನೆ ಪ್ರತಿಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಚುನಾವಣೆ ತಡವಾಗುತ್ತಲೇ ಇದೆ. ಇದರಿಂದಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಚುನಾವಣೆ ನಡೆಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.

 ಬೆಂಗಳೂರು: ಮುಚ್ಚಬೇಕಾದ ರಸ್ತೆಗುಂಡಿಗಳೆಷ್ಟು?, ಬಿಬಿಎಂಪಿ ಏನು ಹೇಳುತ್ತೆ? ಬೆಂಗಳೂರು: ಮುಚ್ಚಬೇಕಾದ ರಸ್ತೆಗುಂಡಿಗಳೆಷ್ಟು?, ಬಿಬಿಎಂಪಿ ಏನು ಹೇಳುತ್ತೆ?

2007ರಲ್ಲಿ ಚುನಾವಣೆ ನಡೆಸದೇ ಜನಪ್ರತಿನಿಧಿಗಳು ಇಲ್ಲದೇ ಮೂರು ವರ್ಷ ಅಧಿಕಾರಿಗಳು ಆಡಳಿತ ನಡೆಸಿದ್ದರು. ಈಗಲೂ ಹಾಗೆಯೇ ಆಗುವುದು ಬೇಡ, ವಾರ್ಡ್ ವಿಂಗಡನೆ ಬೇಗ ನಡೆಸಿ ಚುನಾವಣೆ ನಡೆಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಅಧಿಕಾರಿಗಳ ಆಡಳಿತ; 2020ರ ಸೆಪ್ಟೆಂಬರ್ 10ರಂದು ಪಾಲಿಕೆಯ ಕೌನ್ಸಿಲ್ ಅವಧಿ ಪೂರ್ಣಗೊಂಡಿತು. ಒಂದು ವರ್ಷದಿಂದ ಪಾಲಿಕೆಯಲ್ಲಿ ಜನಪ್ರತಿನಿಧಿಗಳೇ ಇಲ್ಲ. ಅಧಿಕಾರಿಗಳೇ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ.

ಭಾನವಾರ ಮಳೆ ಸುರಿದಾಗ ನಗರದ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಬಿಬಿಎಂಪಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೂ ಯಾರು ಸ್ಪಂದಿಸಿಲ್ಲ ಎಂದು ಜನರು ಆರೋಪಿಸಿದರು.

ಅಧಿಕಾರಿಗಳು ಮಳೆಗಾಲ ಎದುರಿಸಲು ಸರಿಯಾದ ತಯಾರಿ ಮಾಡಿಕೊಂಡಿರಲಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ಬಿಬಿಎಂಪಿ ಮಾಜಿ ಸದಸ್ಯರು ದೂರಿದ್ದಾರೆ. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಡಲ್ ಅಫೀಸರ್‌ಗಳಿ ಸಿಗಲ್ಲ; ಬಿಬಿಎಂಪಿ ಆಡಳಿತ ಅಧಿಕಾರಿಗಳ ಕೈಯಲ್ಲಿ ಇದೆ. ಪ್ರತಿ ವಾರ್ಡ್‌ಗೆ ಒಬ್ಬರು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ ಬಹುತೇಕ ನೋಡೆಲ್ ಅಧಿಕಾರಿಗಳು ಕರೆ ಮಾಡಿದರೆ ಸ್ವೀಕಾರ ಮಾಡುವುದಿಲ್ಲ, ಕೈ ಗೆ ಸಿಗುವುದಿಲ್ಲ ಎಂಬ ಆರೋಪವಿದೆ.

ವಾರ್ಡ್‌ ಪುನರ್ ವಿಂಗಡನೆ ಪ್ರಕ್ರಿಯೆ ಪೂರ್ಣಗೊಂಡು, ಮತದಾರರ ಪಟ್ಟಿ ತಯಾರಾಗಿ, ವಾರ್ಡ್‌ಗಳಿಗೆ ಹೊಸ ಮೀಸಲಾತಿ ಪಟ್ಟಿ ಪ್ರಕಟಗೊಂಡ ಬಳಿಕ ಚುನಾವಣೆ ನಡೆಯಲಿದೆ. 2022ರ ಮಾರ್ಚ್ ಅಥವ ಏಪ್ರಿಲ್‌ ತಿಂಗಳಿನಲ್ಲಿ ಚುನಾವಣೆ ನಡೆಯಬಹುದು ಎಂದು ಅಂದಾಜಿಸಲಾಗಿದೆ.

ಸರ್ಕಾರದ ಆದೇಶವಾಗಿದೆ; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಹೆಚ್ಚಿಸಿ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಹೀಗಾಗಿ ಶೀಘ್ರವೇ ವಾರ್ಡ್‌ಗಳ ಪುನರ್ ವಿಂಗಡನೆ ಪ್ರಕ್ರಿಯೆ ಪೂರ್ಣಗೊಂಡು ಚುನಾವಣೆ ನಡೆಯಬೇಕಿದೆ.

ಕರ್ನಾಟಕ ಮಹಾನಗರ ಪಾಲಿಕೆ ಅಧಿನಿಯಮ -1976ರಂತೆ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ವಾರ್ಡ್‌ಗಳ ಪುನರ್ ವಿಂಗಡನೆಗೆ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ವಾರ್ಡ್ ಪುನರ್ ವಿಂಗಡನಾ ಸಮಿತಿಯನ್ನು ರಚನೆ ಮಾಡಲಾಗಿದೆ.

ಬಿಬಿಎಂಪಿ ಆಯುಕ್ತರು ಸಮಿತಿಯ ಅಧ್ಯಕ್ಷರು. ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಬಿಬಿಎಂಪಿ ವಿಶೇಷ (ಕಂದಾಯ ಆಯುಕ್ತರು) ಈ ಸಮಿತಿಯಲ್ಲಿದ್ದಾರೆ. ವಾರ್ಡ್ ಪುನರ್ ವಿಂಗಡನೆ ಮಾಡಲು ಸರ್ಕಾರ 6 ತಿಂಗಳ ಅವಧಿಯನ್ನು ಸಮಿತಿಗೆ ನೀಡಿದೆ.

Recommended Video

KL Rahul ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

ಕರ್ನಾಟಕ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮಾಡಲು ಶಾಸಕ ಎಸ್. ರಘು ಅಧ್ಯಕ್ಷತೆಯಲ್ಲಿ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಯನ್ನು ರಚನೆ ಮಾಡಿತ್ತು. ಸಮಿತಿ 198 ವಾರ್ಡ್‌ಗಳನ್ನು 250 ವಾರ್ಡ್‌ಗಳಿಗೆ ಹೆಚ್ಚಿಸಬಹುದು ಎಂದು ವರದಿ ನೀಡಿತ್ತು.

English summary
Bruhat Bengaluru Mahanagara Palike (BBMP) council's term ended in September 10, 2020. BBMP ward increasing to 243 from 198. Elections may held for 243 ward in 2022 March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X