ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ- ಜನಾಗ್ರಹ ಸಮೀಕ್ಷೆಯಲ್ಲಿ ಬೆಂಗಳೂರಿನ ಜನ ಕೊಟ್ಟ ಉತ್ತರವೇನು?

|
Google Oneindia Kannada News

ಬೆಂಗಳೂರು, ಜೂನ್ 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಸಮೀಪಿಸುತ್ತಿದೆ. ಬಿಬಿಎಂಪಿ ಚುನಾವಣೆಯಲ್ಲಿ ಮತದಾರರ ಚಿತ್ತ ಯಾವ ಕಡೆಯಿದೆ. ಯಾವ ಪಕ್ಷ ಅಥವಾ ಜನಪ್ರತಿನಿಧಿ ಕಡೆಗೆ ಒಲವನ್ನು ಹೊಂದಿದ್ದಾನೆ. ಹೊಸ ಮತದಾರರು ಗಮನವೇನು ಎನ್ನುವುದರ ಬಗ್ಗೆ ಜನಾಗ್ರಹ ಸೆಂಟರ್ ಫಾರ್ ಸಿಟಿಜನ್ ಶಿಪ್ ಆಂಡ್ ಡೆಮಾಕ್ರಸಿ ಸಂಸ್ಥೆಯು ಕೇಂದ್ರ ನಗರ ರಾಜಕೀಯ ಸಮೀಕ್ಷೆಯನ್ನು ನಡೆಸಿದೆ.

ಬಿಬಿಎಂಪಿ ಚುನಾವಣೆ ಸಂಬಂಧ ಜನಾಗ್ರಹ ಸೆಂಟರ್ ಫಾರ್ ಸಿಟಿಜನ್ ಶಿಪ್ ಆಂಡ್ ಡೆಮಾಕ್ರಸಿ ಸಂಸ್ಥೆಯು ಕೇಂದ್ರ ನಗರ ರಾಜಕೀಯ ಸಮೀಕ್ಷೆಯನ್ನು ನಡೆಸಿದೆ. ಇದರ ಭಾಗವಾಗಿ ಸ್ಥಳೀಯ ಆಡಳಿತ, ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳು, ಮುಂಬರುವ ಬಿಬಿಎಂಪಿ ಚುನಾವಣೆಗಳಿಂದ ಮತದಾರರ ನಿರೀಕ್ಷೆ, ನಗರ ಬಜೆಟ್ ಮತ್ತು ಖರ್ಚಿನ ಬಗ್ಗೆ ಸಾರ್ವಜನಿಕ ಅರಿವಿನ ಮಟ್ಟ, ನಗರದ ಸಮಸ್ಯೆಗಳು, ಕೌನ್ಸಿಲರ್ಗಳೊಂದಿಗೆ ನಾಗರಿಕರ ಸಂವಹನ ಹಾಗೂ ನಗರ ಆಡಳಿತ ಮತ್ತು ರಾಜಕೀಯ ರಚನೆಗಳ ಬಗ್ಗೆ ನಾಗರಿಕರ ಮೂಲಭೂತ ಜ್ಞಾನದ ಬಗ್ಗೆ ಸಮೀಕ್ಷೆ ನಡೆಸಲಾಗಿದೆ.

ಶ್ರೇಣೀಕೃತ ಯಾದೃಚ್ಛಿಕ ಮಾದರಿ ವಿಧಾನವನ್ನು ಬಳಸಿ ನಡೆಸಲಾದ ಈ ಸಮೀಕ್ಷೆಯಲ್ಲಿ, ಬೆಂಗಳೂರಿನ ಎಂಟು ವಲಯಗಳಲ್ಲಿ ಇರುವ 27 ವಾರ್ಡ್ ಗಳ 503 ನಾಗರಿಕರು ಭಾಗವಹಿಸಿದ್ದಾರೆ. 16ನೇ ಡಿಸೆಂಬರ್ 2021 ರಿಂದ 2ನೇ ಜನವರಿ 2022ರ ವರೆಗೆ ನಡೆಸಲಾದ ಈ ಸಮೀಕ್ಷೆಯಲ್ಲಿ ವಿವಿಧ ವಯೋಮಿತಿ ಮತ್ತು ಆರ್ಥಿಕ ಹಾಗು ಸಾಮಾಜಿಕ ಹಿನ್ನಲೆಗೆ ಸೇರಿದ ವ್ಯಕ್ತಿಗಳು ಭಾಗವಹಿಸಿದ್ದಾರೆ. ಜನಾಗ್ರಹ ನಗರ ರಾಜಕೀಯ ಸಮೀಕ್ಷೆ - ಬೆಂಗಳೂರು 2022 ರ ವರದಿಯನ್ನು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ, 21ನೇ ಜನವರಿಯಂದು ಬಿಡುಗಡೆ ಮಾಡಲಾಯಿತು.

ಮೊದಲ ಭಾರಿ ಮತದಾನ ಮಾಡಲು ಯುವಕರು ಉತ್ಸುಕ

ಮೊದಲ ಭಾರಿ ಮತದಾನ ಮಾಡಲು ಯುವಕರು ಉತ್ಸುಕ

ಬೆಂಗಳೂರಿನಲ್ಲಿರುವ - ಶೇಕಡಾ 86 ರಷ್ಟು ಪ್ರಥಮ ಬಾರಿಯ ಮತದಾರರು - ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲು ಕಾತರರಾಗಿದ್ದಾರೆ. ಅವರೆಲ್ಲರ ಮುಖ್ಯ ಕಾಳಜಿಯು ಹವಾಮಾನ ಬದಲಾವಣೆಯ ನಿಯಂತ್ರಣವಾಗಿದ್ದು - ಶೇಕಡಾ 88 ರಷ್ಟು ಪ್ರಥಮ ಮತದಾರರ ಪ್ರಕಾರ ಪ್ರಬಲ ಸ್ಥಳೀಯ ಆಡಳಿತ ಮತ್ತು ಬಲಿಷ್ಠ ಬಿಬಿಎಂಪಿಯು ಬೆಂಗಳೂರಿನ ಪ್ರಜ್ವಲ ಭವಿಷ್ಯಕ್ಕೆ ಬೇಕಾದ ಮುಖ್ಯ ಅಂಶಗಳಾಗಿವೆ.

ಬಿಬಿಎಂಪಿ ಚುನಾವಣೆಗಾಗಿ ಜನರ ಕಾತರ

ಬಿಬಿಎಂಪಿ ಚುನಾವಣೆಗಾಗಿ ಜನರ ಕಾತರ

ಜನಾಗ್ರಹ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿಯವರ ಪ್ರಕಾರ, "ಬೆಂಗಳೂರಿನ ಬಹುತೇಕ ಮತದಾರರು ಬಿಬಿಎಂಪಿ ಚುನಾವಣೆಗಾಗಿ ಕಾಯುತ್ತಿದ್ದಾರೆ. ನಾವು ಬಿಬಿಎಂಪಿಯ ಬಗ್ಗೆ ಜನರಿಗೆ - ಅದರಲ್ಲೂ ಪ್ರಥಮ ಬಾರಿಯ ಮತದಾರರಿಗೆ- ಎಷ್ಟು ಅರಿವಿದೆ ಎಂದು ತಿಳಿಯಲು ಸಮೀಕ್ಷೆ ನಡೆಸಿದ್ದೇವೆ. ವರದಿಯ ಪ್ರಕಾರ ಬಿಬಿಎಂಪಿ, ವಾರ್ಡ್ ಕಾರ್ಪೊರೇಟರ್ಗಳು, ವಾರ್ಡ್ ಸಮಿತಿಗಳು ಇತ್ಯಾದಿಗಳ ಪಾತ್ರವನ್ನು ಕೆಲವೇ ಕೆಲವರು ಅರ್ಥೈಸಿಕೊಂಡಿದ್ದಾರೆ. ಆದರೆ, ಅವರೆಲ್ಲರ ಪ್ರಕಾರ ಬೆಂಗಳೂರಿಗರನ್ನು ಕಾಡುವ ಸಮಸ್ಯೆಯ ಆಧಾರದ ಮೇಲೆ ಸ್ಥಳೀಯ ಚುನಾವಣೆಯನ್ನು ನಡೆಸಬೇಕು. ನಮ್ಮ ನಗರವನ್ನು ಅಭಿವೃದ್ಧಿಪಡಿಸಲು ನಮ್ಮ ಸ್ಥಳೀಯ ಆಡಳಿತಾಂಗವನ್ನು ಬಲಪಡಿಸಬೇಕಾಗಿದೆ. ಇದು ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸುವುದರಿಂದ ಸಾಧ್ಯವಾಗುತ್ತದೆ. ನಮ್ಮ ನಗರಕ್ಕೆ ಸಧೃಡ ಭವಿಷ್ಯದ ಯೋಜನೆಯನ್ನು ಪ್ರಸ್ತುತಪಡಿಸಲು ಮತ್ತು ಅದರ ಆಧಾರದ ಮೇಲೆ ಮತಗಳನ್ನು ಕೇಳಲು ನಾವು ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇವೆ. ಮಾಧ್ಯಮದವರು ರಾಜ್ಯ ಮತ್ತು ರಾಷ್ಟೀಯ ಮಟ್ಟದ ಚುನಾವಣೆಗೆ ನೀಡುವ ಪ್ರಾಮುಖ್ಯತೆಯನ್ನು ಬಿಬಿಎಂಪಿ ಚುನಾವಣೆಗೂ ನೀಡಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ' ಎಂದು ತಿಳಿಸಿದರು.

ರಸ್ತೆ, ಕುಡಿಯವ ನೀರು, ಉತ್ತಮ ಪರಿಸರದ ಆದ್ಯತೆ

ರಸ್ತೆ, ಕುಡಿಯವ ನೀರು, ಉತ್ತಮ ಪರಿಸರದ ಆದ್ಯತೆ

ಜನಾಗ್ರಹದ ಸಪ್ನಾ ಕರೀಂ ಹೇಳುವಂತೆ, "ಬೆಂಗಳೂರಿನ ಬಹುತೇಕ ನಾಗರಿಕರಿಗೆ ಮತ್ತು ಮತದಾರರಿಗೆ ವಾರ್ಡ್ ಮಟ್ಟದ ಆಡಳಿತಾಂಗದ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ಆದರೆ, ಅವರ ಪ್ರಕಾರ ಒಳ್ಳೆಯ ಪಾದಚಾರಿ ಮಾರ್ಗ, ಸ್ವಚ್ಛ ಪರಿಸರ, ಸಶಕ್ತ ಸಂಚಾರಿ ವ್ಯವಸ್ಥೆ, ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಹವಾಮಾನ ಬದಲಾವಣೆಯಿಂದಾಗುತ್ತಿರುವ ದುಷ್ಪರಿಣಾಮಗಳ ನಿಯಂತ್ರಣ ಬಿಬಿಎಂಪಿ ಮತ್ತು ಹೊಸದಾಗಿ ರಚಿಸಲಾಗುವ ಸಭೆಯ ಕರ್ತವ್ಯವಾಗಿದೆ. ಕೋವಿಡ್ ಹರಡುತ್ತಿದ್ದ ಸಮಯದಲ್ಲಿ ವಾರ್ಡ್ ಸಮಿತಿಗಳ ಮೂಲಕ ಆಡಳಿತದ ವಿಕೇಂದ್ರೀಕರಣ ಮಾಡಿದ್ದರಿಂದ, ನಾಗರಿಕರಿಗೆ ಸರ್ಕಾರವನ್ನು ಸುಲಭವಾಗಿ ಸಂಪರ್ಕಿಸುವಂತೆ ಆಯಿತು ಎಂದು ಸಾಬೀತಾಗಿದೆ. ಇದು ಹಲವಾರು ವಾರ್ಡ್ ಗಳಲ್ಲಿ ನಡೆಯುತ್ತಿರುವ ಸಮಿತಿ ಸಭೆಗಳ ಮೂಲಕವೂ ತಿಳಿದುಬರುತ್ತಿದೆ. ಇದರ ಹೊರತಾಗಿಯೂ ಬಿಬಿಎಂಪಿ ವಾರ್ಡ್ ಸಮಿತಿಯನ್ನು ಬಲಪಡಿಸಲು ಶ್ರಮಪಡಬೇಕಾಗಿದೆ ಮತ್ತು ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸಬೇಕಾಗಿದೆ. ಇದರಿಂದ ನಾಗರಿಕ ಸಹಭಾಗಿತ್ವವನ್ನು ಉತ್ತೇಜಿಸಿ, ಅವರ ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಭವಿಷ್ಯ 5 ವರ್ಷ ನಿರ್ಧಾರ ಮತದಾರನ ಕೈಬೆರಳಿನಲ್ಲಿ

ಭವಿಷ್ಯ 5 ವರ್ಷ ನಿರ್ಧಾರ ಮತದಾರನ ಕೈಬೆರಳಿನಲ್ಲಿ

ಜನಾಗ್ರಹ ಸಂಸ್ಥೆಯಲ್ಲಿ ಕರ್ನಾಟಕ ನಾಗರಿಕ ಸಹಭಾಗಿತ್ವದ ಮುಖ್ಯಸ್ಥರಾಗಿರುವ ಮಂಜುನಾಥ ಎಚ್ ಎಲ್ ರವರ ಪ್ರಕಾರ "ಬಿಬಿಎಂಪಿ ಚುನಾವಣೆಯು ಮುಂಬರುವ ಐದು ವರ್ಷಗಳ ಮೇಲೆ ಪರಿಣಾಮ ಬೀರಲಿದೆ. ನಮ್ಮ ಸಮೀಕ್ಷೆಯ ವರದಿಯು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಗಮನ ನೀಡಬೇಕಾದ ವಿಷಯಗಳನ್ನು ಎತ್ತಿ ತೋರಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ಬೆಂಗಳೂರು ವಿಶ್ವದಲ್ಲೇ ಒಂದೊಳ್ಳೆಯ ನಗರವಾಗಿದೆ. ಇದರಲ್ಲಿ ಆಡಳಿತ ನಡೆಸಲು ಸರಿಯಾದ ಅಭ್ಯರ್ಥಿಗಳನ್ನು ಚುನಾಯಿಸಿದರೆ, ನಮ್ಮ ನಗರದ ಹಲವಾರು ಸಮಸ್ಯೆಗಳನ್ನು ನಿವಾರಿಸಲು ನಾಗರಿಕರಿಗೆ ಬಲ ದೊರೆತಂತಾಗುತ್ತದೆ,' ಎಂದು ತಿಳಿಸಿದರು.

ಜನಾಗ್ರಹದ ಹೈಲೈಟ್ಸ್

ಜನಾಗ್ರಹದ ಹೈಲೈಟ್ಸ್

* ಬೆಂಗಳೂರಿನ ಶೇಕಡಾ 83ರಷ್ಟು ಮತದಾರರ ಪ್ರಕಾರ ಬಿಬಿಎಂಪಿ ಚುನಾವಣೆಯು ನಗರವು ಎದುರಿಸುತ್ತಿರುವ ಸಮಸ್ಯೆಗಳ ಆಧಾರದ ಮೇಲೆ ನಡೆಯಬೇಕೆ ಹೊರತು ಬೇರೆ ವಿಷಯಗಳ ಮೇಲಲ್ಲ

* ಶೇಕಡಾ 17ರಷ್ಟು ನಾಗರಿಕರಿಗೆ ಮಾತ್ರ ಮಾಜಿ ಮೇಯರ್ ಹೆಸರು ತಿಳಿದಿದೆ. ಇದಕ್ಕೆ ಹೋಲಿಸಿದ್ದಲ್ಲಿ ಶೇಕಡಾ 97ರಷ್ಟು ಮಂದಿಗೆ ಪ್ರಧಾನ ಮಂತ್ರಿಯ ಹೆಸರು ತಿಳಿದಿದ್ದು, ಶೇಕಡಾ 83ರಷ್ಟು ಮಂದಿಗೆ ರಾಜ್ಯದ ಮುಖ್ಯಮಂತ್ರಿಯ ಹೆಸರು ತಿಳಿದಿದೆ.

* ಶೇಕಡಾ 88ರಷ್ಟು ಮಂದಿಯು ತಮ್ಮ ವಾರ್ಡ್ ಕೌನ್ಸಿಲರ್ ಗಳನ್ನು ಈ ವರೆಗೆ ಭೇಟಿಯಾಗಿಲ್ಲ. ಶೇಕಡಾ 87 ರಷ್ಟು ಜನರಿಗೆ ವಾರ್ಡ್ ಸಮಿತಿಗಳ ಬಗ್ಗೆ ತಿಳಿದಿಲ್ಲ. ಶೇಕಡಾ 95ರಷ್ಟು ಮಂದಿ ಎಂದೂ ವಾರ್ಡ್ ಸಮಿತಿ ಸಭೆಗೆ ಹೋಗಿಲ್ಲ. ಶೇಕಡಾ 22ರಷ್ಟು ಮಂದಿ ನೇರವಾಗಿ ಎಂಎಲ್ ಎ ಬಳಿ ತೆರಳಿ ತಮ್ಮ ತೊಂದರೆಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಹೋಲಿಸಿದ್ದಲ್ಲಿ ಕೇವಲ 12 ಶೇಕಡಾವಾರಿನಷ್ಟು ಜನ ಮಾತ್ರ ತಮ್ಮ ಸ್ಥಳೀಯ ಕೌನ್ಸಿಲರ್ ಗಳನ್ನು ಭೇಟಿಯಾಗಿದ್ದಾರೆ.

* ಶೇಕಡಾ 94ರಷ್ಟು ಜನರಿಗೆ 2021-22 ಆರ್ಥಿಕ ಸಾಲಿನಲ್ಲಿ ಬಿಬಿಎಂಪಿ ವಾರ್ಡ್ ಗಳಿಗೆ ನೀಡಿದ 60 ಲಕ್ಷ ರೂಪಾಯಿಗಳ ಬಗ್ಗೆ ತಿಳಿದಿಲ್ಲ

* ಬೆಂಗಳೂರಿನ ಶೇಕಡಾ 87ರಷ್ಟು ಮತದಾರರ ಪ್ರಕಾರ ಪ್ರಬಲ ಕೌನ್ಸಿಲರ್ ಗಳಿಂದ ತಮ್ಮ ವಾರ್ಡ್ಗಳಿಗೆ ಉತ್ತಮ ಸೇವೆ ಒದಗಿಸಿ ಮೂಲಸೌಕರ್ಯದಲ್ಲಿ ಸುಧಾರಣೆಯನ್ನು ತರಲು ಸಾಧ್ಯ

* ಬೆಂಗಳೂರಿನ ಬಹುಪಾಲು ಮತದಾರರು (82%) ಬಿಬಿಎಂಪಿ ಮತ್ತು ಇತರ ಆಡಳಿತಾಂಗಗಳ ನಾಗರಿಕ ಸಂಸ್ಥೆಗಳಾದ ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್ ಬಿ, ಬಿಎಂಟಿಸಿ ನಡುವಿನ ಸಮನ್ವಯವು ಉತ್ತಮ ನಗರಾಡಳಿತಕ್ಕೆ ದಾರಿ ಮಾಡಿ ಕೊಡುತ್ತದೆ ಎಂದು ನಂಬಿದ್ದಾರೆ

* ಬೆಂಗಳೂರಿನ ಶೇಕಡಾ 23ರಷ್ಟು ಮತದಾರರ ಸಮಸ್ಯೆಯು ಫುಟ್ಪಾತ್ ಗೆ ಸಂಬಂಧಿಸಿದ್ದು, 20 ಪ್ರತಿಶತ ಜನ ಕಸ ನಿರ್ವಹಣೆ ತಮ್ಮ ಸಮಸ್ಯೆಯೆಂದು ಸೂಚಿಸಿದ್ದು, 16 ಶೇಕಡಾವಾರಿನಷ್ಟು ಮಂದಿ ಸಂಚಾರ ಮತ್ತು 15 ಪ್ರತಿಶತ ಮಂದಿ ಸ್ವಚ್ಛ ಕುಡಿಯುವ ನೀರಿನ ಕೊರತೆಯನ್ನು ತಮ್ಮ ಮುಖ್ಯ ಸಮಸ್ಯೆಯನ್ನಾಗಿ ಎತ್ತಿಹಿಡಿದಿದ್ದಾರೆ

* ಬೆಂಗಳೂರಿನ 89% ಮತದಾರರಿಗೆ ಪರಿಸರ ಸಮಸ್ಯೆಗಳು ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಕಾಳಜಿ ಇದ್ದು, ಕೇವಲ 25% ಮತದಾರರು ಕೌನ್ಸಿಲರ್‌ಗಳು ಪರಿಸರ ಸಮಸ್ಯೆಗಳಿಗೆ ಗಮನಾರ್ಹ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂದು ಭಾವಿಸುತ್ತಾರೆ.

Recommended Video

3 ಗಂಟೆ Operation!! Diganth spinal card ಗೆ ಏನಾಯ್ತು?? | *Health | OneIndia Kannada

English summary
BBMP Election 2022: City political servey done by Janagraha center for citizenship and democracy agency, New voters intested to voting on local problem issues , ಬಿಬಿಎಂಪಿ ಚುನಾವಣೆ 2022:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X