ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣಾ ತಯಾರಿಗಾಗಿ ಎಎಪಿ ಅಧ್ಯಕ್ಷರ ನೇಮಕ

|
Google Oneindia Kannada News

ಬೆಂಗಳೂರು, ಜನವರಿ 14: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 198 ವಾರ್ಡ್ ಗಳಲ್ಲಿ 2020ರ ಬಿಬಿಎಂಪಿ ಚುನಾವಣೆಗೆ ಪಕ್ಷವು ಸ್ಪರ್ಧಿಸುತ್ತಿರುವುದು ಈಗಾಗಲೇ ನಿಮಗೆ ತಿಳಿದಿದೆ. ಸೃಜನಶೀಲತೆಯೊಂದಿಗೆ, ನವೀನ ವಿಧಾನಗಳನ್ನು ಅಳವಡಿಸಿಕೊಂಡು 2025ರ ವೇಳೆಗೆ ಬೆಂಗಳೂರು ನಗರವನ್ನು ವಿಶ್ವದರ್ಜೆಯ ಹೊಸ ಬೆಂಗಳೂರು ಮಹಾನಗರವನ್ನಾಗಿ ಅಭಿವೃದ್ಧಿ ಪಡಿಸುವುದಾಗಿ ಆಮ್ ಆದ್ಮಿ ಪಕ್ಷವು ಸಂಕಲ್ಪ ತೊಟ್ಟಿದೆ.

ಈಗಾಗಲೇ ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಜನಸಂಪರ್ಕ ಪಾದಯಾತ್ರೆ, ವಾರ್ಡ್ ಸಭೆಗಳು, ಮನೆ-ಮನೆ ಪ್ರಚಾರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಬೆಂಗಳೂರಿನ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಚುನಾವಣಾ ತಯಾರಿಯನ್ನು ಮತ್ತಷ್ಟು ಚುರುಕುಗೊಳಿಸಲು, ಜನರ ಸಮಸ್ಯೆಗಳನ್ನು ಆಲಿಸಲು, ಸ್ಥಳೀಯ ಕುಂದುಕೊರತೆಗಳ ಬಗ್ಗೆ ತಿಳಿಯಲು, ಜನಸಂಪರ್ಕ ಮತ್ತು ವಿಧಾನಸಭಾ ಕ್ಷೇತ್ರವಾರು ಯೋಜನೆಗಳನ್ನು ರೂಪಿಸಲು ಜನಪರ ಚಿಂತನೆಯೊಂದಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಉತ್ಸುಕಾಗಿರುವ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬಲ್ಲವರನ್ನು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಇತ್ತೀಚೆಗೆ ವಾರ್ಡ್ಗಳಲ್ಲಿ ಸ್ಪರ್ಧಿಸಲು ಸಮರ್ಥ, ಸೇವಾ ಮನೋಭಾವವುಳ್ಳ ಹಾಗೂ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾದ, ಜನಪರ ಕೆಲಸ ಮಾಡಲು ಆಸಕ್ತಿಯುಳ್ಳ ಚುನಾವಣಾ ಆಕಾಂಕ್ಷಿಗಳೊಂದಿಗೆ ಪಕ್ಷದ ಮುಖಂಡರು ಮೊದಲ ಹಂತದ ಸಂವಾದ ನಡೆಸಿ ಮತ್ತು ಅರ್ಜಿಗಳನ್ನು ಪರಿಶೀಲಿಸಿಲಿ ಮೊದಲ ಸುತ್ತಿನಲ್ಲಿ ಕೆಲವು ವಾರ್ಡ್‍ ಪ್ರಚಾರ ಉಸ್ತುರಿವಾರಿಗಳನ್ನು ಆಯ್ಕೆಮಾಡಿ ವಾರ್ಡ್‍ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

BBMP election 2020: AAP ward president for the preparation

ಪಕ್ಷದ ಅನೇಕ ನಿಷ್ಟಾವಂತ ಕಾಯಕರ್ತರು ಅರ್ಜಿ ಸಲ್ಲಿಸಿರುವುದಲ್ಲದೆ, ವಿವಿಧ ಸಾಮಾಜಿಕ ವರ್ಗಗಳ, ವಿವಿಧ ರಾಜಕೀಯ ಹಿನ್ನೆಲೆಯಿಂದ ಬಂದ ಅನೇಕರು ಆಮ್ ಆದ್ಮಿ ಪಕ್ಷದ ದೆಹಲಿಯ ಆಡಳಿತ ವೈಖರಿಯಿಂದ ಪ್ರೇರಿತರಾಗಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.

ಇತ್ತೀಚೆಗೆ ಹಲವಾರು ವಾರ್ಡಗಳಲ್ಲಿ ಅರ್ಜಿಗಳು ಬಂದಿದ್ದು ಪರಿಶೀಲನೆ ನಡೆಯುತ್ತಿದ್ದು, ಇನ್ನೆರಡು ವಾರಗಳಲ್ಲಿ 30 ಕ್ಕೂ ಹೆಚ್ಚು ವಾರ್ಡಗಳಿಗೆ ಎರಡನೇ ಸುತ್ತಿನಲ್ಲಿ ವಾರ್ಡ್ ಪ್ರಚಾರ ಉಸ್ತುವಾರಿ ನೇಮಕಾತಿ ಪ್ರಕ್ರಿಯೆ ಮುಗಿಯಲಿದೆ. ಅಂತೆಯೇ, ಮೂರನೇ ಸುತ್ತಿನ ನೇಮಕಾತಿ ಫೆಬ್ರವರಿಯಲ್ಲಿ ನಡೆಯಲಿದ್ದು, 100ಕ್ಕೂ ಹೆಚ್ಚು ವಾರ್ಡಗಳಿಗೆ ಅಧಿಕೃತ ಪ್ರಚಾರ ಉಸ್ತುವಾರಿಗಳನ್ನು ನೇಮಕ ಮಾಡುವ ನಿರೀಕ್ಷೆಯಿದೆ.

BBMP election 2020: AAP ward president for the preparation

ಆಮ್ ಆದ್ಮಿ ಪಕ್ಷದಿಂದ 2020ರ ಬಿಬಿಎಂಪಿ ಚುನಾವಣೆಗೆ ಈಗಾಗಲೇ ನೇಮಕವಾಗಿರುವ ಅಧಿಕೃತ ವಾರ್ಡ್ ಪ್ರಚಾರ ಉಸ್ತುವಾರಿಗಳು ಪಕ್ಷದ ಸಿದ್ಧಾಂತದೊಂದಿಗೆ ಅನುಗುಣವಾಗಿ, ಜನಪರ ಕಾಳಜಿಯೊಂದಿಗೆ ಬೆಂಗಳೂರನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಮುಂದಾಗಿದ್ದಾರೆ. ಇವರೆಲ್ಲರೂ ಜನಸಂಪರ್ಕ ಅಭಿಯಾನ, ಪ್ರಚಾರ ಸಭೆಗಳನ್ನು ನಡೆಸುವುದರ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ.

English summary
In the 198 wards covered by the BBMP, as you are already aware that the party is running for the 2020 BBMP election. Aam Aadmi Party hopes to develop Bengaluru as a world class city by 2025 by adopting creative and innovative methods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X