• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ ಕದನ: ಆರೆಸ್ಸೆಸ್ ನೆರವಿನಿಂದ ಬಿಜೆಪಿ 2ನೇ ಪಟ್ಟಿ ರಿಲೀಸ್

By Mahesh
|

ಬೆಂಗಳೂರು, ಆಗಸ್ಟ್ 09: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಬಂಡಾಯ, ಅಸಮಾಧಾನದ ಶಮನ ಹಾಗೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿಗೆ ಮತ್ತೊಮ್ಮೆ ಆರೆಸ್ಸಸ್ ನೆರವು ಪಡೆದು ನೀಡಿದೆ.

ಬಿಬಿಎಂಪಿ ಚುನಾವಣೆಗೆ ಬಿಜೆಪಿ 95 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಎರಡನೇ ಪಟ್ಟಿಯಲ್ಲಿ 57 ಮಂದಿ ಅಭ್ಯರ್ಥಿಗಳ ಹೆಸರಿದೆ ಈ ಮೂಲಕ 152 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

ಮೊದಲ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಟಿಕೆಟ್ ಕೈತಪ್ಪಿದ ಅಭ್ಯರ್ಥಿಗಳಿಂದ ಭಾರಿ ಬಂಡಾಯ ವ್ಯಕ್ತವಾಗಿತ್ತು. ಇದರ ಶಮನಕ್ಕೆ ಆರೆಸ್ಸೆಸ್ ಮೊರೆ ಹೋಗಲಾಗಿತ್ತು.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್‌ಜೋಶಿ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಡಿಸಿಎಂ ಆರ್. ಅಶೋಕ್ ಸೇರಿ ಬೆಂಗಳೂರು ನಗರದ ಬಿಜೆಪಿ ಶಾಸಕರ ಉಪಸ್ಥಿತಿಯಲ್ಲಿಂದು ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎರಡನೆ ಪಟ್ಟಿಯನ್ನು ಅಖೈರುಗೊಳಿಸಲಾಯಿತು.[ಮೊದಲ ಪಟ್ಟಿ ಇಲ್ಲಿದೆ ನೋಡಿ]

ವಾರ್ಡ್ ಗಳು ಹಾಗೂ ಅಭ್ಯರ್ಥಿ ಹೆಸರು ಹೀಗಿದೆ:

* ಮಾರಪ್ಪನಪಾಳ್ಯ-ಗೋಪಾಲ್,

* ಶಕ್ತಿಗಣ ಪತಿನಗರ- ಕೌಸಲ್ಯ ಕೋದಂಡರಾಮ್,

* ಶಂಕರಮಠ-ಬಿ.ಎಂ.ಶ್ರೀನಿವಾಸ್,

* ವೃಷಭಾವತಿ ನಗರ-ಗಂಗಮ್ಮ ಶಂಕರಪ್ಪ

* ರಾಜಮಹಲ್ ಗುಟ್ಟಹಳ್ಳಿ-ಹೇಮಲತಾ ಸತೀಶ್ ಸೇಠ್

* ಸುಬ್ರಹ್ಮಣ್ಯನಗರ-ಬಿ.ಶಿವರಾಜ ಮೂರ್ತಿ

* ಅಗರ- ಭವ್ಯ

* ಗಾಂಧಿನಗರ- ಗೋಪಾಲಕೃಷ್ಣ,

* ಅಗ್ರಹಾರ ದಾಸರಹಳ್ಳಿ- ಶಿಲ್ಪಾ ಜಿ.ಶ್ರೀಧರ್.

* ಡಾ.ರಾಜ್‌ಕುಮಾರ್-ಎಂ.ಜಿ.ಜಯರತ್ನ,

* ಮಾರುತಿ ಮಂದಿರ-ಶಾಂತಕುಮಾರಿ,

* ವಿಜಯನಗರ- ಲತಾ ಗೋಪಿ ನಾಥ ರಾಜು,

* ಅತ್ತಿಗುಪ್ಪೆ-ಡಾ.ರಾಜು,

* ಬಾಪೂಜಿ ನಗರ- ಟಿ.ವಿ. ಕೃಷ್ಣ,

* ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ-ವೇದಾ ರಮೇಶ್,

* ಸುಂಕೇನಹಳ್ಳಿ- ರಮೇಶ್,

* ವಿಶ್ವೇಶ್ವರಪುರ-ವಾಣಿ ರಾವ್,

* ಸಿದ್ಧಾಪುರ-ವಸಂತಕುಮಾರ್,

* ಹನುಮಂತ ನಗರ- ಕೆಂಪೇಗೌಡ.

* ಶ್ರೀನಗರ-ಜೆ.ಎನ್.ಸವಿತಾ,

* ಗಿರಿನಗರ-ಮೀನಾ,

* ಕತ್ರಿಗುಪ್ಪೆ-ಸಂಗಾತಿ ವೆಂಕಟೇಶ್,

* ವಿದ್ಯಾಪೀಠ-ಶಾಮಲಾ ಸಾಯಿಕುಮಾರ್,

* ಗಣೇಶ ಮಂದಿರ- ಲಕ್ಷ್ಮಿ ಉಮೇಶ್,

* ಕರಿಸಂದ್ರ- ಯಶೋಧಾ ಲಕ್ಷ್ಮಿಕಾಂತ್,

* ಕುಮಾರಸ್ವಾಮಿ ಲೇಔಟ್- ಎಲ್. ಶ್ರೀನಿವಾಸ್,

* ಹೊರಮಾವು-ಎನ್.ಭಾರತಿ ಮುನಿರಾಜು.

* ವಿಜ್ಞಾನಪುರ- ಎಸ್.ರಾಜು.

* ಬಸವಪುರ-ಕೆ.ಸುಂದರ್ ರಾಜು,

* ಜಕ್ಕೂರು- ಕೆ.ವಿ. ಮುನೀಂದ್ರ ಕುಮಾರ್,

* ಬ್ಯಾಟರಾಯಪುರ-ಎಲ್.ನಂಜಪ್ಪ,

* ಕೋಡಿಗೆಹಳ್ಳಿ-ಅಶ್ವತ್ ನಾರಾಯಣಗೌಡ,

* ಕುವೆಂಪು ನಗರ- ಶ್ರೀರಾಮಪ್ಪ,

* ದೊಡ್ಡಬಿದರಕಲ್ಲ್ಲು-ಮಾಲತೇಶ್,

* ಹೇರೋಹಳ್ಳಿ- ಎಚ್.ರಘುನಂದನ್,

* ಉಲ್ಲಾಳು- ಶಾರದಾ ಮುನಿರಾಜು,

* ಮಲ್ಲಸಂದ್ರ- ಎನ್. ಲೋಕೇಶ್,

* ಬಾಗಲಗುಂಟೆ-ಕೆ.ನರಸಿಂಹ.

* ಟಿ.ದಾಸರಹಳ್ಳಿ-ಉಮಾದೇವಿ ನಾಗರಾಜ್,

* ಪೀಣ್ಯ ಕೈಗಾರಿಕಾ ಪ್ರದೇಶ- ಕಲಾ ಅಂದಾನಪ್ಪ,

* ಕುಶಾಲನಗರ- ಕೆ.ಫೌಝಿಯಾ ತಾಜ್,

* ಕಾವಲ್ ಭೈರಸಂದ್ರ-ಗೌರಮ್ಮ,

* ದೇವರಜೀವನಹಳ್ಳಿ- ಪ್ರಮೋದ್,

* ಸಗಾಯಿಪುರ-ಶ್ರೀಕಾಂತ್ ಸೀತಾರಾಮ್,

* ಪುಲಕೇಶಿನಗರ-ವೇಲು,

* ನಾಗವಾರ-ಉಮ್ಮೆ ಕೌಸರ್,

* ಕಮ್ಮನಹಳ್ಳಿ -ಮುನಿಲಕ್ಷ್ಮಮ್ಮ.

* ಮಾರುತಿ ಸೇವಾನಗರ-ಸುಮಾ,

* ಗರುಡಾಚಾರ್‌ಪಾಳ್ಯ-ಅನಂತರಾಮಯ್ಯ,

* ದೊಡ್ಡನೆಕ್ಕುಂದಿ-ಶ್ವೇತಾ ವಿಜಯ್ ಕುಮಾರ್,

* ಬೊಮ್ಮನಹಳ್ಳಿ- ಸಿ.ಆರ್. ರಾಮಮೋಹನ್ ರಾಜು,

*ಜರಗನಹಳ್ಳಿ-ಬಿ.ಎಂ.ಶೋಭಾ,

* ಬೀಳೆಕಳ್ಳಿ- ಕೆ.ನಾರಾಯಣ ರಾಜು,

* ಹೊಂಗಸಂದ್ರ-ಭಾರತಿ ರಾಮಚಂದ್ರ,

* ಯಲಚೇನಹಳ್ಳಿ- ವಿ.ಬಾಲಕೃಷ್ಣ,

* ವಸಂತಪುರ-ಎ.ವಿಜಯಾ ರಮೇಶ್

(ಒನ್ ಇಂಡಿಯಾ ಸುದ್ದಿ)

English summary
Karnataka BJP released second list of candidates for The Bruhat Bengaluru Mahanagara Palike (BBMP) election 2015. first list consisted of 96 candidates, second list has 57 names picked with the help and guidance by RSS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X