ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ, ಬಿಜೆಪಿಯ ಹೊಸ ವೆಬ್‌ಸೈಟ್ ನೋಡಿ

|
Google Oneindia Kannada News

ಬೆಂಗಳೂರು, ಆಗಸ್ಟ್ 10 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿ ನೂತನ ವೆಬ್‌ಸೈಟ್‌ ಆರಂಭಿಸಿದೆ. ಕಳೆದ ಐದು ವರ್ಷದಲ್ಲಿ ಪಾಲಿಕೆಯಲ್ಲಿ ಆಡಳಿತ ನಡೆಸಿದ ಪಕ್ಷ ಮಾಡಿದ ಸಾಧನೆ ಮತ್ತು 2015ರ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಪೂರ್ಣ ವಿವರ ವೆಬ್‌ಸೈಟ್‌ನಲ್ಲಿ ಲಭ್ಯವಿವೆ.

ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಸುಬ್ಬನರಸಿಂಹ ಅವರು ಭಾನುವಾರ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಬೆಂಗಳೂರು ನಗರದಲ್ಲಿ ಅಂತರ್ಜಾಲ ವೀಕ್ಷಿಸುವ ಯುವಕರ ಸಂಖ್ಯೆ ಹೆಚ್ಚಿದೆ. ಅವರನ್ನು ಸುಲಭವಾಗಿ ತಲುಪಲು ವೆಬ್‌ಸೈಟ್ ಆರಂಭಿಸಲಾಗಿದೆ ಎಂದರು. [ಬಿಬಿಎಂಪಿ ಚುನಾವಣಾ ವೇಳಾಪಟ್ಟಿ]

BBMP election 2015 : BJP launches website

ಬಿಬಿಎಂಪಿ ಚುನಾವಣೆಗಾಗಿಯೇ ಬಿಜೆಪಿ ಪ್ರತ್ಯೇಕ ವೆಬ್‌ಸೈಟ್ ಆರಂಭಿಸಿದೆ. ಪಕ್ಷದ ಸದಸ್ಯರಾಗುವವರು ಸಹ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಯಂಪ್ರೇರಿತವಾಗಿ ಪ್ರಚಾರಕ್ಕೆ ಆಗಮಿಸುವವರೂ ವೆಬ್‌ಸೈಟ್‌ ಮೂಲಕ ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. [ವೆಬ್ ಸೈಟ್ ಲಿಂಕ್]

ವೆಬ್‌ಸೈಟ್‌ನಲ್ಲೇನಿದೆ? : 198 ವಾರ್ಡ್‌ಗಳ ಅಭ್ಯರ್ಥಿಗಳ ಪಟ್ಟಿ, ಅವರ ಸಂಪರ್ಕ ಸಂಖ್ಯೆಗಳು, ಪಕ್ಷದ ಚಟುವಟಿಕೆಗಳು, ಪಕ್ಷದಿಂದ ಆಯೋಗಕ್ಕೆ ಸಲ್ಲಿಸಿದ ದೂರುಗಳು, ಮಾಧ್ಯಮ ವರದಿ, 5 ವರ್ಷ ಪಾಲಿಕೆಯಲ್ಲಿ ಪಕ್ಷದ ಮಾಡಿದ ಸಾಧನೆ ಮುಂತಾದ ವಿವರಗಳನ್ನು ಈ ವೆಬ್‌ಸೈಟ್ ಒಳಗೊಂಡಿದೆ. [ಬಿಜೆಪಿ 96 ಅಭ್ಯರ್ಥಿಗಳ ಪಟ್ಟಿ]

ಅಂದಹಾಗೆ ಬಿಬಿಎಂಪಿ ಚುನಾವಣೆಗಾಗಿ ಆ.22ರ ಶನಿವಾರ ಮತದಾನ ನಡೆಯಲಿದ್ದು, ಆ.25ರ ಮಂಗಳವಾರ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ.10ರ ಸೋಮವಾರ ಕೊನೆಯ ದಿನವಾಗಿದೆ.

English summary
Bharatiya Janata Party (BJP)which is ahead of other parties in using the social media for election campaign, has launched an exclusive party website for The Bruhat Bengaluru Mahanagara Palike (BBMP) election 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X