ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವನಗುಡಿಯಲ್ಲಿ ಬಿಬಿಎಂಪಿಯ ಮೊದಲ ಇ ಟಾಯ್ಲೆಟ್‌

By Ashwath
|
Google Oneindia Kannada News

ಬೆಂಗಳೂರು, ಜು.15: ನಗರದಲ್ಲಿ ಬಿಬಿಎಂಪಿ'ಇ-ಶೌಚಾಲಯ' ನಿರ್ಮಿ‌ಸುತ್ತಿದ್ದು ಸದ್ಯದಲ್ಲೇ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.ಆರಂಭಿಕ ಹಂತದಲ್ಲಿ ನಗರದ ಬಸವನಗುಡಿಯ ಕೃಷ್ಣರಾವ್‌ ಪಾರ್ಕ್‌ನಲ್ಲಿ ಇ-ಶೌಚಾಲಯ ಜೋಡಣೆ ಕಾರ್ಯ ಆರಂಭವಾಗಿದೆ.[ಬೆಂಗಳೂರಿನಲ್ಲಿ ಇ-ಶೌಚಾಲಯ ಸ್ಥಾಪಿಸಲಿದೆ ಬಿಬಿಎಂಪಿ]

ಇರಾಮ್‌ ವೈಜ್ಞಾನಿಕ ಇ- ಟಾಯ್ಲೆಟ್‌ ಕಂಪನಿಯ ಜೊತೆಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದ್ದು, ಮೊದಲಿಗೆ ನಗರದ 100 ಸ್ಥಳಗಳಲ್ಲಿ ಇ ಶೌಚಾಲಯ ಸ್ಥಾಪನೆ ಮಾಡಲು ನಿರ್ಧರಿಸಿದೆ. ಬಳಿಕ ಎಲ್ಲಾ 198 ವಾರ್ಡ್‌ಗಳ ಪ್ರಮುಖ ರಸ್ತೆ, ಉದ್ಯಾನ, ಬಸ್‌ ತಂಗುದಾಣ, ಜನಸಂದಣಿ ಇರುವ ಪ್ರದೇಶಗಳಲ್ಲಿ ನಿರ್ಮಾಣ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.[ಕೃಷ್ಣರಾವ್ ಪಾರ್ಕ್ ಅಭಿವೃದ್ಧಿಗೆ ಕ್ರಮ: ಅನಂತಕುಮಾರ್]

 45 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ

45 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ

ಇ- ಶೌಚಾಲಯವನ್ನು 45 ಚದರ ಅಡಿ ವಿಸ್ತೀರ್ಣದಲ್ಲಿ ಇದನ್ನು ನಿರ್ಮಿ‌ಸಬಹುದು. ಶೌಚಾಲಯದ ವ್ಯವಸ್ಥೆಗಳೆಲ್ಲಾ ಯಾಂತ್ರೀಕೃತವಾಗಿ ನಡೆಯಲಿದೆ. ಒಂದು ರೂ. ನಾಣ್ಯ ಹಾಕಿದರೆ ಬಾಗಿಲು ತೆರೆಯುತ್ತದೆ.

 ಸೆನ್ಸರ್‌ ಶೌಚಾಲಯ:

ಸೆನ್ಸರ್‌ ಶೌಚಾಲಯ:

ಒಳಭಾಗದಲ್ಲಿ ಸೆನ್ಸರ್‌ ಅಳವಡಿಸಲಾಗಿದ್ದು, ದೀಪ ಹಾಗೂ ಫ್ಯಾನ್ ಯಾಂತ್ರಿಕವಾಗಿ ಚಾಲನೆಯಾಗಲಿದೆ. ಶೌಚಾಲಯ ಬಳಸಿದ ತರುವಾಯ ಸೆನ್ಸರ್‌ ವ್ಯವಸ್ಥೆ ಮೂಲಕವೇ ನೀರು ಪೂರೈಕೆಯಾಗಲಿದೆ. ನಂತರ ಒಳಗಿನ ಗುಂಡಿ ಒತ್ತಿದರೆ ಬಾಗಿಲು ತೆರೆಯುತ್ತದೆ .

 ವಿವರ ನಿಯಂತ್ರಣ ಕೊಠಡಿಗೆ:

ವಿವರ ನಿಯಂತ್ರಣ ಕೊಠಡಿಗೆ:

ಇ -ಶೌಚಾಲಯದಲ್ಲಿ ಜಿಪಿಎಸ್ ಸೆನ್ಸರ್ ತಂತ್ರಜ್ಞಾನ ಅಳವಡಿಸಲಾಗಿದೆ.ನೀರಿನ ಪ್ರಮಾಣ, ಸಂಗ್ರಹವಾದ ನಾಣ್ಯಗಳ ಸಂಖ್ಯೆ ವಿವರದ ಜತೆಗೆ ಯಾವುದೇ ಹಾನಿ ಸಂಭವಿಸಿದರೂ ತಕ್ಷಣವೇ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗಲಿದೆ. ಹಾಗೆಯೇ ಬಳಕೆದಾರರು ದೂರು ದಾಖಲಿಸಲು ಧ್ವನಿಮುದ್ರಿತ ವ್ಯವಸ್ಥೆ ಇರಲಿದೆ.

 ಜಮ್ಮು ಕಾಶ್ಮೀರ, ಕೇರಳದಲ್ಲಿ ಸಕ್ಸಸ್‌:

ಜಮ್ಮು ಕಾಶ್ಮೀರ, ಕೇರಳದಲ್ಲಿ ಸಕ್ಸಸ್‌:

ಬಿಬಿಎಂಪಿ 4.50 ಲಕ್ಷ ರೂ ವೆಚ್ಚ ಮಾಡಿ ಒಂದೊಂದು ಟಾಯ್ಲೆಟ್‌‌ನ್ನು ನಿರ್ಮಿಸುತ್ತಿದೆ. ಸದ್ಯ ಕೇರಳದಲ್ಲಿ 500ಕ್ಕೂ ಅಧಿಕ ಹಾಗೂ ಜಮ್ಮ ಮತ್ತು ಕಾಶ್ಮೀರದಲ್ಲಿ 15 ಇ-ಶೌಚಾಲಯ ಅಳವಡಿಸಲಾಗಿದೆ ಅವುಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

English summary
BBMP(Bruhat Bangalore Mahanagara Palik) E toilets are getting ready, it will be installed in Krishna Rao park in the first phase, later it will be installed in different parts of Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X