ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಗೆ ಬರಲಿದ್ದಾರೆ ಬಿಬಿಎಂಪಿ ವೈದ್ಯರು, ಯಾವ ಮಾಹಿತಿ ಸಂಗ್ರಹ?

|
Google Oneindia Kannada News

ಬೆಂಗಳೂರು, ಆಗಸ್ಟ್ 16; 'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ' ಎಂಬ ಅಭಿಯಾನಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚಾಲನೆ ನೀಡಿದೆ. ಜನರ ಆರೋಗ್ಯದ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಲು ಬಿಬಿಎಂಪಿ ವೈದ್ಯರ ತಂಡ ಮನೆ ಬಾಗಿಲಿಗೆ ಬರಲಿದೆ.

ಸೋಮವಾರ ಬಿಬಿಎಂಪಿಯ 'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ' ಅಭಿಯಾನಕ್ಕೆ ಕಂದಾಯ ಸಚಿವ ಆರ್. ಅಶೋಕ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಚಾಲನೆ‌ ನೀಡಿದರು. ನಿಮ್ಮ ಆರೋಗ್ಯವೇ ನಮ್ಮ ಧ್ಯೇಯ ಶೀರ್ಷಿಕೆಯಡಿ ವೈದ್ಯರ ತಂಡ ಜನರ ಆರೋಗ್ಯದ ತಪಾಸಣೆ ನಡೆಸಲಿದ್ದಾರೆ.

ಬೆಂಗಳೂರು ಹೊರವಲಯದ ವಾರ್ಡ್‌ಗಳಲ್ಲೇ ಕೊರೊನಾ ಹೆಚ್ಚಳ; ಕಾರಣವೇನು?ಬೆಂಗಳೂರು ಹೊರವಲಯದ ವಾರ್ಡ್‌ಗಳಲ್ಲೇ ಕೊರೊನಾ ಹೆಚ್ಚಳ; ಕಾರಣವೇನು?

ಈ ಅಭಿಯಾನದ ಮೂಲಕ ವೈದ್ಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ತಂಡವು ಕುಟುಂಬ ಸದಸ್ಯರ ಆರೋಗ್ಯ ವಿವರಗಳನ್ನು ಪಡೆಯಲಿದೆ. ಕೋವಿಡ್ ಸೋಂಕು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಾಗೃತಿಯನ್ನು ಮೂಡಿಸಲಿದೆ ಹಾಗೂ ಅಗತ್ಯ ಚಿಕಿತ್ಸಾ ನೆರವು ಸಹ ನೀಡಲಿದೆ.

ಕೊವ್ಯಾಕ್ಸಿನ್ ಕೊರತೆ; ಬೆಂಗಳೂರಲ್ಲಿ 2ನೇ ಡೋಸ್‌ಗೆ ಪರದಾಟ! ಕೊವ್ಯಾಕ್ಸಿನ್ ಕೊರತೆ; ಬೆಂಗಳೂರಲ್ಲಿ 2ನೇ ಡೋಸ್‌ಗೆ ಪರದಾಟ!

ಬೆಂಗಳೂರು ನಗರದ 27 ವಿಧಾನಸಭಾ ಕ್ಷೇತ್ರದ 54 ವಾರ್ಡ್‌ಗಳಲ್ಲಿ ಈ ಅಭಿಯಾನ ಅನುಷ್ಠಾನಗೊಳ್ಳಲಿದೆ. ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇನ್ನಿತರ ರೋಗಗಳನ್ನು ಹೊಂದಿದ್ದರೆ ಆ ಕುರಿತು ಮಾಹಿತಿಯನ್ನು ವೈದ್ಯರ ತಂಡವು ಕಲೆ ಹಾಕಲಿದೆ.

3ನೇ ಅಲೆ ಭೀತಿ: ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಬಿಬಿಎಂಪಿ ಹೊಸ ಮಾರ್ಗಸೂಚಿ3ನೇ ಅಲೆ ಭೀತಿ: ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಬಿಬಿಎಂಪಿ ಹೊಸ ಮಾರ್ಗಸೂಚಿ

29 ಲಕ್ಷ ಮನೆಗಳಿಗೆ ಭೇಟಿ

29 ಲಕ್ಷ ಮನೆಗಳಿಗೆ ಭೇಟಿ

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಆರ್. ಅಶೋಕ, "ಪಾಲಿಕೆ ವೈದ್ಯರ ತಂಡ ನಗರದ 29 ಲಕ್ಷ ಮನೆಗಳಿಗೆ ಹಂತ-ಹಂತವಾಗಿ ಭೇಟಿ ನೀಡಲಿದೆ. ನಗರದಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಇದು ಸಹಾಯಕವಾಗಲಿದೆ. ಅದಕ್ಕಾಗಿ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ" ಎಂದು ಹೇಳಿದರು.

ಪ್ರತಿ ದಿನ 50 ಮನೆಗಳಿಗೆ ಭೇಟಿ

ಪ್ರತಿ ದಿನ 50 ಮನೆಗಳಿಗೆ ಭೇಟಿ

'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ' ಅಭಿಯಾನದ ಅಡಿ ಪ್ರತಿದಿನ ತಂಡ 50 ಮನೆಗೆ ಭೇಟಿ ನೀಡಲಿದೆ. ಒಂದು ವಾರ್ಡ್‌ನಲ್ಲಿ ವೈದ್ಯರ 5 ತಂಡಗಳು ಇರಲಿವೆ. ಒಬ್ಬ ವೈದ್ಯಾಧಿಕಾರಿ, ಅರೆ ವೈದ್ಯಕೀಯ ಸಿಬ್ಬಂದಿ ಪ್ರತಿ ತಂಡದಲ್ಲಿ ಇರುತ್ತಾರೆ. ಎಂಬಿಬಿಎಸ್ ಅಥವ ಬಿಡಿಎಸ್ ಅಥವ ಆಯುಷ್ ವೈದ್ಯರನ್ನು ವೈದ್ಯಾಧಿಕಾರಿಯಾಗಿ ನೇಮಿಸಲಾಗುತ್ತದೆ. ಪ್ರತಿ ವೈದ್ಯಾಧಿಕಾರಿಗೆ 60 ಸಾವಿರ ರೂ. ನೀಡಲಾಗುತ್ತಿದೆ.

ವೈದ್ಯರಿಗೆ ಟ್ಯಾಬ್ ವಿತರಣೆ

ವೈದ್ಯರಿಗೆ ಟ್ಯಾಬ್ ವಿತರಣೆ

'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ' ಅಭಿಯಾನದಡಿ ಆಗಮಿಸುವ ವೈದ್ಯರ ತಂಡ ನಿಮ್ಮ ಆರೋಗ್ಯವೇ ನಮ್ಮ ಧ್ಯೇಯ ಎಂಬ ಬರಹವಿರುವ ಬಿಳಿ ಬಣ್ಣದ ನಿಲುವಂಗಿ ಧರಿಸಿರುತ್ತಾರೆ. ಪ್ರತಿ ತಂಡಕ್ಕೂ ಪ್ರತ್ಯೇಕ ವಾಹನವನ್ನು ಒದಗಿಸಲಾಗಿದೆ. ಮನೆ-ಮನೆ ಭೇಟಿಯ ವೇಳೆ ಕಾಗದ ರಹಿತವಾಗಿ ಜನರ ಆರೋಗ್ಯದ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ ಇದಕ್ಕಾಗಿ ವೈದ್ಯರ ತಂಡಕ್ಕೆ ಟ್ಯಾಬ್ ನೀಡಲಾಗಿದೆ. ಕಲೆ ಮಾಹಿತಿ ಮಾಹಿತಿಯನ್ನು ಬಿಬಿಎಂಪಿ ತಂತ್ರಾಂಶದಲ್ಲಿ ಅಳವಡಿಮೆ ಮಾಡಲು ಸಹಾಯಕವಾಗಲಿದೆ.

Recommended Video

ಗ್ರೀನ್ ಹೈಡ್ರೋಜನ್ ಬಗ್ಗೆ ಮೋದಿಯ ಮಾತು! | Oneindia Kannada
ಯಾವ ಮಾಹಿತಿ ಸಂಗ್ರಹ

ಯಾವ ಮಾಹಿತಿ ಸಂಗ್ರಹ

'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ' ಅಭಿಯಾನದಡಿ ಪಿಎಚ್‌ಎಸಿಟಿ ತಂತ್ರಾಂಶದಲ್ಲಿ ಜನರ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಕುಟುಂಬದ ಮುಖ್ಯಸ್ಥರ ಹೆಸರು, ಮನೆಯ ವಿಳಾಸ, ದೂರವಾಣಿ ಸಂಖ್ಯೆ, ಮನೆಯಲ್ಲಿ ವಾಸವಿರುವ ಜನರ ವಿವರ, ಅವರ ವಯಸ್ಸು, ಕೋವಿಡ್ ಮತ್ತು ಇತರ ಕಾಯಿಲೆ ಬಗ್ಗೆ ಮಾಹಿತಿಯನ್ನು ವೈದ್ಯರು ಪಡೆದುಕೊಳ್ಳಲಿದ್ದಾರೆ.

ವೈದ್ಯರ ತಂಡ ಮನೆಗೆ ಬಂದಾಗ ಯಾರಿಗಾದರೂ ಕೋವಿಡ್ ಸೋಂಕಿನ ಲಕ್ಷಣಗಳು ಇದ್ದರೆ ಪರೀಕ್ಷೆ ನಡೆಸಲಿದೆ. ಸೋಂಕು ದೃಢಪಟ್ಟರೆ ಅಂತಹವರನ್ನು ಕೋವಿಡ್ ಕೇರ್ ಸೆಂಟರ್ ಅಥವ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಮನೆಯಲ್ಲಿ ಆರೈಕೆ ಪಡೆಯುವವರಿಗೆ ಹೋಂ ಐಸೋಲೇಷನ್ ಕಿಟ್ ನೀಡಲಾಗುತ್ತದೆ.

English summary
Minister R. Ashok launched BBMP doctors at your doorstep campaign on August 16 at Bengaluru. A team of doctors will conduct door-to-door Covid-related health check up in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X