ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋಟೆಲ್ ಗಳಲ್ಲಿ ಉಚಿತವಾಗಿ ಕುಡಿಯುವ ನೀರು ನೀಡಲೇಬೇಕು!

ಹೋಟೆಲ್ ಗಳಲ್ಲಿ ಉಚಿತವಾಗಿ ಕುಡಿಯುವ ನೀರು ನೀಡಲೇಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.

By Mahesh
|
Google Oneindia Kannada News

ಬೆಂಗಳೂರು, ಜೂನ್ 13: ನಗರದ ಎಲ್ಲಾ ಹೋಟೆಲ್ ಗಳಲ್ಲಿ ಉಚಿತವಾಗಿ ಕುಡಿಯುವ ನೀರು ನೀಡಲೇಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಹೀಗಾಗಿ, ಯಾವುದೇ ಹೋಟೆಲ್, ರೆಸ್ಟೋರೆಂಟ್ , ಮಲ್ಟಿಪ್ಲೆಕ್ಸ್ ಫುಡ್ ಕೋರ್ಟ್ ಗಳಲ್ಲಿ ಇನ್ಮುಂದೆ ದುಡ್ಡು ಕೊಟ್ಟು ನೀರು ಖರೀದಿಸಬೇಕಾಗಿಲ್ಲ.

ಈ ಆದೇಶ ಕೆಎಫ್ ಸಿ, ಪಿಜ್ಜಾ ಹಟ್ ಗಳಿಗೂ ಅನ್ವಯವಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಕುಡಿಯುವ ನೀರಿನ ಬಾಟಲ್ ಗೆ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರುತ್ತಿರುವ ಮಲ್ಟಿಪ್ಲೆಕ್ಸ್ ಮತ್ತು ವಿವಿಧ ಮಾಲ್ ಗಳಿಗೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

BBMP directs hotels, eateries to provide free drinking water to customers

ಕುಡಿಯುವ ನೀರಿನ ಬಾಟಲಿಗಾಗಿ ಹೆಚ್ಚಿನ ಮೊತ್ತ ಆಗ್ರಹಿಸಿದರೆ, ಮೊದಲ ಬಾರಿ ತಪ್ಪು ಮಾಡಿದರೆ 2,000 ರು. ದಂಡ. ಪುನರಾವರ್ತನೆ ಮಾಡಿದರೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಆಹಾರ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಳಿಗೆ, ಮಲ್ಟಿಪ್ಲೆಕ್ಸ್ ಫುಡ್ ಕೋರ್ಟ್ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ದಂಡ ವಿಧಿಸಿದ್ದರು. ಪಂಚತಾರಾ ಹೋಟೆಲ್ ಗಳಲ್ಲೂ ದುಬಾರಿ ಬೆಲೆಗೆ ಕುಡಿಯುವ ನೀರು ಮಾರಾಟ ಬಗ್ಗೆ ಎಚ್ಚರ ವಹಿಸಲಾಗಿತ್ತು.

ಥ್ಯಾಂಕ್ಸ್ ಟು ಸುಧಾ: ಸುಧಾ ಕತ್ವಾ ಎಂಬ ಮಹಿಳೆ ಕಳೆದ ವರ್ಷ ಕೆಎಫ್ ಸಿ ಮಳಿಗೆ ಭೇಟಿ ನೀಡಿದ್ದಾಗ, ಕುಡಿಯಲು ನೀರು ಕೇಳಿದ್ದಾರೆ. ನೀರು ಕೊಡುವುದಿಲ್ಲ. ಬೇಕಾದರೆ ಬಾಟಲಿ ನೀರು ಖರೀದಿಸಿ ಎಂದು ಮಳಿಗೆಯವರು ಹೇಳಿದ್ದಾರೆ. ಇದರ ವಿರುದ್ಧ ಗ್ರಾಹಕರ ಕೋರ್ಟಿನಲ್ಲಿ ಸುಧಾ ಅವರು ದೂರು ದಾಖಲಿಸಿದ್ದರು.

ಈಗ ಸುಧಾ ಪರವಾಗಿ ತೀರ್ಪು ಬಂದಿದ್ದು, ಉಚಿತ, ಪರಿಶುದ್ಧ ನೀರನ್ನು ಎಲ್ಲಾ ಗ್ರಾಹಕರಿಗೂ ನೀಡುವಂತೆ ಆದೇಶ ಹೊರಡಿಸಲು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ(ಬಿಬಿಎಂಪಿ) ಗೆ ಸೂಚಿಸಲಾಗಿದೆ.

English summary
BBMP commissioner Manjunath Prasad has directed multiplexes, hotels, restaurants and eateries including KFC to provide free and clean drinking water to customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X