ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆ ಅವಾಂತರ: ನಿದ್ದೆಯಲ್ಲಿರುವ ಬಿಬಿಎಂಪಿಗೆ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಜೂನ್ 26: ಮಳೆ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಜೂನ್ ತಿಂಗಳ ಮೊದಲ ವಾರ ಸಭೆ ನಡೆಸಿದ್ದ ಕಂದಾಯ ಸಚಿವರಾದ ಆರ್.ಅಶೋಕ್ ಅವರು ತಾವು ಕೊಟ್ಟ ಮಾತನ್ನು ಮರೆತು ಎಲ್ಲಿ ಮಲಗಿದ್ದಾರೆ ಎಂದು ಹುಡಕಬೇಕಿದೆ ಎಂದು ಎಎಪಿ ಕರ್ನಾಟಕ ಲೇವಡಿ ಮಾಡಿದೆ.

Recommended Video

Railway service to be cancelled till August 12th | Oneindia Kannada

ಕೇವಲ ಟಾಸ್ಕ್ ಪೋರ್ಸ್ ರಚಿಸಿದರೆ ಸಮಸ್ಯೆ ಬಗೆಹರಿಯುವುದು ಎಂದು ಸಚಿವರು ತಿಳಿದಂತಿದೆ. ನೆನ್ನೆ ನಗರದಾದ್ಯಂತ ಸುರಿದ ಮಳೆಗೆ ಹಲವೆಡೆ ರಸ್ತೆ ತುಂಬ ನೀರು ಹರಿಯುತ್ತಿದ್ದರೂ ಟಾಸ್ಕ್ ಪೋರ್ಸ್ ಸಿಬ್ಬಂದಿಗಳು ಒಬ್ಬರೂ ಕಾಣಲಿಲ್ಲ.

ಮಳೆಗಾಲಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಕೇ? ನಿನ್ನೆ ಕೆಂಗೇರಿ ಬಳಿ ವೃಷಭಾವತಿ ನದಿಗೆ ಕಟ್ಟಿದ್ದ ತಡೆಗೋಡೆ ಕುಸಿದು ಬಿದ್ದಿದೆ, ರಸ್ತೆ ಬಿರುಕು ಬಿಟ್ಟಿದೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ನೂರಾರು ಜನರು ಜಲಸಮಾಧಿ ಆಗಬೇಕಾಗಿತ್ತು. ಜನ ಸಾಮಾನ್ಯರ ಜೀವದ ಚೆಲ್ಲಾಟವಾಡದೇ ಈಗಲಾದರೂ ಬಿಬಿಎಂಪಿ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳುವುದೇ?

Bbmp directly responsible for Rain Havoc death, damage : AAP

* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳ, ಗುತ್ತಿಗೆದಾರರ ಅಕ್ರಮ ಕೂಟಗಳಿಗೆ ತಡೆ ಹಾಕಬೇಕು.

* ಮಳೆ ನೀರು ರಸ್ತೆಯಲ್ಲಿ ಹರಿಯಲು ಮ್ಯಾನ್‌ಹೋಲ್ ಕಟ್ಟಿಕೊಳ್ಳುವುದು ಸಹ ಪ್ರಮುಖ ಕಾರಣ ಆದ್ದರಿಂದ ದೆಹಲಿ ಸರ್ಕಾರದ ಮಾದರಿಯಲ್ಲಿ ಅತ್ಯಾಧುನಿಕ ಒಳಚರಂಡಿ ಸ್ವಚ್ಚಗೊಳಿಸುವ ಯಂತ್ರಗಳನ್ನು (automatic sewage cleaning machine) ಕೂಡಲೇ ಖರೀದಿಸಬೇಕು.
* ಕಾಮಗಾರಿಯ ನೆಪದಲ್ಲಿ ತೋಡಿರುವ ಒಳಚರಂಡಿಗಳನ್ನು ತಕ್ಷಣ ದುರಸ್ಥಿಗೊಳಿಸಬೇಕು.

ಮಳೆಗೆ ಕೊಚ್ಚಿ ಹೋದ ವೃಷಭಾವತಿ ನದಿ ತಡೆಗೋಡೆ: ಮೇಯರ್ ಭೇಟಿಮಳೆಗೆ ಕೊಚ್ಚಿ ಹೋದ ವೃಷಭಾವತಿ ನದಿ ತಡೆಗೋಡೆ: ಮೇಯರ್ ಭೇಟಿ

* ಈಗಾಗಲೇ ಚಾಲ್ತಿಯಲ್ಲಿರುವ ಮಳೆ ನೀರು ಸಂಗ್ರಹ ಯೋಜನೆಯನ್ನು ಚುರುಕುಗೊಳಿಸಬೇಕು.

ಜನರ ಕಣ್ಣೊರೆಸಲು ಭರವಸೆಗಳನ್ನು ನೀಡದೆ ಕೂಡಲೇ ಮಳೆ ಅವಘಡಗಳನ್ನು ತಪ್ಪಿಸುವಂತಹ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ ಈ ಮೂಲಕ ಆಗ್ರಹಿಸುತ್ತದೆ.

ಬೆಂಗಳೂರು ಮೆಟ್ರೋಪಾಲಿಟನ್‌ ಟಾಸ್ಕ್‌ ಪೋರ್ಸಿನ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಅವರಿಗೆ ತಡೆಗೋಡೆ ಕಳಪೆ ಕಾಮಗಾರಿ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಮ್ ಆದ್ಮಿ ಪಕ್ಷದ ವತಿಯಿಂದ ದೂರು ದಾಖಲಿಸಲಾಗಿದೆ.

English summary
BBMP will be directly responsible for any deaths caused by monsoon-related disasters in Bengaluru, The rainfall caused much havoc including heavy inundation and tree falls said AAP Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X