ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸೆಂಬರ್‌ನಲ್ಲಿ ಬಿಬಿಎಂಪಿ ಉಪಮೇಯರ್ ಆಯ್ಕೆ, ರೇಸಿನಲ್ಲಿ ಯಾರ್ಯಾರು?

|
Google Oneindia Kannada News

ಬೆಂಗಳೂರು, ನವೆಂಬರ್ 21: ಬಿಬಿಎಂಪಿ ಉಪಮೇಯರ್ ರಮಿಳಾ ಉಮಾಶಂಕರ್ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಡಿಸೆಂಬರ್ 7 ರಂದು ಚುನಾವಣೆ ನಡೆಯು ಸಾಧ್ಯತೆ ಇದೆ. ಜೊತೆಗೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯೂ ನಡೆಯಲಿದೆ.

ಬಿಬಿಎಂಪಿ ಉಪಮೇಯರ್ ಆಗಿ ಆಯ್ಕೆಯಾಗಿದ್ದ ಜೆಡಿಎಸ್‌ನ ರಮಿಳಾ ಉಮಾಶಂಕರ್ ಅವರು ಉಪಮೇಯರ್ ಆದ ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಂದಿನಿಂದ ಉಪಮೇಯರ್ ಸ್ಥಾನ ಖಾಲಿ ಇತ್ತು.

ಡಿಸೆಂಬರ್‌ನಲ್ಲಿ ಬಿಬಿಎಂಪಿ ಉಪಮೇಯರ್, ಸಮಿತಿ ಚುನಾವಣೆ?ಡಿಸೆಂಬರ್‌ನಲ್ಲಿ ಬಿಬಿಎಂಪಿ ಉಪಮೇಯರ್, ಸಮಿತಿ ಚುನಾವಣೆ?

12 ಸ್ಥಾಯಿ ಸಮಿತಿಗಳಿಗೆ ತಲಾ 11 ರಂತೆ ಸದಸ್ಯರನ್ನು ಸಹ ಆಯ್ಕೆ ಮಾಡಬೇಕಿದ್ದು, ಅದನ್ನೂ ಸಹ ಉಪಮೇಯರ್ ಆಯ್ಕೆ ಜೊತೆಯಾಗಿಯೇ ಮಾಡಲು ಆಯುಕ್ತರು ಯೋಜಿಸಿದ್ದಾರೆ. ಉಪಮೇಯರ್ ಆಯ್ಕೆಯು ನವೆಂಬರ್‌ನಲ್ಲೇ ನಡೆಯಬೇಕಿತ್ತು. ಆದರೆ ಸಚಿವ ಅನಂತ್‌ಕುಮಾರ್ ನಿಧನ ಹಾಗೂ ಉಗ್ರಪ್ಪ ಸಂಸದರಾಗಿ ಆಯ್ಕೆ ಆದ ಕಾರಣ ಮತದಾರರ ಪಟ್ಟಿ ಪರಿಷ್ಟರಣೆಗೆ ಮನವಿ ಮಾಡಲಾಗಿತ್ತು. ಪಟ್ಟಿ ಪರಿಷ್ಕರಣೆ ಆಗಿ ಬಂದಿದ್ದು ಕೆಲವೇ ದಿನಗಳಲ್ಲಿ ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ.

ಜೆಡಿಎಸ್‌ಗೆ ಉಪಮೇಯರ್, ಕೈಗೆ ಮೇಯರ್‌

ಜೆಡಿಎಸ್‌ಗೆ ಉಪಮೇಯರ್, ಕೈಗೆ ಮೇಯರ್‌

ಮೇಯರ್-ಉಪಮೇಯರ್ ಆಯ್ಕೆ ಸಂದರ್ಭ ಕಾಂಗ್ರೆಸ್‌ನ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರಿಗೆ ಮೇಯರ್ ಸ್ಥಾನ ಜೆಡಿಎಸ್‌ನರಮಿಳಾ ಉಮಾಶಂಕರ್ ಅವರಿಗೆ ಉಪಮೇಯರ್ ಸ್ಥಾನ ಒಲಿದಿತ್ತು. ಈಗಲೂ ಸಹ ಉಪಮೇಯರ್ ಸ್ಥಾನ ಜೆಡಿಎಸ್‌ ಬಳಿಯೇ ಇರಲಿದೆ. ಆದರೆ ಈ ಬಾರಿ ಪಕ್ಷೇತರರು ತಮಗೆ ಉಪಮೇಯರ್ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಪಕ್ಷೇತರರಿಂದ ಬೇಡಿಕೆ

ಪಕ್ಷೇತರರಿಂದ ಬೇಡಿಕೆ

ತಮ್ಮ ಬೆಂಬಲದಿಂದಲೇ ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿಯಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿದೆ. ಹಾಗಾಗಿ ಉಪಮೇಯರ್ ಸ್ಥಾನವನ್ನು ನಮ್ಮಲ್ಲಿ ಒಬ್ಬರಿಗೆ ನೀಡಬೇಕು ಎಂದು ಪಕ್ಷೇತರರು ಒತ್ತಾಯ ಮಾಡುತ್ತಿದ್ದಾರೆ. ಒಟ್ಟು ಏಳು ಜನ ಪಕ್ಷೇತರರು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡಿದ್ದಾರೆ.

ಒಂದು ಇಂದಿರಾ ಕ್ಯಾಂಟೀನ್ ಬಣ್ಣ ಬದಲು, ಶುರುವಾಯ್ತು ಹೊಸ ವಿವಾದಒಂದು ಇಂದಿರಾ ಕ್ಯಾಂಟೀನ್ ಬಣ್ಣ ಬದಲು, ಶುರುವಾಯ್ತು ಹೊಸ ವಿವಾದ

ಮೂರು ಸದಸ್ಯರ ನಡುವೆ ಪೈಪೋಟಿ

ಮೂರು ಸದಸ್ಯರ ನಡುವೆ ಪೈಪೋಟಿ

ಪಕ್ಷೇತರರ ಈ ಬಿಗಿಪಟ್ಟಿನ ನಡುವೆಯೂ ಉಪಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ಸದಸ್ಯರಾದ ನಾಗಪುರ ವಾರ್ಡ್‌ನ ಭದ್ರೇಗೌಡ, ವಿಶ್ವನಾಥ್ ನಾಗೇನಹಳ್ಳಿ ವಾರ್ಡ್‌ನ ರಾಜಶೇಖರ್ ಹಾಗೂ ಪಾಲಿಕೆಯಲ್ಲಿ ಜೆಡಿಎಸ್ ಗುಂಪಿನ ನಾಯಕಿಯಾಗಿರುವ ನೇತ್ರಾ ನಾರಾಯಣ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಹೃದಯಾಘಾತದಿಂದ ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ನಿಧನಹೃದಯಾಘಾತದಿಂದ ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ನಿಧನ

ವಿಶ್ವನಾಥ, ಬಂಡೆಪ್ಪ ಕಾಶೆಂಪುರ ಪ್ರಭಾವ

ವಿಶ್ವನಾಥ, ಬಂಡೆಪ್ಪ ಕಾಶೆಂಪುರ ಪ್ರಭಾವ

ರಮಿಳಾ ಉಮಾಶಂಕರ್ ಅವರು ಉಪಮೇಯರ್ ಆಗುವಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ ಹಾಗೂ ಸಚಿವ ಬಂಡೆಪ್ಪ ಕಾಶೆಂಪುರ ಅವರ ಕೃಪೆ ಇತ್ತು. ಈ ಬಾರಿ ಸಹ ಉಪಮೇಯರ್ ಆಯ್ಕೆಯಲ್ಲಿ ಅವರು ಪ್ರಭಾವ ಬೀರಲಿದ್ದಾರೆ. ನಾಗೇನಹಳ್ಳಿ ವಾರ್ಡ್‌ನ ರಾಜಶೇಖರ್ ಅವರ ಹೆಸರು ಉಪಮೇಯರ್ ಸ್ಥಾನಕ್ಕೆ ಮುಂಚೂಣಿಯಲ್ಲಿದೆ.

English summary
BBMP deputy mayor election is going to happen in December three jds members were in the deputy mayor race. Independent members were also demanding for the deputy mayor post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X