ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಕೊರೊನಾ ಸೋಂಕಿತರಿಗಾಗಿಯೇ 50 ಅಂಬ್ಯುಲೆನ್ಸ್ ಮೀಸಲು

|
Google Oneindia Kannada News

ಬೆಂಗಳೂರು, ಜೂನ್ 24 : ಕೊರೊನಾ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗುತ್ತಿಲ್ಲ ಎಂಬ ದೂರುಗಳು ಬೆಂಗಳೂರು ನಗರದಲ್ಲಿ ಕೇಳಿ ಬರುತ್ತಿವೆ. ಈ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಮುಂದಾಗಿದೆ.

Recommended Video

World No.1 Tennis player Novak DJokovic Tests Positive for Coronavirus | Oneindia Kannada

ಕೊರೊನಾ ಸೋಂಕಿತರು ಮತ್ತು ಸೋಂಕಿತರ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕದಲ್ಲಿರುವವರನ್ನು ಕರೆದುಕೊಂಡು ಹೋಗಲು 50 ಅಂಬ್ಯುಲೆನ್ಸ್‌ಗಳನ್ನು ಮೀಸಲಾಗಿ ಇಡಲಾಗುತ್ತದೆ.

ಕೊವಿಡ್-19 ನಿಯಂತ್ರಣಕ್ಕೆ ಬಿಬಿಎಂಪಿ ಜೊತೆಗೆ ಸಿಎಂ ಮಹತ್ವದ ಸಭೆ ಕೊವಿಡ್-19 ನಿಯಂತ್ರಣಕ್ಕೆ ಬಿಬಿಎಂಪಿ ಜೊತೆಗೆ ಸಿಎಂ ಮಹತ್ವದ ಸಭೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಬಿಬಿಎಂಪಿಯ ವಿಶೇಷ ಆಯುಕ್ತ ಡಿ. ರಣದೀಪ್ ನೇತೃತ್ವದಲ್ಲಿ ಸಭೆ ನಡೆಯಿತು.

ಸೀಲ್ ಡೌನ್; ಕೆ. ಆರ್. ಮಾರ್ಕೆಟ್‌ಗೆ ಮೇಯರ್ ಭೇಟಿ ಸೀಲ್ ಡೌನ್; ಕೆ. ಆರ್. ಮಾರ್ಕೆಟ್‌ಗೆ ಮೇಯರ್ ಭೇಟಿ

BBMP Deploy 50 Ambulances For Coronavirus Patients

ಬೆಂಗಳೂರು ನಗರ ಜಿಲ್ಲೆಗೆ 6, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 4 ಅಂಬ್ಯುಲೆನ್ಸ್ ನಿಗದಿ ಮಾಡಲಾಗಿದೆ. ಬಿಬಿಎಂಪಿಯ 8 ವಲಯಗಳಿಗೆ 38 ಅಂಬ್ಯುಲೆನ್ಸ್ ಮೀಸಲಾಗಿಡಲಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ 2 ಹೆಚ್ಚುವರಿ ಅಂಬ್ಯುಲೆನ್ಸ್ ನಿಂತಿರಲಿದೆ.

ಬಿಬಿಎಂಪಿ ಅಂತಿಮಗೊಳಿಸಿದ 7 ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳು ಬಿಬಿಎಂಪಿ ಅಂತಿಮಗೊಳಿಸಿದ 7 ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳು

ಅಂಬ್ಯುಲೆನ್ಸ್‌ಗಳನ್ನು ಅಗತ್ಯವಿರುವ ಸ್ಥಳಕ್ಕೆ ಕಳಿಸಲು ಕಂಟ್ರೋಲ್ ರೂಂ ನಿರ್ಮಾಣ ಮಾಡಲಾಗುತ್ತಿದೆ. ಸೋಂಕಿತರ ಜೊತೆ ಸಂಪರ್ಕದಲ್ಲಿರುವವರನ್ನು ಪರೀಕ್ಷೆಗೆ ಕರೆದುಕೊಂಡು ಹೋಗಲು ಅಂಬ್ಯುಲೆನ್ಸ್ ಕಳಿಸಲಾಗುತ್ತದೆ.

ಬಿಬಿಎಂಪಿ ಕೋವಿಡ್ - 19 ಸೋಂಕಿನಿಂದ ಮೃತಪಟ್ಟ ರೋಗಿಗಳ ಶವಗಳನ್ನು ಸಾಗಣೆ ಮಾಡಲು 8 ಅಂಬ್ಯುಲೆನ್ಸ್‌ಗಳನ್ನು ಮೀಸಲಾಗಿಡಲಿದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅಂಬ್ಯುಲೆನ್ಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

English summary
BBMP has decided to deploy 50 ambulances in the city to take Covid-19 patients and primary and secondary contacts to institutional quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X