ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕುಸಿಯುವ ಹಂತದಲ್ಲಿದ್ದ ಕಟ್ಟಡ ನೆಲಸಮಗೊಳಿಸಿದ ಬಿಬಿಎಂಪಿ; ವಿಡಿಯೋ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ಬೆಂಗಳೂರಿನ ಕಮಲಾ ನಗರದ ಕಟ್ಟಡ ಕುಸಿತ ಹಂತ ತಲುಪಿದ್ದ ಪ್ರಕರಣದಲ್ಲಿ ಮೂರು ಅಂತಸ್ತಿನ ಕಟ್ಟಡ ತೆರವು ಕಾರ್ಯಾಚರಣೆ ನಡೆಸಲಾಯಿತು. ಜೆಸಿಬಿ ಮೂಲಕ ಕಟ್ಟಡವನ್ನು ನೆಲಸಮ ಮಾಡಲಾಗಿದೆ.

Recommended Video

ಬಿಬಿಎಂಪಿಯಿಂದ ಕುಸಿತದ ಹಂತದಲ್ಲಿರುವ ಕಟ್ಟಡ ತೆರವು ಕಾರ್ಯಾಚರಣೆ | Oneindia Kannada

ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವು ಮಾಡಲು ತಿಳಿಸಿದ್ದ ಬಿಬಿಎಂಪಿ ವಿಶೇಷ ಆಯುಕ್ತ ಗೌರವ್ ಗುಪ್ತಾ, ಹಿಟಾಚಿ ಮೂಲಕ ಕಟ್ಟಡ ತೆರವು ಕಾರ್ಯಾಚರಣೆ ಮಾಡಲಾಯಿತು. ಈ ವೇಳೆ ಅಕ್ಕ ಪಕ್ಕದ ಮನೆಗಳಲ್ಲಿ ವಸ್ತುಗಳನ್ನು ಖಾಲಿ ಮಾಡಲು ಬಿಡದ ಹಿನ್ನೆಲೆಯಲ್ಲಿ ಬಿಲ್ಡಿಂಗ್ ನಿವಾಸಿಗಳ ಆಕ್ರೋಶಗೊಂಡ ಘಟನೆ ನಡೆಯಿತು.

''ನಾವು ಇಡೀ ಜೀವಮಾನ ನಾವು ಕಷ್ಟಪಟ್ಟು ಮನೆ ಮಾಡಿಕೊಂಡಿದ್ದವೆ, ನಮ್ಮ ಎಲ್ಲ ವಸ್ತುಗಳು ಮನೆಯೊಳಗೆ ಇವೆ. ಧರಿಸಿದ ಬಟ್ಟೆಯಲ್ಲಿ ನಾವು ಹೊರಗೆ ಬಂದಿದ್ದೇವೆ, ನಾವು ಈಗ ಬೀದಿಯಲ್ಲಿ ಇದ್ದೇವೆ, ನಮಗೆ ಯಾರು ದಿಕ್ಕು,'' ಎಂದು ಅಳಲು ತೋಡಿಕೊಂಡರು.

Bengaluru: BBMP demolished 3 Storied Building That Was On The Verge Of Collapse In Kamala Nagar

"ನಮ್ಮ ದಾಖಲೆ ಪತ್ರಗಳು ಸಹ ಮನೆಯೊಳಗೆ ಇದ್ದವು, ನಮಗೆ ಮನೆಯೊಳಗೆ ಹೋಗಲು ಅನುಮತಿ ನೀಡುತ್ತೇವೆ ಎಂದು ಹೇಳಿದ್ದರು. ಪೊಲೀಸರನ್ನು ಕೇಳಿದರೆ ಬಿಬಿಎಂಪಿಯವರ ಮೇಲೆ ಹೇಳುತ್ತಾರೆ. ಬಿಬಿಎಂಪಿಯವರನ್ನು ಕೇಳಿದರೆ ಇನ್ನೊಬ್ಬರ ಮೇಲೆ ಹೇಳುತ್ತಾರೆ. ಯಾರೂ ಸಹ ನಮಗೆ ಸಹಾಯ ಮಾಡುತ್ತಿಲ್ಲ. ಅಲ್ಲದೆ ಎನ್‌ಡಿಆರ್‌ಎಫ್ ತಂಡ ಬಂದು ನಮ್ಮ ವಸ್ತುಗಳನ್ನು ಹೊರಗೆ ತೆಗೆದು ಕೊಡುವ ಭರವಸೆ ನೀಡಿದ್ದರು, ಇದು ಯಾವುದೂ ಆಗಿಲ್ಲ," ಎಂದು ಕಟ್ಟಡ ನಿವಾಸಿಗಳು ಆಕ್ರೋಶ ಹೊರಹಾಕಿದರು.

ಕಮಲಾ ನಗರದ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ತೆರವು ಕಾರ್ಯಚರಣೆಯನ್ನು ಬಿಬಿಎಂಪಿ ಮುಗಿಸಿದ್ದು, ಎರಡು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಸದ್ಯ ಒಂದು ಮನೆಯಲ್ಲಿ‌ ಮಾತ್ರ ಕೆಲ ವಸ್ತುಗಳನ್ನು ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ.

ನೆಲಸಮವಾದ ಎರಡು ಬಿಲ್ಡಿಂಗ್ ನಿವಾಸಿಗಳಿಗೆ ಪರಿಹಾರದ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಕಟ್ಟಡದ ಅವಶೇಷಗಳನ್ನು ಇಂದು ಅಥವಾ ನಾಳೆ ತೆರವುಗೊಳಿಸುವ ಸಾಧ್ಯತೆ ಇದೆ. ನೆಲಸಮವಾದ ಬಿಲ್ಡಿಂಗ್‌ನ ಪಕ್ಕದಲ್ಲಿರುವ ವಸ್ತು ತೆಗೆದುಕೊಳ್ಳಲು ಪೊಲೀಸರು ಅವಕಾಶ ನೀಡಿದರು.

Bengaluru: BBMP demolished 3 Storied Building That Was On The Verge Of Collapse In Kamala Nagar


ಸಚಿವ ಕೆ. ಗೋಪಾಲಯ್ಯಗೆ ಫೋನ್ ಮಾಡಿ ಮನವಿ ಮಾಡಿಕೊಂಡ ಬಳಿಕ, ಒಳಗಡೆ ಇರುವ ವಸ್ತು ತರುವುದಕ್ಕೆ ಪೊಲೀಸರು ಅವಕಾಶ ಕಲ್ಪಿಸಿದರು. ಆಗ ಮನೆಯಲ್ಲಿದ್ದ ಟಿವಿ, ಸಿಲಿಂಡರ್ ಮತ್ತು ದಾಖಲೆಗಳ ಹೊತ್ತು ತಂದರು.

ನೆಲಸಮವಾದ ಮನೆಯಲ್ಲಿ ವಾಸವಿದ್ದ ಧನಲಕ್ಷ್ಮಿ ಮಾಧ್ಯಮಗಳೊಂದಿಗೆ ಮಾತನಾಡಿ, "ತುಂಬಾ ವರ್ಷಗಳಿಂದ ವಾಸವಾಗಿದ್ದೇವೆ. ಎಂಟು ಲಕ್ಷ ರೂ. ಹಣವನ್ನು ಮಾಲೀಕರಿಗೆ ಕೊಟ್ಟಿದ್ದೇವೆ. ದೀಪಾವಳಿಗೆ ನಮ್ಮ ಮಗಳ ಮದುವೆ ಫಿಕ್ಸ್ ಆಗಿತ್ತು. ಹೀಗಾಗಿ ಸುಮಾರು ಲಕ್ಷಾಂತರ ರೂಪಾಯಿ ಒಡವೆಯನ್ನು ಮಾಡಿಸಿದ್ದೇವೆ. ಒಡವೆ, ವಸ್ತುಗಳು ಎಲ್ಲಾ ಮನೆಯಲ್ಲಿ ಇವೆ. ನಾವು ಹೇಗೆ ಮದುವೆ ಮಾಡೋದು," ಎಂದು ಕಣ್ಣೀರು ಹಾಕಿದರು.

''ನಾನು ಗಾರ್ಮೆಂಟ್ಸ್ ಹೋಗ್ತೀನಿ, ಗಂಡ ನೀರು ಬಿಡುವ ಕೆಲಸಕ್ಕೆ ಹೋಗುತ್ತಾರೆ. ಒಂದು ಕ್ಷಣ ಸ್ವಲ್ಪ ಯಾಮಾರಿದರೂ ಮಗಳು ರೂಮಲ್ಲಿ ಸಿಲುಕಿಕೊಂಡು ಬಿಡುತ್ತಿದ್ದಳು. ಅದೃಷ್ಟವಶಾತ್ ಪಾರಾಗಿದ್ದಾಳೆ. ಎಲ್ಲಾ ಮನೆಯಲ್ಲೇ ಬಿಟ್ಟು, ನಾವು ಹೊರಗಡೆ ಓಡಿ ಬಂದೀವಿ,'' ಎಂದು ದುಃಖ ಹೊರಹಾಕಿದರು.

ಇನ್ನು ಇದೇ ವೇಳೆ ಮನೆಯಲ್ಲಿದ್ದ ವಸ್ತುಗಳನ್ನು ಕಳೆದುಕೊಂಡ ಜನರು ಕಣ್ಣೀರು ಹಾಕಿದ್ದಾರೆ. ಕಷ್ಟಪಟ್ಟು ಸಂಪಾದಿಸಿದ ಸಾಮಾಗ್ರಿಗಳು ಕಣ್ಮುಂದೆಯೇ ಹಾಳಾಯ್ತು. ಈಗ ಎಲ್ಲಿ ಹೋಗೋಣ ಅಂತ ವಾಸವಿದ್ದವರ ನೋವು ತೋಡಿಕೊಂಡರು. ಆಗ ಕಣ್ಣೀರು ಹಾಕುತ್ತಿರುವವರನ್ನು ಸಮಾಧಾನ ಪಡಿಸಲು ಪೊಲೀಸರು ಮುಂದಾದರು. ಮನೆಗೊಬ್ಬರಂತೆ ಬನ್ನಿ, ನಿಮ್ಮ ಜೊತೆಗಿರುತ್ತೇವೆ ಎಂದು ಪೊಲೀಸರು ಭರವಸೆ ನೀಡಿದರು.

ಪರಿಶೀಲನೆ ನಡೆಸಿದ್ದ ಸಚಿವ ಕೆ. ಗೋಪಾಲಯ್ಯ
ಇದಕ್ಕೂ ಮುನ್ನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವೃಷಭಾವತಿ ನಗರದಲ್ಲಿ ಮೂರು ಅಂತಸ್ತಿನ ಕಟ್ಟಡದ ಕೆಳ ಮಹಡಿ ಕುಸಿಯುವ ಹಂತದಲ್ಲಿದ್ದ ಹಿನ್ನೆಲೆಯಲ್ಲಿ ಇಂದು ಸ್ಥಳೀಯ ಶಾಸಕ ಹಾಗೂ ಅಬಕಾರಿ ಸಚಿವ ಕೆ. ಗೋಪಾಲಯ್ಯ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, "ಮನೆಯಲ್ಲಿ ಬಾಡಿಗೆಗೆ ಇದ್ದವರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದವರನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಅವರುಗಳಿಗೆ ವಸತಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ," ಎಂದು ತಿಳಿಸಿದರು.

"ಸುತ್ತಮುತ್ತ ಇರುವ ಯಾರಿಗೂ ಹಾನಿಯಾಗದಂತೆ ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದ ಸಚಿವರು, ಮನೆಯ ಮಾಲೀಕರು ನಾಪತ್ತೆಯಾಗಿದ್ದು, ಪೊಲೀಸರು ಹುಡುಕುತ್ತಿದ್ದಾರೆ," ಎಂದರು.

ಎನ್‌ಡಿಆರ್‌ಎಫ್ ತಂಡವನ್ನು ನಿಯೋಜನೆಗೊಳಿಸಿದ್ದೇವೆ. ಸುಮಾರು 15 ವರ್ಷಗಳ ಹಳೆಯ ಕಟ್ಟಡ ಇದಾಗಿದ್ದು, ಕಟ್ಟಡ ಅದಾಗಿ ಅದೇ ಕುಸಿಯಬೇಕಾ? ಡೆಮಾಲಿಶ್ ಮಾಡಬೇಕಾ ನೋಡಬೇಕಿದೆ ಎಂದಿದ್ದರು.

ನಿರಾಶ್ರಿತರಿಗೆ ನಮ್ಮ ಸರ್ಕಾರದ ಕಡೆಯಿಂದ ನೆರವು ನೀಡಲಾಗುವುದು ಎಂದು ತಿಳಿಸಿದರು. ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ತಜ್ಞರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಟ್ಟಡದ ನಿವಾಸಿ ಧನಲಕ್ಷ್ಮಿ ಮಾತನಾಡಿ, "ಮನೆಯ ಮಾಲಕಿ ರಾಜೇಶ್ವರಿ ಅನೇಕ ದಿನಗಳಿಂದ ಪತ್ತೆಯಿಲ್ಲ, ಕಟ್ಟಡ ಬೀಳುವ ಆತಂಕ ನಮಗೂ ಇತ್ತು. ಈಗಾಗಲೇ ಅನೇಕರು ಮನೆ ಖಾಲಿ ಮಾಡಿದ್ದಾರೆ. ನಾವೂ ಸಹ ಬೇರೆ ಕಡೆ ಮನೆ ಹುಡುಕಾಟದಲ್ಲಿದ್ದೇವೆ," ಎಂದು ತಿಳಿಸಿದರು.

ಮಳೆಯಿಂದ ಕಟ್ಟಡದ ಕೆಳ ಮಹಡಿಯ ಗೋಡೆ ಕುಸಿಯುವ ಭೀತಿ ಇತ್ತು, ವಿಷಯ ತಿಳಿಸುತ್ತಿದ್ದಂತೆ ನಮ್ಮ ಶಾಸಕರು ಬಂದಿದ್ದಾರೆ. ಮನೆಯಲ್ಲಿ ಕೆಲ ಸಾಮಾನುಗಳ ಹಾಗೆಯೇ ಇವೆ. ನಮಗೆ ಪರಿಹಾರ ಸಿಗುವ ಭರವಸೆಯಿದೆ ಎಂದರು.

ಇನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ''ಮಳೆಯಿಂದಾಗಿ ಕಟ್ಟಡದ ಪಾಯ ಕುಸಿದಿದೆ. ಮೂರು ಅಂತಸ್ತಿನ ಕಟ್ಟಡ ಕುಸಿಯುವ ಹಂತದಲ್ಲಿದ್ದು, ಇತ್ತೀಚಿಗೆ ಬಿಬಿಎಂಪಿ ಲಿಸ್ಟ್ ಮಾಡಿದ್ದ ಕಟ್ಟಡದಲ್ಲಿ ಇದೂ ಸಹ ಸೇರಿತ್ತು. ಸದ್ಯಕ್ಕೆ ಕುಸಿಯುವ ಹಂತದಲ್ಲಿದೆ, ನಿವಾಸಿಗಳನ್ನು ತೆರವುಗೊಳಿಸಿದ್ದೇವೆ. ಸಬ್ ಡಿವಿಷನ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ,'' ಎಂದು ಹೇಳಿದ್ದರು.

ಬುಧವಾರ ಬೆಳಿಗ್ಗೆ 9ರ ನಂತರ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಕಟ್ಟಡದ ಮಾಲಕಿ ರಾಜೇಶ್ವರಿ ನಾಪತ್ತೆಯಾಗಿದ್ದರಿಂದ, ಕಟ್ಟಡದ ಮಾಲೀಕ ಇರದಿದ್ದರೆ ಸಾರ್ವಜನಿಕ ಹಿತಾಸಕ್ತಿಯನ್ವಯ ಅಧಿಕಾರ ಚಲಾವಣೆ ಮಾಡಿ ಕಟ್ಟಡ ತೆರವು ಮಾಡಲಾಗುವುದು ಎಂದು ಗೌರವ್ ಗುಪ್ತ ತಿಳಿಸಿದ್ದಾರೆ.

ಬ್ಯಾಂಕಿನಿಂದ ಜಪ್ತಿಯಾಗಿರುವ ಜಾಗ ಇದಾಗಿದ್ದು, ಶೇಷಾದ್ರಿಪುರಂ ಸಿಂಡಿಕೇಟ್ ಬ್ಯಾಂಕಿನ ಸುಪರ್ದಿಯಲ್ಲಿದೆ. ಅನೇಕ ತಿಂಗಳುಗಳಿಂದ ಮಾಲಕಿ ರಾಜೇಶ್ವರಿ ನಾಪತ್ತೆಯಾಗಿದ್ದಾರೆ.

ಶಂಕರ್‌ನಾಗ್ ಬಸ್ ನಿಲ್ದಾಣದ ಅಕ್ಕಪಕ್ಕದಲ್ಲಿರುವ ಮನೆಗಳೆಲ್ಲಾ ತಗ್ಗು ಪ್ರದೇಶದಲ್ಲಿದೆ. ಜೊತೆಗೆ ಇನ್ನು ಎರಡು ದಿನಗಳವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ಮನೆಗಳ ಸರ್ವೆ ಮಾಡಲು ಕಾರ್ಯನಿರ್ವಹಣಾ ಅಭಿಯಂತರರಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸೂಚನೆ ನೀಡಿದ್ದರು.

English summary
BBMP demolished 3 storied building that was on the verge of collapse in Kamala Nagara of Mahalakshmi Layout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X