ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 10 ದಿನದಲ್ಲಿ ಕೊರೊನಾ ಏರಿಕೆ; 9 ಕಂಟೇನ್ಮೆಂಟ್ ಝೋನ್ ಘೋಷಣೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಲ್ಕು ವಲಯಗಳ ಒಂಬತ್ತು ರಸ್ತೆಗಳನ್ನು ಸೀಲ್ ಮಾಡಿದ್ದು, ಅವುಗಳನ್ನು ಕಂಟೇನ್ಮೆಂಟ್ ಝೋನ್ ಗಳೆಂದು ಘೋಷಿಸಿದೆ.

ಈ ಕಂಟೇನ್ಮೆಂಟ್ ವಲಯಗಳಿಗೆ ಪ್ರವೇಶಿಸುವವರ ಹಾಗೂ ಅಲ್ಲಿಂದ ಹೊರಬರುವವರ ಮೇಲೆ ನಿಗಾ ಇಡಲಾಗಿದ್ದು, ನಾಗರಿಕ ಸಂಸ್ಥೆಗಳು ಅಲ್ಲಿನ ಜನರಿಗೆ ಅಗತ್ಯ ವಸ್ತುಗಳ ಸರಬರಾಜು ಮಾಡುತ್ತಿವೆ. 100 ಮೀಟರ್‌ಗಳ ವ್ಯಾಪ್ತಿಯಲ್ಲಿ ಐದು ಪ್ರಕರಣಗಳಿಗೂ ಹೆಚ್ಚು ಪ್ರಕರಣಗಳು ಕಂಡುಬಂದರೆ, ಅದನ್ನು ಕಂಟೇನ್ಮೆಂಟ್ ಝೋನ್ ಎಂದು ಬಿಬಿಎಂಪಿ ಗುರುತಿಸಿದೆ. ಮುಂದೆ ಓದಿ...

 ಹುಷಾರ್; ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ಎಚ್ಚರಿಕೆ ಕೊಟ್ಟ ಬಿಬಿಎಂಪಿ ಆಯುಕ್ತ ಹುಷಾರ್; ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ಎಚ್ಚರಿಕೆ ಕೊಟ್ಟ ಬಿಬಿಎಂಪಿ ಆಯುಕ್ತ

 ಹತ್ತು ದಿನಗಳಲ್ಲಿ ಏರಿಕೆಯಾದ ಸೋಂಕು

ಹತ್ತು ದಿನಗಳಲ್ಲಿ ಏರಿಕೆಯಾದ ಸೋಂಕು

ಫೆಬ್ರವರಿ 15ರಿಂದ 25ರವರೆಗೆ ಈ ಒಂಬತ್ತು ಕಂಟೇನ್ಮೆಂಟ್ ಝೋನ್‌ಗಳಿಂದ 248 ಹೊಸ ಪ್ರಕರಣಗಳು ದಾಖಲಾಗಿವೆ. ಇದುವರೆಗೂ ಈ ಸೋಂಕಿತರ 690 ಪ್ರಾಥಮಿಕ ಹಾಗೂ 609 ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ.

 ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಪ್ರಕರಣ

ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಪ್ರಕರಣ

ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಪ್ರದೇಶದಿಂದ 141 ಪ್ರಕರಣಗಳು ದಾಖಲಾಗಿದ್ದು, ಪೂರ್ವ ವಲಯದಲ್ಲಿ 42 ಹಾಗೂ ಯಲಹಂಕದಲ್ಲಿ 28 ಪ್ರಕರಣಗಳು ದಾಖಲಾಗಿವೆ.

ಜ್ವರವಿದ್ರೆ ಅಪಾರ್ಟ್‌ಮೆಂಟ್ ಒಳಗೆ ಬರಬೇಡಿ: ನಿವಾಸಿ ಅಸಮಾಧಾನಜ್ವರವಿದ್ರೆ ಅಪಾರ್ಟ್‌ಮೆಂಟ್ ಒಳಗೆ ಬರಬೇಡಿ: ನಿವಾಸಿ ಅಸಮಾಧಾನ

 ಅಪಾರ್ಟ್‌ಮೆಂಟ್‌ನ 169 ನಿವಾಸಿಗಳಿಗೆ ಸೋಂಕು

ಅಪಾರ್ಟ್‌ಮೆಂಟ್‌ನ 169 ನಿವಾಸಿಗಳಿಗೆ ಸೋಂಕು

ಆದರೆ ಯಾರಿಗೂ ಬ್ರಿಟನ್ ರೂಪಾಂತರ ಸೋಂಕು ಕಂಡುಬಂದಿಲ್ಲ. ಮಹಾರಾಷ್ಟ್ರ ಹಾಗೂ ಕೇರಳದಿಂದ ಬಂದವರಲ್ಲಿ ಕೊರೊನಾ ಪ್ರಕರಣ ಕಂಡುಬಂದಿದೆ ಎಂದು ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ಪಿ ರಾಜೇಂದ್ರ ಚೋಳನ್ ತಿಳಿಸಿದ್ದಾರೆ. 74 ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಅಪಾರ್ಟ್‌ಮೆಂಟ್‌ನ 169 ನಿವಾಸಿಗಳಿಗೆ ಸೋಂಕು ಕಾಣಿಸಿಕೊಂಡಿದೆ.

 ಅಪಾರ್ಟ್‌ಮೆಂಟ್‌ ನಿವಾಸಿಗಳಲ್ಲಿ ಸೋಂಕು

ಅಪಾರ್ಟ್‌ಮೆಂಟ್‌ ನಿವಾಸಿಗಳಲ್ಲಿ ಸೋಂಕು

ಫೆಬ್ರವರಿ 13ರಂದು ಕಾವಲ್ ಬೈರಸಂದ್ರದ ಮಂಜುಶ್ರೀ ನರ್ಸಿಂಗ್ ಕಾಲೇಜಿನಲ್ಲಿ 42 ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿದ್ದು, ಅವರೆಲ್ಲರೂ ಕೇರಳದವರಾಗಿದ್ದರು. ಫೆಬ್ರವರಿ 15ರಂದು ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನ 104 ನಿವಾಸಿಗಳಲ್ಲಿ ಕೊರೊನಾ ದೃಢಪಟ್ಟಿದ್ದು, ಅದರಲ್ಲಿ 96 ಮಂದಿ 60 ವಯಸ್ಸಿನ ಮೇಲ್ಪಟ್ಟವರಾಗಿದ್ದರು. ಫೆಬ್ರವರಿ 23ರಂದು ಮತ್ತೊಂದು ಅಪಾರ್ಟ್‌ಮೆಂಟ್‌ನಲ್ಲಿ ಹತ್ತು ಪ್ರಕರಣಗಳು ಕಂಡುಬಂದಿವೆ. ಮಹದೇವಪುರ ವಲಯದ ಎಸ್‌ಜೆಆರ್ ವಾಟರ್‌ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಈ ಪ್ರಕರಣಗಳು ಪತ್ತೆಯಾಗಿವೆ.

Recommended Video

ರಾಜಧಾನಿಯಲ್ಲಿ ಡೆಡ್ಲಿ ವೈರಸ್ ಅಟ್ಟಹಾಸ-BBMP ವ್ಯಾಪ್ತಿಯ 9 ಕಂಟೇನ್ಮೆಂಟ್ ಝೋನ್ ಘೋಷಣೆ | Oneindia Kannada

English summary
BBMP has sealed off nine roads in four zones and declared it as containment zones,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X