ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಯಮ ಬಾಹಿರ ಪೆಟ್ರೋಲ್ ಬಂಕ್ ತೆರವಿಗೆ ಬಿಬಿಎಂಪಿ ನಿರ್ಧಾರ

|
Google Oneindia Kannada News

ಬೆಂಗಳೂರು, ಜನವರಿ 27: ಬಫರ್‌ಜೋನ್‌ಗಳಲ್ಲಿ ನಿಯಮ ಉಲ್ಲಂಘಿಸಿ ರಚಿಸಲಾಗಿರುವ ಪೆಟ್ರೋಲ್ ಬಂಕ್ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಶೀಘ್ರವೇ ಅಂತಹ ಪೆಟ್ರೋಲ್‌ ಬಂಕ್‌ಗಳನ್ನು ತೆರವುಗೊಳಿಸಲು ಬಿಬಿಎಂಪಿ ನಿರ್ಧರಸಿದೆ.

ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎಸ್.ಅಮರೇಶ್ ಅವರು ಬಫರ್ ಜೋನ್‌ನಲ್ಲಿ ಮಾಲೀಕ ಷಾ ಎಂಬುವವರು ಪೆಟ್ರೋಲ್ ಬಂಕ್ ನಿರ್ಮಿಸಿರುವ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ದಾಖಲೆ ಸಮೇತ ದೂರು ನೀಡಿದ್ದರು.

ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ, ಜಾಹೀರಾತು ಬೈಲಾ ತಿದ್ದುಪಡಿ: ಬಿಬಿಎಂಪಿ ಆಯುಕ್ತ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ, ಜಾಹೀರಾತು ಬೈಲಾ ತಿದ್ದುಪಡಿ: ಬಿಬಿಎಂಪಿ ಆಯುಕ್ತ

ಬಿಬಿಎಂಪಿ ಅಧಿಕಾರಿಗಳ ನಕಲಿ ಸಹಿ ಬಳಸಿ ಪ್ಲಾನ್ ಸಿದ್ಧಪಡಿಸಿ ಕೊಂಡಿರುವ ಬಗ್ಗೆ ಅಧಿಕಾರಿಗಳು ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ವರದಿ ನೀಡಿದ್ದಾರೆ. ಅಧಿಕಾರಿಗಳ ವರದಿಯನ್ನಾಧರಿಸಿ ಮಂಜುನಾಥ್ ಪ್ರಸಾದ್ ಅವರು ಬಂಕ್ ತೆರವುಗೊಳಿಸಿ ನಕಲಿ ಪ್ಲಾನ್ ತಯಾರಿಸಿಕೊಂಡಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

BBMP Decided To Evacuate Illegal Petro Bunk

Recommended Video

Delhiಯಲ್ಲಿ ಪ್ರತಿಭಟನೆಯ ವೇಳೆ ಟ್ರ್ಯಾಕ್ಟರ್ ಮುಗುಚಿ Farmers Death | Oneindia Kannada

ಅಮರೇಶ್ ಅವರು ನೀಡಿದ ದೂರಿನ ಮೇರೆಗೆ ಮಂಜುನಾಥ್ ಪ್ರಸಾದ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪೆಟ್ರೋಲ್ ಬಂಕ್ ಬಫರ್ ಜೋನ್‌ನಲ್ಲಿರುವುದು ಕಂಡುಬಂದಿದ್ದು, ಬಂಕ್‍ನ ನಕ್ಷೆ ಪರಿಶೀಲಿಸಿದಾಗ ಪ್ಲಾನ್ ಕೂಡ ಬೋಗಸ್ ಎಂಬುದು ಗೊತ್ತಾಗಿದೆ.

English summary
The BBMP has taken action against the petrol bunk, which has been created in violation of the buffer zones.The BBMP has decided to clear such petrol bunks soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X