ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ ಸದ್ಯಕ್ಕಿಲ್ಲ; ಆಡಳಿತಾಧಿಕಾರಿ ನೇಮಕ

|
Google Oneindia Kannada News

ಬೆಂಗಳೂರು, ಆಗಸ್ಟ್ 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ಸದಸ್ಯರ ಅವಧಿ ಸೆಪ್ಟೆಂಬರ್ 10ಕ್ಕೆ ಕೊನೆಗೊಳ್ಳಲಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಚುನಾವಣೆ ನಡೆಯುವುದು ತಡವಾಗಬಹುದು.

Recommended Video

Unlock 4.0 : ಚಿತ್ರಮಂದಿರ , ಮೆಟ್ರೋ , ಶಾಲಾ ಕಾಲೇಜು ಸೆಪ್ಟೆಂಬರ್‌ನಿಂದ ಪುನರಾರಂಭ ಸಾಧ್ಯತೆ | Oneindia Kannada

2015ರಲ್ಲಿ ಬಿಬಿಎಂಪಿ ಚುನಾವಣೆ ನಡೆದಿತ್ತು. ಮೇಯರ್ ಮತ್ತು ಉಪ ಮೇಯರ್ ಪಟ್ಟ ಒಂದು ವರ್ಷಕ್ಕೆ ಬದಲಾವಣೆ ಆಗುತ್ತದೆ. ನಾಲ್ಕು ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮೇಯರ್, ಉಪ ಮೇಯರ್ ಪಟ್ಟ ಹಂಚಿಕೊಂಡಿದ್ದವು. ಈಗ ಬಿಬಿಎಂಪಿಯ ಆಡಳಿತ ಬಿಜೆಪಿ ಕೈಯಲ್ಲಿ ಇದೆ.

ಬೆಂಗಳೂರು; ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶಬೆಂಗಳೂರು; ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ

ರಾಜ್ಯ ಚುನಾವಣಾ ಆಯೋಗ ಡಿಸೆಂಬರ್‌ನಲ್ಲಿ ಬಿಬಿಎಂಪಿಯ ಚುನಾವಣೆಯನ್ನು ನಡೆಸುವ ಸಾಧ್ಯತೆ ಇದೆ. ಕೋವಿಡ್ ಪರಿಸ್ಥಿತಿಯ ಹಿನ್ನಲೆಯಲ್ಲಿ ಸದ್ಯಕ್ಕೆ ಚುನಾವಣೆ ನಡೆಯುವುದಿಲ್ಲ. ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಅವಧಿ ಮುಗಿಯುತ್ತಿದ್ದಂತೆ ಆಡಳಿತಾಧಿಕಾರಿ ನೇಮಕವಾಗುವ ನಿರೀಕ್ಷೆ ಇದೆ.

ಬಿಬಿಎಂಪಿ ಆಸ್ತಿ ತೆರಿಗೆ ಹಗರಣ; ಎಸಿಬಿ ತನಿಖೆಗೆ ಆದೇಶ ಬಿಬಿಎಂಪಿ ಆಸ್ತಿ ತೆರಿಗೆ ಹಗರಣ; ಎಸಿಬಿ ತನಿಖೆಗೆ ಆದೇಶ

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸದಸ್ಯರ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಕೆಲವು ಕಾರ್ಪೊರೇಟರ್‌ಗಳು ಸಲ್ಲಿಸಿದ್ದ ಮನವಿಯನ್ನು ತಳ್ಳಿ ಹಾಕಲಾಗಿದೆ. ಆಡಳಿತಾಧಿಕಾರಿ ಹುದ್ದೆಗೆ ಹಲವು ಐಎಎಸ್ ಅಧಿಕಾರಿಗಳ ಹೆಸರು ಕೇಳಿ ಬರುತ್ತಿದೆ.

ರಾಜಕಾಲುವೆ ನೀರಿನ ಮಟ್ಟ ತಿಳಿಯಲು ಬಿಬಿಎಂಪಿ ಸ್ಮಾರ್ಟ್ ಐಡಿಯಾ ರಾಜಕಾಲುವೆ ನೀರಿನ ಮಟ್ಟ ತಿಳಿಯಲು ಬಿಬಿಎಂಪಿ ಸ್ಮಾರ್ಟ್ ಐಡಿಯಾ

ಮತದಾರರ ಪಟ್ಟಿ ತಯಾರು

ಮತದಾರರ ಪಟ್ಟಿ ತಯಾರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್‌ಗಳು ಮರು ವಿಂಗಡನೆ ಆಗಿರುವ ಕಾರಣ ಹೊಸ ಮತದಾರರ ಪಟ್ಟಿ ಸಿದ್ದವಾಗಬೇಕಿದೆ. ಆಗಸ್ಟ್ 20ರಿಂದ ಮತದಾರರ ಪಟ್ಟಿ ತಯಾರು ಮಾಡುವ ಅಧಿಕಾರಿಗಳಿಗೆ ತರಬೇತಿ ಆರಂಭವಾಗಿದೆ. ಆಗಸ್ಟ್ 25ರಂದು ತರಬೇತಿ ಪೂರ್ಣಗೊಳ್ಳಲಿದೆ.

ಮನೆ-ಮನೆಗೆ ಭೇಟಿ

ಮನೆ-ಮನೆಗೆ ಭೇಟಿ

ಆಗಸ್ಟ್ 26ರಿಂದ ಸೆಪ್ಟೆಂಬರ್ 14ರ ತನಕ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಲು ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಅಕ್ಟೋಬರ್ 8ಕ್ಕೆ 198 ವಾರ್ಡ್ ಮತದಾರರ ಪಟ್ಟಿ ಮುದ್ರಣಗೊಳ್ಳಲಿದ್ದು, ಅಕ್ಟೋಬರ್ 19ರಂದು ಕರಡು ಪಟ್ಟಿ ಸಿದ್ಧವಾಗಲಿದೆ.

ಡಿಸೆಂಬರ್‌ನಲ್ಲಿ ಚುನಾವಣೆ

ಡಿಸೆಂಬರ್‌ನಲ್ಲಿ ಚುನಾವಣೆ

ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿಯ ಅವಧಿ ಪೂರ್ಣಗೊಂಡರೂ ಡಿಸೆಂಬರ್ ತನಕ ಚುನಾವಣೆ ನಡೆಯುವುದಿಲ್ಲ. ಕೋವಿಡ್ ಪರಿಸ್ಥಿತಿ, ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನಲೆಯಲ್ಲಿ ಚುನಾವಣೆ ತಡವಾಗಲಿದೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.

ಆಡಳಿತಾಧಿಕಾರಿ ನೇಮಕ

ಆಡಳಿತಾಧಿಕಾರಿ ನೇಮಕ

2015ರಲ್ಲಿ ಆಯ್ಕೆಯಾದ ಬಿಬಿಎಂಪಿ ಕೌನ್ಸಿಲ್ ಅವಧಿ ಅಂತ್ಯಗೊಳ್ಳುತ್ತಿದ್ದಂತೆ ಮೇಯರ್ ಮತ್ತು ಉಪ ಮೇಯರ್ ಅವಧಿ ಅಂತ್ಯಗೊಳ್ಳಲಿದೆ. ಆಗ ಬಿಬಿಎಂಪಿಯ ಆಡಳಿತ ನೋಡಿಕೊಳ್ಳಲು ಆಡಳಿತಾಧಿಕಾರಿಯನ್ನು ಸರ್ಕಾರ ನೇಮಕ ಮಾಡಲಿದೆ.

English summary
Five-year term of BBMP’s council of 198 corporators is coming to end on September 10, 2020. Due to COVID election may held in December. Karnataka government may appoint administrator for BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X