ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಚ್ಚುತ್ತಿರುವ ಸೋಂಕು; ಬೆಂಗಳೂರಲ್ಲಿ 2 ದಿನದ ಲಾಕ್ ಡೌನ್?

|
Google Oneindia Kannada News

ಬೆಂಗಳೂರು, ಜುಲೈ 07 : ಬೆಂಗಳೂರು ನಗರದಲ್ಲಿ ಎರಡು ದಿನದ ಲಾಕ್ ಡೌನ್ ಜಾರಿಗೊಳಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕಗೆ ಬಿಬಿಎಂಪಿ ಸದಸ್ಯರು ಸಲಹೆ ನೀಡಿದ್ದಾರೆ. ಕರ್ನಾಟಕದಲ್ಲಿ ಈಗ ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುತ್ತದೆ.

Recommended Video

ಕಪ್ಪು ಪಟ್ಟಿ ಕಟ್ಟಿಕೊಂಡು ಬೀದಿಗೆ ಬಂದ ಡಾಕ್ಟರ್ ಮತ್ತು ನರ್ಸ್ ಗಳು | Oneindia Kannada

ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಆರ್. ಅಶೋಕ ಬಿಬಿಎಂಪಿ ಸದಸ್ಯರ ಜೊತೆ ಚರ್ಚೆ ನಡೆಸಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ 70 ಸದಸ್ಯರು ಪಾಲ್ಗೊಂಡಿದ್ದರು.

ಬೆಂಗಳೂರಿಗೆ ಲಾಕ್ ಡೌನ್ ತೀರಾ ಅಗತ್ಯವಿದೆ; ಸಂಸದರ ಟ್ವೀಟ್ ಬೆಂಗಳೂರಿಗೆ ಲಾಕ್ ಡೌನ್ ತೀರಾ ಅಗತ್ಯವಿದೆ; ಸಂಸದರ ಟ್ವೀಟ್

ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಎರಡು ದಿನದ ಲಾಕ್ ಡೌನ್ ಜಾರಿಗೊಳಿಸಬೇಕು ಎಂದು ಸಚಿವರಿಗೆ ಸಲಹೆ ನೀಡಲಾಯಿತು. ಹಲವು ಬಿಬಿಎಂಪಿ ಸದಸ್ಯರು ಎರಡು ದಿನದ ಲಾಕ್ ಡೌನ್ ನಗರಕ್ಕೆ ಬೇಕು ಎಂಬ ಬೇಡಿಕೆ ಮುಂದಿಟ್ಟರು.

ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ! ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ!

ಪ್ರಸ್ತುತ ಕರ್ನಾಟಕ ಸರ್ಕಾರ ಭಾನುವಾರ ಮಾತ್ರ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದೆ. ಬೆಂಗಳೂರು ನಗರದಲ್ಲಿ ಶನಿವಾರ ಮತ್ತು ಭಾನುವಾರ ಲಾಕ್ ಡೌನ್ ಜಾರಿಗೊಳಿಸುವಂತೆ ಬಿಬಿಎಂಪಿ ಸದಸ್ಯರು ಸಲಹೆಯನ್ನು ನೀಡಿದರು.

ಕೋವಿಡ್ ಭೀತಿ; ಬೆಂಗಳೂರಲ್ಲಿ ಶೇ 78ರಷ್ಟು ಹಾಸಿಗೆ ಲಭ್ಯವಿದೆ ಕೋವಿಡ್ ಭೀತಿ; ಬೆಂಗಳೂರಲ್ಲಿ ಶೇ 78ರಷ್ಟು ಹಾಸಿಗೆ ಲಭ್ಯವಿದೆ

ಆರ್. ಅಶೋಕ ಹೇಳಿದ್ದೇನು?

ಆರ್. ಅಶೋಕ ಹೇಳಿದ್ದೇನು?

ಬಿಬಿಎಂಪಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಚಿವ ಆರ್. ಅಶೋಕ, "ನಿಮ್ಮ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸುತ್ತೇನೆ. ಲಾಕ್ ಡೌನ್ ಮಾಡುವ ಕುರಿತು ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ" ಎಂದು ಹೇಳಿದರು.

ವಿ. ಸೋಮಣ್ಣ ಹೇಳುವುದೇನು?

ವಿ. ಸೋಮಣ್ಣ ಹೇಳುವುದೇನು?

ವಸತಿ ಸಚಿವ ವಿ. ಸೋಮಣ್ಣ ಈ ಕುರಿತು ಮಾತನಾಡಿದ್ದು, "ಈಗ ಭಾನುವಾರ ಲಾಕ್ ಡೌನ್ ಇದೆ. ಶನಿವಾರವೂ ಲಾಕ್ ಡೌನ್ ಮಾಡುವ ಬಗ್ಗೆ ನಮಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳೇ ಅದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ" ಎಂದು ಹೇಳಿದ್ದಾರೆ.

ಬೆಂಗಳೂರಿಗೆ ಲಾಕ್ ಡೌನ್ ಬೇಕಿದೆ

"ಬೆಂಗಳೂರಿನಲ್ಲಿ ಸೋಂಕು ಹರಡುತ್ತಿರುವ ವೇಗ ನೋಡಿದರೆ ಬೆಂಗಳೂರಿಗೆ ಲಾಕ್ ಡೌನ್ ತೀರಾ ಅಗತ್ಯವಿದೆ" ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ಟ್ವೀಟ್ ಮಾಡಿದ್ದಾರೆ.

10 ಸಾವಿರ ಪ್ರಕರಣ

10 ಸಾವಿರ ಪ್ರಕರಣ

ಬೆಂಗಳೂರು ನಗರದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಸೋಮವಾರ ನಗರದಲ್ಲಿ 981 ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,561ಕ್ಕೆ ಏರಿಕೆಯಾಗಿದೆ.

English summary
Bruhat Bengaluru Mahanagara Palike (BBMP) Corporators suggested the state government to consider two days of lock down in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X