ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಚ್ಚರಿಯೋ ಅಚ್ಚರಿ; ವಸಂತ್ ಕುಮಾರ್ ಕಾಂಗ್ರೆಸ್‌ಗೆ ವಾಪಸ್!

|
Google Oneindia Kannada News

ಬೆಂಗಳೂರು, ಡಿಸೆಂಬರ್ 5 : ಚುನಾವಣೆ ವೇಳೆಯಲ್ಲಿ ಯಾರು, ಯಾರಿಗೆ ಬೆಂಬಲ ನೀಡುತ್ತಾರೆ? ಎಂಬುದು ನಿಗೂಢವಾಗಿರುತ್ತದೆ. ಬೆಂಗಳೂರಿನಲ್ಲಿಯೂ ಉಪ ಚುನಾವಣೆ ವೇಳೆ ಇಂತಹ ವಿದ್ಯಮಾನ ನಡೆದಿದೆ. ಮೊನ್ನೆ ಬಿಜೆಪಿ ಜೊತೆ ಇದ್ದವರು ಇಂದು ಕಾಂಗ್ರೆಸ್‌ಗೆ ಜೈ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು, ಬೆಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರೊಬ್ಬರು ಬಿಜೆಪಿ ಸೇರಿದ್ದರು. ಬಿಜೆಪಿ ಸೇರಿದಾಗ ಹಾಕಿದ ಹಾರದ ಹೂವು ಬಾಡುವ ಮುನ್ನವೇ ಕಾಂಗ್ರೆಸ್‌ಗೆ ವಾಪಸ್ ಆಗಿದ್ದಾರೆ. ಈ ಮೂಲಕ ಬಿಜೆಪಿ ನಾಯಕರಿಗೆ ಕೈ ಕೊಟ್ಟಿದ್ದಾರೆ.

ಶಿವಾಜಿನಗರ : ಕಾಂಗ್ರೆಸ್ ಭದ್ರಕೋಟೆಯಲ್ಲಿ ಸರವಣ ಗೆಲುವು ಸರಳವೇ?ಶಿವಾಜಿನಗರ : ಕಾಂಗ್ರೆಸ್ ಭದ್ರಕೋಟೆಯಲ್ಲಿ ಸರವಣ ಗೆಲುವು ಸರಳವೇ?

ಬಿಬಿಎಂಪಿಯಲ್ಲಿಯೂ ಆಪರೇಷನ್ ಕಮಲ ಆರಂಭವಾಯಿತೇ?, ಕಾಂಗ್ರೆಸ್ ಸದಸ್ಯರನ್ನು ಅಪಹರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಫೋಟೋ ತೆಗೆಸಲಾಯಿತೇ ಎಂಬ ತಹೇವಾರಿ ಕಥೆಗಳು ಹರಿದಾಡಲು ಆರಂಭಿಸಿದ್ದವು.

ಶಿವಾಜಿನಗರ ಚುನಾವಣೆ; ಕಾಂಗ್ರೆಸ್‌ನಿಂದ ಮೂವರು ಉಚ್ಚಾಟನೆ ಶಿವಾಜಿನಗರ ಚುನಾವಣೆ; ಕಾಂಗ್ರೆಸ್‌ನಿಂದ ಮೂವರು ಉಚ್ಚಾಟನೆ

ಎರಡು ದಿನಗಳ ಹಿಂದೆ ಯಡಿಯೂರಪ್ಪ, ಯಲಹಂಕ ಶಾಸಕ ವಿಶ್ವನಾಥ್ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದ ವಸಂತ್ ಕುಮಾರ್ ಗುರುವಾರ ಕಾಂಗ್ರೆಸ್‌ಗೆ ಮರಳಿದ್ದಾರೆ. ಮೊನ್ನೆ ಯಡಿಯೂರಪ್ಪ ಜೊತೆ ಇದ್ದವರು ಇಂದು ದಿನೇಶ್ ಗುಂಡೂರಾವ್ ಜೊತೆ ಕುಳಿತು ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಉಪ ಚುನಾವಣೆ; ಮತದಾನಕ್ಕೆ ಈ ದಾಖಲೆ ಬಳಸಬಹುದು ಉಪ ಚುನಾವಣೆ; ಮತದಾನಕ್ಕೆ ಈ ದಾಖಲೆ ಬಳಸಬಹುದು

ವಸಂತ್ ಕುಮಾರ್‌ ಕಾಂಗ್ರೆಸ್‌ಗೆ ವಾಪಸ್

ವಸಂತ್ ಕುಮಾರ್‌ ಕಾಂಗ್ರೆಸ್‌ಗೆ ವಾಪಸ್

ಬೆಂಗಳೂರಿನ ಸಂಪಂಗಿ ರಾಮನಗರದ ಬಿಬಿಎಂಪಿ ಸದಸ್ಯ ವಸಂತ್ ಕುಮಾರ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಎರಡು ದಿನಗಳ ಹಿಂದೆ ಬಿಜೆಪಿ ಸೇರಿದ್ದರು. ಗುರುವಾರ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ವಸಂತ್ ಕುಮಾರ್ ಬಿಜೆಪಿ ಸೇರಿದ್ದೇಕೆ?, ವಾಪಸ್ ಆಗಿದ್ದೇಕೆ? ಎಂಬುದಕ್ಕೆ ಉತ್ತರವನ್ನೂ ಹೇಳಿದ್ದಾರೆ.

ಬಿಜೆಪಿಯಿಂದ ವಾಪಸ್

ಬಿಜೆಪಿಯಿಂದ ವಾಪಸ್

ಡಿಸೆಂಬರ್ 3ರಂದು ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ವಸಂತ್ ಕುಮಾರ್ ಬಿಜೆಪಿ ಸೇರಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಈ ನಡೆಯ ಹಿಂದಿದ್ದಾರೆ ಎಂಬ ಆರೋಪವೂ ಇದೆ. ಆದರೆ, ಈಗ ವಸಂತ್ ಕುಮಾರ್ ಯುಟರ್ನ್ ತೆಗೆದುಕೊಂಡಿದ್ದು, ಕಾಂಗ್ರೆಸ್‌ಗೆ ವಾಪಾಸ್ ಆಗಿದ್ದಾರೆ.

ದಿನೇಶ್ ಗುಂಡೂರಾವ್ ಹೇಳಿದ್ದೇನು?

ದಿನೇಶ್ ಗುಂಡೂರಾವ್ ಹೇಳಿದ್ದೇನು?

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, "ಬಿಬಿಎಂಪಿ ಸದಸ್ಯ ವಸಂತ ಕುಮಾರ್ ಅವರ ಆಪರೇಷನ್ ಕಮಲ ವಿಫಲವಾಗಿದೆ. ಸುಳ್ಳು ಹೇಳಿ ಕರೆದುಕೊಂಡು ಹೋಗಿ ಸಿಎಂ ಭೇಟಿ ಮಾಡಿಸಿ ಪಕ್ಷ ಸೇರಿದ್ದಾರೆಂದು ಸುದ್ದಿ ಹಬ್ಬಿಸಿದ್ದ ಬಿಜೆಪಿ ಬಣ್ಣ ಬಯಲಾಗಿದೆ. ಶಿವಾಜಿನಗರ ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಇನ್ನಿಲ್ಲದ ವಿಫಲ ಕಸರತ್ತನ್ನು ಬಿಜೆಪಿ ಮಾಡಿದೆ" ಎಂದು ಆರೋಪಿಸಿದರು.

ಟೀ ಕುಡಿಯಲು ಕರೆದುಕೊಂಡು ಹೋದರು

ಟೀ ಕುಡಿಯಲು ಕರೆದುಕೊಂಡು ಹೋದರು

ಪತಿಕಾಗೋಷ್ಠಿಯಲ್ಲಿ ಮಾನಾಡಿದ ವಸಂತ್ ಕುಮಾರ್, "ಟೀ ಕುಡಿದುಕೊಂಡು ಬರೋಣ ಬನ್ನಿ ಎಂದು ನನ್ನನ್ನು ಕರೆದುಕೊಂಡು ಹೋದರು. ಬಳಿಕ ಯಡಿಯೂರಪ್ಪ ಅವರ ಮುಂದೆ ನಿಲ್ಲಿಸಿದರು. ನನಗೆ ಏನೂ ಗೊತ್ತಾಗಲಿಲ್ಲ, ಆ ನಂತರ ನನಗೆ ಬೇಜಾರಾಯಿತು. ನನ್ನ ಪಕ್ಷಕ್ಕೆ ನನ್ನಿಂದ ಹೀಗಾಯಿತಲ್ಲ ಎಂದು ನೋವಾಯಿತು. ನನಗೆ ಯಾವುದೇ ಆಮಿಷ ನೀಡಿರಲಿಲ್ಲ. ಕಾಂಗ್ರೆಸ್‌ನಲ್ಲೇ ಇರುತ್ತೇನೆ, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ" ಎಂದು ಹೇಳಿದರು.

ನನ್ನ ಅಪಹರಣ ನಡೆದಿಲ್ಲ

ನನ್ನ ಅಪಹರಣ ನಡೆದಿಲ್ಲ

"ಕಾಫಿಗೆ ಎಂದು ಕರೆದುಕೊಂಡು ಹೋಗಿದ್ದರು. ಬಳಿಕ ಯಡಿಯೂರಪ್ಪ ಅವರ ಮನೆಗೆ ಕರೆದುಕೊಂಡು ಹೋದರು. ಯಡಿಯೂರಪ್ಪ ಜೊತೆ ಫೋಟೋ ತೆಗೆಸಿಕೊಂಡಿದ್ದು ಸತ್ಯ. ನನ್ನ ಅಪಹರಣ ನಡೆದಿಲ್ಲ" ಎಂದು ವಸಂತ್ ಕುಮಾರ್ ಸ್ಪಷ್ಟನೆ ನೀಡಿದರು.

English summary
Sampangi Rama Nagar BBMP corporator Vasanth Kumar returned to Congress. Two days back he joined BJP in the presence of Chief Minister B.S.Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X