ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀವ ವೈವಿಧ್ಯತೆ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಜನವರಿ 17 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜೀವ ವೈವಿಧ್ಯತೆ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟಿದೆ. ರಾಜ್ಯದ ಮಹಾನಗರ ಪಾಲಿಕೆಗಳ ಮಟ್ಟದಲ್ಲಿ ಮೊದಲ ಬಾರಿ ಜೀವ ವೈವಿಧ್ಯತೆ ನಿರ್ವಹಣಾ ಸಮಿತಿಯನ್ನು ರಚನೆ ಮಾಡಿದೆ.

ಬಿಬಿಎಂಪಿ ಆಯುಕ್ತರು ಈ ಕುರಿತು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಮಹಾನಗರ ಪಾಲಿಕೆ ಮಟ್ಟದಲ್ಲಿ ಪರಿಸರದ ಜೀವ ವೈವಿಧ್ಯತೆ ಪ್ರಭೇಧ ಸ್ಥಳಗಳ ಸಂರಕ್ಷಣೆ ದೃಷ್ಠಿಯಿಂದ 5 ಸದಸ್ಯರ ಸಮಿತಿಯನ್ನು ರಚಿಸಿದೆ.

ಬಿಬಿಎಂಪಿ ಆಸ್ತಿಗಳ ಲೆಕ್ಕ ಕೇಳಿದ ಸಿಎಂ ಯಡಿಯೂರಪ್ಪಬಿಬಿಎಂಪಿ ಆಸ್ತಿಗಳ ಲೆಕ್ಕ ಕೇಳಿದ ಸಿಎಂ ಯಡಿಯೂರಪ್ಪ

ಕಾನೂನಾತ್ಮಕವಾಗಿ ಜೀವ ವೈವಿಧ್ಯತೆ ನಿರ್ವಹಣಾ ಸಮಿತಿಯನ್ನು ಬಿಬಿಎಂಪಿ ರಚನೆ ಮಾಡಿದೆ. ಬಿಬಿಎಂಪಿ ಮೇಯರ್ ಸಮಿತಿಯ ಅಧ್ಯಕ್ಷರು, ಬಿಬಿಎಂಪಿ ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ಮೆಟ್ರೋಗಾಗಿ ಮರ ಕಟಾವು: ಸುಪ್ರೀಂಕೋರ್ಟ್ ಮಧ್ಯಂತರ ತಡೆಮೆಟ್ರೋಗಾಗಿ ಮರ ಕಟಾವು: ಸುಪ್ರೀಂಕೋರ್ಟ್ ಮಧ್ಯಂತರ ತಡೆ

ಜೈವಿಕ ವೈವಿಧ್ಯ ಅಧಿನಿಯಮ 2002 ಪರಿಚ್ಚೇಧ 41(1) ಜೈವಿಕ ವೈವಿಧ್ಯ ನಿಯಮಗಳು 2004 ನಿಯಮ 22 ಮತ್ತು ಕರ್ನಾಟಕ ಜೈವಿಕ ವೈವಿಧ್ಯ ನಿಯಮಗಳು 2005 ನಿಯಮ 21ರ ಅಡಿ ಈ ಸಮಿತಿಯು ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

100 ದಿನಗಳ ಸಾಧನೆ ಶೂನ್ಯ ಎಂದಿದ್ದಕ್ಕೆ ಬಿಬಿಎಂಪಿ ಮೇಯರ್ ಕಿಡಿ100 ದಿನಗಳ ಸಾಧನೆ ಶೂನ್ಯ ಎಂದಿದ್ದಕ್ಕೆ ಬಿಬಿಎಂಪಿ ಮೇಯರ್ ಕಿಡಿ

ಸಮಿತಿಯ ಸದಸ್ಯರು

ಸಮಿತಿಯ ಸದಸ್ಯರು

ಜೀವ ವೈವಿಧ್ಯತೆ ನಿರ್ವಹಣಾ ಸಮಿತಿಗೆ ಭಾರ್ಗವ್ ವಿ. ಆರ್. (50), ಅಕ್ಷಯ್ ಹೆಬ್ಳೀಕರ್ (44), ವಿಜಯ್ ನಿಶಾಂತ್ ( 38), ಡಾ. ನಂದಿನಿ ಎನ್. (59), ಪ್ರೊ. ಉಷಾ ನಂದಿ (55) ಸದಸ್ಯರಾಗಿದ್ದಾರೆ. ಬಿಬಿಎಂಪಿ ಮೇಯರ್ ಅಧ್ಯಕ್ಷರಾಗಿ, ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

ಮೊದಲ ಬಾರಿಗೆ ಸಮಿತಿ ರಚನೆ

ಮೊದಲ ಬಾರಿಗೆ ಸಮಿತಿ ರಚನೆ

ಬಿಬಿಎಂಪಿ ಆಯುಕ್ತರಾದ ಬಿ. ಎಚ್. ಅನಿಲ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಹಾನಗರ ಪಾಲಿಕೆ ಮಟ್ಟದಲ್ಲಿ ಪರಿಸರದ ಜೀವ ವೈವಿಧ್ಯ ಪ್ರಭೇಧಸ್ಥಳಗಳ ಸಂರಕ್ಷಣೆ ದೃಷ್ಟಿಯಿಂದ ಜೀವವೈವಿಧ್ಯ ನಿರ್ವಹಣಾ ಸಮಿತಿಯನ್ನು ರಚನೆ ಮಾಡಲಾಗಿದೆ" ಎಂದು ಹೇಳಿದ್ದಾರೆ.

ಸಮಿತಿಯ ಕೆಲಸಗಳೇನು?

ಸಮಿತಿಯ ಕೆಲಸಗಳೇನು?

ನಗರದಲ್ಲಿ ಯಾವ ಪ್ರಭೇದದ ಸಸಿಗಳನ್ನು ಬೆಳೆಸಬಹುದು. ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಹಾನಿ ಉಂಟಾಗದಂತೆ ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಸಮಿತಿ ಚರ್ಚೆ ನಡೆಸಲಿದೆ. ಮೂರು ತಿಂಗಳಿಗೊಮ್ಮೆ ಸಭೆ ನಡೆಯಲಿದ್ದು, ತಜ್ಞರು ಸಲಹೆಗಳನ್ನು ನೀಡಲಿದ್ದಾರೆ. ಈ ಸಮಿತಿ ಮೂರು ವರ್ಷಗಳ ಕಾಲ ಅಧಿಕಾರ ಹೊಂದಿರಲಿದೆ.

14 ಮಂದಿ ಅರ್ಜಿ ಹಾಕಿದ್ದರು

14 ಮಂದಿ ಅರ್ಜಿ ಹಾಕಿದ್ದರು

ಜೀವ ವೈವಿಧ್ಯತೆ ನಿರ್ವಹಣಾ ಸಮಿತಿ ಸದಸ್ಯರಾಗಲು 14 ಜನರು ಅರ್ಜಿಯನ್ನು ಸಲ್ಲಿಸಿದ್ದರು. ಮೀಸಲಾತಿ ಅನುಗುಣವಾಗಿ ಅರ್ಹ ತಜ್ಞರನ್ನು ಅವರ ವಿದ್ಯಾರ್ಹತೆ ಹಾಗೂ ಅನುಭವದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

English summary
The Bruhat Bengaluru Mahanagara Palike (BBMP) constituted biodiversity management committee. Here are the members list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X