• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೇ 39ರಷ್ಟು ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ ಬೆಂಗಳೂರಿನ ಈ ಫ್ಲೈ ಓವರ್

|

ಬೆಂಗಳೂರು, ಸೆಪ್ಟೆಂಬರ್ 21: ಕೋರಮಂಗಲದ ಸೋನಿ ವಲ್ಡ್ ಜಂಕ್ಷನ್ ಬಳಿ ನಡೆಯುತ್ತಿರುವ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯನ್ನು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಪರಿಶೀಲನೆ ನಡೆಸಿದರು. 2.5 ಕಿ.ಮೀ. ಉದ್ದದ ಮೇಲು ಸೇತುವೆಯನ್ನು 204 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಬಿಟಿಎಂ ಲೇಔಟ್ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ, ಯೋಜನಾ ವಿಭಾಗದ ಮುಖ್ಯ ಅಭಿಯಂತರ ಎನ್. ರಮೇಶ್, ಅಧೀಕ್ಷಕ ಅಭಿಯಂತರ ಎಂ.ಲೋಕೇಶ್ ಸೇರಿದಂತೆ ಇತರೆ ಅಧಿಕಾರಿಗಳು ಬಿಬಿಎಂಪಿ ಆಯುಕ್ತ ಜೊತೆ ಉಪಸ್ಥಿತರಿದ್ದರು. ಕಾಮಗಾರಿಯ ಹಂತ, ಪೂರ್ಣಗೊಳಿಸುವ ಗುರಿ ಕುರಿತು ಚರ್ಚೆ ನಡೆಯಿತು.

ರಸ್ತೆ ಕಾಮಗಾರಿ ವಿಳಂಬ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ನಾಗೇಂದ್ರ

ಕಾಮಗಾರಿಗೆ ಅಗತ್ಯವಿರುವ ಜಾಗದ ಸಮಸ್ಯೆ ಪರಿಹರಿಸಿ ವೇಗ ನೀಡಿ ಎಂದು ಬಿಬಿಎಂಪಿ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಮಗಾರಿ ನಡೆಯುತ್ತಿರುವ ಪ್ರದೇಶದ ರಸ್ತೆಯ ದುರಸ್ತಿ, ಒಳ ಚರಂಡಿ ಕಾಮಗಾರಿ ಸೇರಿದಂತೆ ಇತರೆ ಸಮಸ್ಯೆ ಪರಿಹರಿಸಲು ಸೂಚನೆ ನೀಡಲಾಯಿತು.

ಆನಂದ್ ರಾವ್ ವೃತ್ತದ ಫ್ಲೈ ಓವರ್‌ಗೆ ಸಂಗೊಳ್ಳಿ ರಾಯಣ್ಣ ಹೆಸರು

ಈ ಫ್ಲೈ ಓವರ್ ಈಜಿಪುರ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸಲಿದೆ. ಕೋರಮಂಗಲ ಮೂಲಕ ಈ ಫ್ಲೈ ಓವರ್ ಹಾದು ಹೋಗಲಿದೆ. ಈ ಮೇಲುಸೇತುವೆ ನಿರ್ಮಾಣ ಪೂರ್ಣಗೊಂಡರೆ ವಾಹನ ಸವಾರರಿಗೆ 30 ನಿಮಿಷಗಳ ಅವಧಿ ಉಳಿತಾಯವಾಗಲಿದೆ.

ರಸ್ತೆ ವಿಸ್ತರಣೆ ಕಾಮಗಾರಿಗೆ ಒತ್ತಾಯಿಸಿ ಕೆಜಿಎಫ್ ಶಾಸಕಿ ಏಕಾಂಗಿ ಪ್ರತಿಭಟನೆ

7 ಜಂಕ್ಷನ್‌ಗಳು ಬರಲಿವೆ

7 ಜಂಕ್ಷನ್‌ಗಳು ಬರಲಿವೆ

2.5 ಕಿ.ಮೀ. ಉದ್ದದ ಮೇಲು ಸೇತುವೆಯು ಒಟ್ಟು 81 ಕಂಬಗಳನ್ನು ಒಳಗೊಂಡಿದೆ. 7 ಜಂಕ್ಷನ್‌ಗಳು ಬರಲಿವೆ. ಸೋನಿ ವಲ್ಡ್‌ ಜಂಕ್ಷನ್ ಮೂಲಕ ಇಂದಿರಾನಗರ, ಕೇಂದ್ರೀಯ ಸದನ, ವಿವೇಕನಗರ, ಜಕ್ಕಸಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇದರ ಮೂಲಕ ಹಾದು ಹೋಗುತ್ತವೆ.

ಸಂಚಾರ ದಟ್ಟಣೆಯ ಪ್ರದೇಶ

ಸಂಚಾರ ದಟ್ಟಣೆಯ ಪ್ರದೇಶ

ಈ ಫ್ಲೈ ಓವರ್ ಕೇಂದ್ರಿಯ ಸದನ ಜಂಕ್ಷನ್ ಮತ್ತು ಸೋನಿ ವಲ್ಡ್ ಜಂಕ್ಷನ್‌ಗಳ ಮೂಲಕ ಹಾದು ಹೋಗಲಿದೆ. ಕೇಂದ್ರೀಯ ಸದನ ಜಂಕ್ಷನ್ ಮೂಲಕ ತಾವರೆಕರೆ, ಎಂ.ಜಿ.ರಸ್ತೆ, ಹೊಸೂರು ರಸ್ತೆ, ಅಗರ, ಬಿಟಿಎಂ ಲೇಔಟ್, ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್, ಸರ್ಜಾಪುರ ಮುಖ್ಯರಸ್ತೆ ಹಾಗೂ ವಿವೇಕನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ.

ವಾಹನ ಸವಾರರಿಗೆ ಅನುಕೂಲ

ವಾಹನ ಸವಾರರಿಗೆ ಅನುಕೂಲ

ಫ್ಲೈ ಓವರ್ ನಿರ್ಮಾಣದಿಂದ ಈ ಭಾಗದಲ್ಲಿ ಶೇ.39.69ರಷ್ಟು ವಾಹನ ದಟ್ಟಣೆ ಕಡಿಮೆಯಾಗಲಿದೆ. ವಾಹನ ಸವಾರರ ಸಮಯ ಉಳಿತಾಯವಾಗಲಿದೆ. ಕಾಮಗಾರಿ ತ್ವರಿತವಾಗಿ ಮುಗಿದರೆ ಈ ಭಾಗದಲ್ಲಾಗುವ ಸಂಚಾರ ದಟ್ಟಣೆ ಬಹುತೇಕ ಕಡಿಮೆಯಾಗಲಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿದೆ.

  Corona ಲಸಿಕೆ ಭಾರತದಲ್ಲಿ ಉತ್ಪಾದನೆ ಆದ ಬಳಿಕ ಇರುವ ಸವಾಲುಗಳೇನು ? | Oneindia Kannada
  2017ರಲ್ಲಿ ಆರಂಭವಾದ ಕೆಲಸ

  2017ರಲ್ಲಿ ಆರಂಭವಾದ ಕೆಲಸ

  ಈ ಫ್ಲೈ ಓವರ್ ನಿರ್ಮಾಣಕ್ಕೆ ಮೇ 2017ರಲ್ಲಿ ವರ್ಕ್ ಆರ್ಡರ್ ನೀಡಲಾಯಿತು. ಸಂಚಾರಿ ಪೊಲೀಸರು ಅನುಮತಿ ನೀಡಲು 5 ತಿಂಗಳು ತೆಗೆದುಕೊಂಡರು. 2017 ರ ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭವಾಯಿತು. 2020ರ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇತ್ತು. ಕೋವಿಡ್ ಕಾರಣದಿಂದಾಗಿ ಆ ಗುರಿ ಮತ್ತೆ ಮುಂದಕ್ಕೆ ಹೋಗಿದೆ.

  English summary
  BBMP commissioner N.Manjunath Prasad reviewed the progress of construction of flyover connecting Ejipura and Hosur Road via Koramangala. 2.5 Km flyover will bypass three busy junctions Ejipura, Sony World and Kendriya Sadan. Project cost Rs 204 crores.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X