ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Rank ಬಂದ ಸರಕಾರಿ ಕಾಲೇಜು ವಿದ್ಯಾರ್ಥಿನಿಗೆ ಬಿಬಿಎಂಪಿ ನೆರವು

|
Google Oneindia Kannada News

ಬೆಂಗಳೂರು, ಜನವರಿ 8: ಬಿಕಾಂ ಪರೀಕ್ಷೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ Rank ಪಡೆದು ಗಮನ ಸೆಳೆದ ಬಿಬಿಎಂಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ರೆಹಮತುನ್ನೀಸಾ ಪ್ರತಿಭೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಬಲ ನೀಡಿದೆ.

'ಪುಲಕೇಶಿ ನಗರ ವಾರ್ಡ್ ವ್ಯಾಪ್ತಿಯ ಪ್ರೇಜರ್ ಟೌನ್‌ನ ಬಿಬಿಎಂಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬೆಂಗಳೂರು ವಿವಿಗೆ ಪ್ರಥಮ Rank ಗಳಿಸಿದ ರೆಹಮತುನ್ನೀಸಾ ಉನ್ನತ ಶಿಕ್ಷಣಕ್ಕೆ ಪಾಲಿಕೆಯಿಂದ ಅಗತ್ಯ ನೆರವು ನೀಡುವುದಾಗಿ' ಬಿಬಿಎಂಪಿ ಆಯುಕ್ತ ಬಿ ಎಚ್ ಅನಿಲಕುಮಾರ್ ಹೇಳಿದ್ದಾರೆ. ಮಂಗಳವಾರ ರೆಹಮತುನ್ನೀಸಾರನ್ನು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸನ್ಮಾನಿಸಿ ಅವರು ವಿದ್ಯಾರ್ಥಿನಿಗೆ ಶುಭ ಕೋರಿದದರು.

ಸ್ವಚ್ಛ ಸರ್ವೇಕ್ಷಣೆ 2020' ಆರಂಭ; ಈ ಬಾರಿಯ ವಿಶೇಷತೆ ಏನು?ಸ್ವಚ್ಛ ಸರ್ವೇಕ್ಷಣೆ 2020' ಆರಂಭ; ಈ ಬಾರಿಯ ವಿಶೇಷತೆ ಏನು?

ಈ ವೇಳೆ ಮಾತನಾಡಿದ ರೆಹಮತುನ್ನೀಸಾ, 'ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಹಿಂದಿಕ್ಕಿ, ಸರಕಾರಿ ಕಾಲೇಜಿನಿಂದ ನಾನು ಬೆಂಗಳೂರು ವಿವಿಗೆ ಪ್ರಥಮ Rank ಪಡೆದಿರುವುದು ಖುಷಿಯಾಗಿದೆ. ನಾನು ಯಾವುದೇ ಟ್ಯೂಷನ್‌ಗೆ ಹೋಗುತ್ತಿರಲಿಲ್ಲ. ಕಾಲೇಜಿನಲ್ಲಿ ನಮ್ಮ ಅಧ್ಯಾಪಕರು ಮಾಡುತ್ತಿದ್ದ ಪಾಠಗಳನ್ನು ಸರಿಯಾಗಿ ಅಭ್ಯಸಿಸಿದ್ದೆ. ಉನ್ನತ ಶಿಕ್ಷಣಕ್ಕೆ ಅಡಚಣೆಯಿದ್ದು, ಬಿಬಿಎಂಪಿ ಸಹಾಯ ನೀಡುತ್ತಿರುವುದು ನಿರಾಳತೆ ಮೂಡಿಸಿದೆ' ಎಂದು ತಿಳಿಸಿದ್ದಾರೆ.

BBMP Commissioner B H Anil Kumar Appreciate Bengaluru University Rank Holder

ಸರಕಾರಿ ಕಾಲೇಜಿನಲ್ಲಿ ಓದಿದರೂ, ದೊಡ್ಡ ದೊಡ್ಡ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಗಮನ ಸೆಳೆದ ರೆಹಮತುನ್ನೀಸಾ ಅವರನ್ನು ಕಳೆದ ಸೋಮವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಭಿನಂದಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಐಎಎಸ್ ಅಧಿಕಾರಿ ಆಗುವ ಇಚ್ಚೆಯನ್ನು ರೆಹಮತುನ್ನೀಸಾ ವ್ಯಕ್ತಪಡಿಸಿದ್ದಾರೆ.

English summary
BBMP Commissioner B H Anil Kumar Appreciate Bengaluru University Rank Holder. He said, Financial Support for Bengaluru University B.com Rank Holder Student Miss Rehmatunnisa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X