ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಕ್ಷಮೆ ಕೇಳಿದ ಬಿಬಿಎಂಪಿ ಆಯುಕ್ತ

|
Google Oneindia Kannada News

ಬೆಂಗಳೂರು, ಜುಲೈ 4: ರಸ್ತೆಯಲ್ಲಿ ಕುಸಿದು ಬಿದ್ದು ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದ ಘಟನೆ ನಿನ್ನೆ ಬೆಂಗಳೂರಿನ ಹನುಮಂತರನಗರದಲ್ಲಿ ವರದಿಯಾಗಿತ್ತು.

Recommended Video

Covaxin to be out in market from Aug 15th, ಆಗಸ್ಟ್ 15ಕ್ಕೆ ಸ್ವದೇಶಿ ಲಸಿಕೆ ಬಿಡುಗಡೆ|Oneindia Kannada

ಮೃತ ವ್ಯಕ್ತಿಯ ಮನೆಗೆ ಇಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಭೇಟಿ ಮಾಡಿ ಕುಟುಂಬಸ್ಥರ ಬಳಿ ಕ್ಷಮೆ ಕೇಳಿದ್ದಾರೆ. ಇಂತಹ ಘಟನೆ ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಆಯುಕ್ತರು, ಅಧಿಕಾರಿಗಳ ಪರವಾಗಿ ಕ್ಷಮೆ ಕೇಳಿದ್ದಾರೆ.

ರಸ್ತೆಯಲ್ಲಿ ಕುಸಿದು ಬಿದ್ದು ಕೊರೊನಾ ಸೋಂಕಿತ ಸಾವುರಸ್ತೆಯಲ್ಲಿ ಕುಸಿದು ಬಿದ್ದು ಕೊರೊನಾ ಸೋಂಕಿತ ಸಾವು

ಈ ಕುರಿತು ಟ್ವೀಟ್ ಮಾಡಿರುವ ಅನಿಲ್ ಕುಮಾರ್ ''ಕೊರೊನಾ ಸೋಂಕಿನಿಂದ ನಿನ್ನೆ ಮೃತಪಟ್ಟ ಹನುಮಂತನಗರದ ಗವಿಪುರಂನ ನಿವಾಸಿಯವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಲಾಯಿತು. ಇಂತಹ ಘಟನೆ ನಡೆದಿರುವುದು ವಿಷಾದನೀಯ. ಇದಕ್ಕಾಗಿ ಬಿಬಿಎಂಪಿ ಅಧಿಕಾರಿಗಳ ಪರವಾಗಿ ಕ್ಷಮೆ ಕೋರುತ್ತೇನೆ'' ಎಂದಿದ್ದಾರೆ.

ಜುಲೈ 4 ರಂದು ಕೊವಿಡ್ ಸೋಂಕಿತ ವ್ಯಕ್ತಿ ರಸ್ತೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು. ಆಂಬುಲೆನ್ಸ್ ಕರೆ ಮಾಡಿದರೆ ಮೂರು ಗಂಟೆ ಬಳಿಕ ಸ್ಥಳಕ್ಕೆ ಬಂದಿದೆ. ತಡವಾಗಿ ಆಂಬುಲೆನ್ಸ್ ಬಂದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

BBMP Commissioner Apologised to the Family Members of Covid19 Patient Who Died on the Road

ಈ ಘಟನೆ ಬಗ್ಗೆ ಮಾಹಿತಿ ಪಡೆದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಇಂದು ಅವರ ಮನೆಗೆ ಭೇಟಿ ನೀಡಿದ್ದರು.

English summary
BBMP Commissioner Apologised to the Family Members of Covid19 Patient Who Died on the Road in Hanumanthanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X