ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮೋಕ್ ಫ್ರೀ ಬೆಂಗಳೂರು: ಬಿಬಿಎಂಪಿ ಆಯುಕ್ತರ ಪಣ

|
Google Oneindia Kannada News

ಬೆಂಗಳೂರು, ಡಿಸೆಂಬರ್ 13: ಬೃಹತ್ ಬೆಂಗಳೂರು ನಗರ ಮಹಾನಗರ ಪಾಲಿಕೆ ಆಯುಕ್ತರಾದ ಬಿ. ಎಚ್. ಅನಿಲ್ ಕುಮಾರ್ ಅವರು ಇಂದು ಮುಂದಿನ ದಿನಗಳಲ್ಲಿ ತಂಬಾಕು ನಿಯಂತ್ರಣ ಕಾನೂನುಗಳನ್ನು ಇನ್ನಷ್ಟು ಕಠಿಣ ರೀತಿಯಲ್ಲಿ ಬೆಂಗಳೂರು ನಗರದಲ್ಲಿ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.

ಕ್ಯಾನ್ಸರ್ ಅಥವಾ ಮಧುಮೇಹ ಮತ್ತಿತರ ಸಾಂಕ್ರಮಿಕವಲ್ಲದ ರೋಗಗಳು(ಎನ್ ಸಿ ಡಿಎಸ್)ಗಳಿಂದ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ 70 ನಗರಗಳಲ್ಲಿ ಕೈಗೊಂಡಿರುವ ಆರೋಗ್ಯ ನಗರ ನಿರ್ಮಾಣ ಪಾಲುದಾರಿಕೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಜಗತ್ತಿನಾದ್ಯಂತ ಆರೋಗ್ಯ ನಗರಗಳ ಪಾಲುದಾರಿಕೆ 54 ನಗರಗಳಿಂದ 70 ನಗರಗಳಿಗೆ ವಿಸ್ತರಣೆಗೊಂಡಿದ್ದು, ಅದರ ಒಟ್ಟಾರೆ ಜನಸಂಖ್ಯೆ 300 ಮಿಲಿಯನ್ ಆಗಿದೆ.

ಭಾರತದಲ್ಲಿ ಇನ್ಮುಂದೆ ಎಲ್ಲಾ ಬಗೆಯ ಇ-ಸಿಗರೇಟ್ ನಿಷೇಧಭಾರತದಲ್ಲಿ ಇನ್ಮುಂದೆ ಎಲ್ಲಾ ಬಗೆಯ ಇ-ಸಿಗರೇಟ್ ನಿಷೇಧ

ಅಲ್ಲದೆ ಅನಿಲ್ ಕುಮಾರ್ ಅವರು, ಹಾಲಿ ತಂಬಾಕು ನಿಯಂತ್ರಣ ಕಾನೂನುಗಳ ಪಾಲನೆ ಬಗ್ಗೆ ಪಾಲಿಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದಲ್ಲದೆ, ಸಂಬಂಧಿಸಿದವರ ಜೊತೆಗೂಡಿ ಸಾಮಾಜಿಕ ಮಾಧ್ಯಮ, ರೇಡಿಯೋ ಶೋ ಮತ್ತು ಆಟೋ ರಿಕ್ಷಾಗಳ ಮೇಲೆ ಸಂದೇಶಗಳನ್ನು ಪಸರಿಸುತ್ತಾ ಅಭಿಯಾನವನ್ನು ಕೈಗೊಂಡಿದೆ ಎಂದರು.

BBMP commissioner Anil Kumar bats for Smoke Free Bengaluru

"ಪಾಲಿಕೆ ಕೈಗೊಂಡಿರುವ ಅಂತಹ ಕ್ರಮಗಳಿಂದಾಗಿ ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ನಡೆದ ತಂಬಾಕು ನಿಯಂತ್ರಣ ಮತ್ತು ಎನ್ ಸಿ ಡಿಎಸ್ ನಿಯಂತ್ರಿಣ ಕುರಿತ ಏಷ್ಯಾ ಪೆಸಿಫಿಕ್ ನಗರಗಳ ಸಮಾವೇಶದಲ್ಲಿ ಬೆಂಗಳೂರು ನಗರಕ್ಕೆ 2019ರ ಉತ್ತಮ ಸಾಧನೆ ನಗರಿ ಪ್ರಶಸ್ತಿ ಲಭಿಸಿದೆ. ಬೆಂಗಳೂರು ನಗರವನ್ನು ಧೂಮಪಾನರಹಿತಗೊಳಿಸಲು ಈಗಾಗಲೇ ಸಾಕಷ್ಟು ಜಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನೂ ಹೆಚ್ಚಿನ ಫಲಿತಾಂಶಗಳನ್ನು ಪಡೆಯಲು ಎರಡನೇ ಹಂತದ ಧೂಮಪಾನ ರಹಿತ ಬೆಂಗಳೂರು - ಸ್ಮೋಕ್ ಫ್ರಿ ಬೆಂಗಳೂರು ಯೋಜನೆಯಲ್ಲಿ ಇನ್ನೂ ಹೆಚ್ಚಿನ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಬೆಂಗಳೂರಲ್ಲಿ 18 ವರ್ಷದೊಳಿಗಿನ ಮಕ್ಕಳು ಇಷ್ಟೊಂದು ಸಿಗರೇಟು ಸೇದ್ತಾರಾ?ಬೆಂಗಳೂರಲ್ಲಿ 18 ವರ್ಷದೊಳಿಗಿನ ಮಕ್ಕಳು ಇಷ್ಟೊಂದು ಸಿಗರೇಟು ಸೇದ್ತಾರಾ?

ಬೆಂಗಳೂರು ನಗರದಲ್ಲಿ ಮಾರಾಟ ಸ್ಥಳ(ಪೆಟ್ಟಿಗೆ ಅಂಗಡಿಗಳು ಮತ್ತು ಇತರೆ ವಾಣಿಜ್ಯ ಮುಂಗಟ್ಟುಗಳು)ಗಳಲ್ಲಿ ಸಿಗರೇಟು ಮತ್ತು ಇತರೆ ತಂಬಾಕು ಪದಾರ್ಥಗಳ ಕಾಯ್ದೆ - 2003 ಅಥವಾ ಕೋಟ್ಪಾ ಉಲ್ಲಂಘನೆಗಳು ಅತಿ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿವೆ. ಶೇ.70.5ರಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರೂ ಅಲ್ಲಿ ತಂಬಾಕು ಪದಾರ್ಥಗಳ ಮಾರಾಟ ಎಗ್ಗಿಲ್ಲದೆ ಸಾಗಿದೆ. ಧೂಮಪಾನ ನಿಷೇಧ ಫಲಕಗಳು ಶೇ.49.8ರಷ್ಟು ಇದ್ದರೂ ಸಹ ಸುಸ್ಥಿರ ಜಾರಿ ಮತ್ತು ಜಾಗೃತಿ ಆಂದೋಲನಗಳನ್ನು ಕೈಗೊಳ್ಳಲಾಗುತ್ತಿದೆ.

ಬ್ಲೂಮ್ ಬರ್ಗ್ ಫಿಲಾಂತ್ರಫೀಸ್ ಜೊತೆಗೂಡಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಮತ್ತು ವೈಟಲ್ ಸ್ಟ್ರಾಟಜೀಸ್ ಈ ಆರೋಗ್ಯ ನಗರಿ ಪಾಲುದಾರಿಕೆಯನ್ನು ಬೆಂಬಲಿಸಿವೆ. ಇದು ಎನ್ ಸಿ ಡಿ ಮತ್ತು ಗಾಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾಕ್ಷ್ಯ ಆಧರಿಸಿದ ಪರಿಣಾಮಕಾರಿ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

English summary
BBMP commissioner Anil Kumar said strict action will be taken law will be implemented in order to make Bengaluru a Smoke(Tobacco control) free city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X