ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂತ್ರಿ ಮಾಲ್‌ನಿಂದ ಬಿಬಿಎಂಪಿ ವಸೂಲಿ ಮಾಡಿದ ತೆರಿಗೆ ಎಷ್ಟು?

|
Google Oneindia Kannada News

ಬೆಂಗಳೂರು, ಫೆಬ್ರವರಿ 14 : ಕೋಟ್ಯಾಂತರ ರೂಪಾಯಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದ ಮಂತ್ರಿ ಮಾಲ್‌ಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ಪಶ್ಚಿಮ ವಿಭಾಗದ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದವರ ಪಟ್ಟಿ ಮಾಡಿದೆ. ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಸಹ ಆಸ್ತಿ ತೆರಿಗೆಯನ್ನು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಸೇರಿತ್ತು.

'ಮಂತ್ರಿ ಮಾಲ್' ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಕೋರ್ಟ್ ಆದೇಶ!'ಮಂತ್ರಿ ಮಾಲ್' ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಕೋರ್ಟ್ ಆದೇಶ!

ಮಂತ್ರಿಮಾಲ್‌ನಿಂದ ಬಿಬಿಎಂಪಿ 9 ಕೋಟಿ 21 ಲಕ್ಷ ರೂ.ಗಳಷ್ಟು ಆಸ್ತಿ ತೆರಿಗೆಯನ್ನು ವಸೂಲಿ ಮಾಡಿದೆ. ಎಲ್ಲಾ ವಾಣಿಜ್ಯ ಸಂಕೀರ್ಣಗಳು ಸರಿಯಾದ ಸಮಯದಲ್ಲಿ ಆಸ್ತಿ ತೆರಿಗೆಯನ್ನು ಪಾವತಿ ಮಾಡಬೇಕು ಎಂದು ಬಿಬಿಎಂಪಿ ಮನವಿ ಮಾಡಿದೆ.

ಬಿಬಿಎಂಪಿಯಿಂದ ಕಡಿಮೆ ಬೆಲೆಗೆ ಆಸ್ತಿ ಹರಾಜುಬಿಬಿಎಂಪಿಯಿಂದ ಕಡಿಮೆ ಬೆಲೆಗೆ ಆಸ್ತಿ ಹರಾಜು

BBMP Collects 9 Crore Property Tax From Mantri Mall

ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಮಂತ್ರಿ ಮಾಲ್ ಮತ್ತು ಮಂತ್ರಿ ಗ್ರೀನ್ ಅಪಾರ್ಟ್‌ಮೆಂಟ್ ನಿರ್ಮಿಸಲಾಗಿದೆ ಎಂಬ ಆರೋಪ ಈಗ ಸತ್ಯ ಎಂಬುದು ಸಾಬೀತಾಗಿದೆ. ಮಂತ್ರಿ ಮಾಲ್ ವಶಕ್ಕೆ ಪಡೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಬಿಬಿಎಂಪಿ ಆಯುಕ್ತರ ವರ್ಗಾವಣೆ; ಸರ್ಕಾರದ ದ್ವೇಷ ರಾಜಕೀಯ? ಬಿಬಿಎಂಪಿ ಆಯುಕ್ತರ ವರ್ಗಾವಣೆ; ಸರ್ಕಾರದ ದ್ವೇಷ ರಾಜಕೀಯ?

ಸಂಪಿಗೆ ರಸ್ತೆಯಲ್ಲಿನ ಕೈಗಾರಿಕಾ ಪದೇಶ ಮತ್ತು ಸರ್ಕಾರಿ ಸ್ವತ್ತಿನ 4.29 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮಾಲ್ ಮತ್ತು ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗಿದೆ ಎಂದು ಬೆಂಗಳೂರು ಪ್ರಾದೇಶಿಕ ಆಯುಕ್ತರು ಮತ್ತು ಸಕ್ಷಮ ಪ್ರಾಧಿಕಾರ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ಆರ್. ರಮೇಶ್ 2016ರಲ್ಲಿ ಮಂತ್ರಿ ಮಾಲ್ ವಿರುದ್ಧ ಸರ್ಕಾರಿ ಭೂಮಿ ಒತ್ತುವರಿ ಆರೋಪ ಮಾಡಿದ್ದರು. ದೂರು ಸಲ್ಲಿಕೆ ಮಾಡಿದ್ದರು. ಕೈಗಾರಿಕಾ ಪ್ರದೇಶಗಳನ್ನು ವಸತಿ ಪ್ರದೇಶವಾಗಿ ಪರಿವರ್ತನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಸಂಪಿಗೆ ರಸ್ತೆಯಲ್ಲಿ ಈ ಹಿಂದೆ ಇದ್ದ ರಾಜಾ ಮಿಲ್‌ಗೆ ಸೇರಿದ್ದ 3.31 ಎಕರೆ ಮತ್ತು ಹನುಮಂತಪುರ ಗ್ರಾಮಕ್ಕೆ ಸೇರಿದ 37 ಗುಂಟೆ ಜಾಗ ಸೇರಿ ಒಟ್ಟು 4.29 ಎಕರೆ ಪ್ರದೇಶವನ್ನು ಅತಿಕ್ರಮಿಸಿಕೊಂಡು ಮೆ. ಹಮಾರಾ ಶೆಲ್ಟರ್ಸ್ ಎಂಬ ಸಂಸ್ಥೆ ಮಂತ್ರಿ ಸ್ಕ್ವೇರ್ ಮಾಲ್ ಮತ್ತು ಮಂತ್ರಿ ಗೀನ್ಸ್‌ ಅಪಾರ್ಟ್‌ಮೆಂಟ್ ನಿರ್ಮಿಸಲಾಗಿದೆ.

English summary
BBMP listed a large number of tax defaulters in zone wise. Collected property tax worth Rs 9 crore from Mantri Mall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X