ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸ್ಕ್ ಧರಿಸದಿದ್ದಕ್ಕೆ ಜೂನ್‌ನಲ್ಲಿ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು?

|
Google Oneindia Kannada News

ಬೆಂಗಳೂರು, ಜುಲೈ 2: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಮಾಸ್ಕ್ ಧರಿಸಿ ಎಂದು ಎಷ್ಟೇ ಹೇಳಿದರು ಬೆಂಗಳೂರು ಜನರು ಮಾತ್ರ ಕೇಳುತ್ತಿಲ್ಲ. ಹಾಗಂತ ಬಿಬಿಎಂಪಿ ಸುಮ್ಮನೆ ಕುಳಿತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಅಂದರೆ ದಂಡು ಹಾಕುತ್ತಿದೆ.

Recommended Video

China conflict results raise in Covid Medicine price | Oneindia Kannada

ಬೆಂಗಳೂರಿನಲ್ಲಿ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಜನರಿಂದ ಜೂನ್ ತಿಂಗಳಲ್ಲಿ ಬಿಬಿಎಂಪಿ ಒಟ್ಟು 57.39 ಲಕ್ಷ ದಂಡ ಸಂಗ್ರಹಿಸಿದೆ.

ಮಾಸ್ಕ್ ಧರಿಸುವುದು ಕಡ್ಡಾಯ; ದಂಡದ ಮೊತ್ತ ಇಳಿಸಿದ ಬಿಬಿಎಂಪಿಮಾಸ್ಕ್ ಧರಿಸುವುದು ಕಡ್ಡಾಯ; ದಂಡದ ಮೊತ್ತ ಇಳಿಸಿದ ಬಿಬಿಎಂಪಿ

ಜೂನ್ ತಿಂಗಳಲ್ಲಿ ಒಟ್ಟು 27421 ಜನರು ವಿರುದ್ಧ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಲಾಗಿದೆ. ಅವರಿಂದ 54,84,292 ರೂಪಾಯಿ ಸಂಗ್ರಹವಾಗಿದೆ. 1267 ಜನರು ವಿರುದ್ಧ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂಬ ಕಾರಣಕ್ಕೆ 2,55,003 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

Bbmp Collected Rs 57.39 Lakh Fine For Not Wearing Masks

ಇದುವರೆಗೂ ಲಾಕ್‌ಡೌನ್‌ ನಿಯಮ ಪಾಲಿಸಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ 98 ಮಳಿಗೆಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಅಂದ್ಹಾಗೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿಲ್ಲ ಅಂದ್ರೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ ಅಂದರೆ 200 ರೂಪಾಯಿ ದಂಡ ನಿಗದಿ ಮಾಡಲಾಗಿದೆ.

English summary
Rs 57.39 lakh fine collected for not wearing masks and not maintaining social distancing, in the month of June: BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X