ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೂ ಬಂತು ಯಾಂತ್ರಿಕ ಕಸ ಗುಡಿಸುವ ವಾಹನ...

|
Google Oneindia Kannada News

ಬೆಂಗಳೂರು, ಫೆಬ್ರವರಿ 8; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಘನತ್ಯಾಜ್ಯ ವಿಭಾಗ, ಆರೋಗ್ಯ ಇಲಾಖೆ ಹಾಗೂ ಐ-ಟಿ ಇಲಾಖೆ ವತಿಯಿಂದ ಶನಿವಾರ ವಿಧಾನಸೌಧ ಮುಂಭಾಗ ಯಾಂತ್ರಿಕ ಕಸ ಗುಡಿಸುವ ವಾಹನವನ್ನು ಲೋಕಾರ್ಪಣೆ ಮಾಡಲಾಯಿತು.

ಶನಿವಾರ ವಿಧಾನಸೌಧದ ಪೂರ್ವದ್ವಾರದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ವಿನೂತನ ವಾಹನವನ್ನು ಬಿಡುಗಡೆ ಮಾಡಿದರು. ಇದರೊಟ್ಟಿಗೆ ಸಹಾಯ 2.0 ಅಪ್ಲಿಕೇಶನ್, ನಮ್ಮ ಬೆಂಗಳೂರು ಅಪ್ಲಿಕೇಶನ್, ಪಿ.ಒ.ಎಸ್ ದಂಡ ವಿಧಿಸುವ ಯಂತ್ರ, ಆಂಬ್ಯುಲನ್ಸ್ ವಾಹನವನ್ನೂ ಲೋಕಾರ್ಪಣೆ ಮಾಡಲಾಯಿತು.

'ಮಂತ್ರಿ ಮಾಲ್' ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಕೋರ್ಟ್ ಆದೇಶ!'ಮಂತ್ರಿ ಮಾಲ್' ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಕೋರ್ಟ್ ಆದೇಶ!

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ''ಸ್ವಚ್ಛ ಸರ್ವೇಕ್ಷಣೆಯಲ್ಲಿ ಈ ಸಾರಿ ಬೆಂಗಳೂರು ಅತ್ಯುತ್ತಮ ಅಂಕಗಳನ್ನು ಪಡೆಯಲೇಬೇಕಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿಗೆ ನಮ್ಮ ಸರ್ಕಾರ ಎಲ್ಲ ಸಹಾಯ ಸಹಕಾರ ನೀಡಲು ಸಿದ್ದವಿದೆ ಎಂದರು. ಅಂತಾರಾಷ್ಟ್ರೀಯ ನಗರವಾಗಿ ಬೆಳೆಯುತ್ತಿರುವ ಬೆಂಗಳೂರನ್ನು ಸ್ವಚ್ಛವಾಗಿ ಇಡಲು ಎಲ್ಲರೂ ಶ್ರಮಿಸಬೇಕಿದೆ'' ಎಂದು ಹೇಳಿದರು.

BBMP CM Yediyurappa Launch The Auto Garbage Van

ಕಾರ್ಯಕ್ರಮದಲ್ಲಿ ಮೇಯರ್ ಎಂ ಗೌತಮ್ ಕುಮಾರ್, ಸಚಿವ ಆರ್ ಅಶೋಕ್, ವಿ‌.ಸೋಮಣ್ಣ, ಕೆ.ಗೋಪಾಲಯ್ಯ, ಬಿ.ಎ.ಬಸವರಾಜು, ಎಸ್.ಟಿ.ಸೋಮಶೇಖರ್, ಪಾಲಿಕೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು ಜಿ, ಲಕ್ಷ್ಮೀನಾರಾಯಣ, ಮೋಹನ್ ಕುಮಾರ್, ಪಾಲಿಕೆ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ಇತರೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

English summary
BBMP CM Yediyurappa Launch The Auto Garbage Van at Vidhanasoudh in Bengaluru On Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X