ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆ ನೀರು ನಿಂತರೆ ರಸ್ತೆ ಗುಂಡಿ, ಟ್ರಾಫಿಕ್ ಜಾಮ್ ಸಮಸ್ಯೆ; ಬಿಬಿಎಂಪಿ ಆಯುಕ್ತ

|
Google Oneindia Kannada News

ಬೆಂಗಳೂರು, ಜುಲೈ 01; ಬೃಹತ್ ಬೆಂಗಳೂರು ಮಹಾನಗರ (ಬಿಬಿಎಂಪಿ) ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು.

ಸದಾಶಿವನಗರ ಪೊಲೀಸ್ ಠಾಣೆಯಿಂದ ನ್ಯೂ ಬಿಇಎಲ್ ರಸ್ತೆ ಕಡೆ ಸಂಪರ್ಕಿಸುವ ರಸ್ತೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ರಸ್ತೆ ಮೇಲೆ ಮಳೆ ನೀರು ನಿಲ್ಲದಂತೆ ರಸ್ತೆ ಬದಿಯಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ ಶೋಲ್ಡರ್ ಡ್ರೈನ್ ಗಳಿಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಮೇಲೆ ಮಳೆ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟನಲ್ಲಿ ತುರ್ತಾಗಿ ಕ್ರಾಸ್ ಕಲ್ವರ್ಟ್ ಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನ್ಯೂ ಬಿಇಎಲ್ ರಸ್ತೆ ಇಂಡಿಯನ್ ಪೆಟ್ರೊಲ್ ಬಂಕ್ ಬಳಿ ಬ್ಲಾಕ್ ಆಗಿದ್ದ ಶೋಲ್ಡರ್ ಡ್ರೈನ್ ಅನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಲಾಗಿದೆ. ಈಗಿರುವ ಚರಂಡಿ ಮಾರ್ಗದಲ್ಲಿ ಬೆಸ್ಕಾಂ ಕೇಬಲ್‌ ಹಾಗೂ ಸೀವೇಜ್ ಪೈಪ್ ಲೈನ್ ಇದ್ದು, ಚರಂಡಿಯಲ್ಲಿರುವ ಸೀವೇಜ್ ಪೈಪ್ ಲೈನ್ ಬದಲಾಯಿಸಿ ಹೊಸ ಮೋರಿ ನಿರ್ಮಿಸಬೇಕು ಎಂದರು.

ಟ್ರಾನ್ಸ್ ಫಾರ್ಮ್‌ಗೆ ಅಳವಡಿಸಿರುವ ವಿದ್ಯತ್ ತಂತಿಗಳು ಪಾದಚಾರಿ ಮಾರ್ಗದಲ್ಲಿ ಹಾಗೆಯೇ ಬಿಟ್ಟಿರುವುದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗಲಿದ್ದು, ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್ ತಂತಿಗಳನ್ನು ಸರಿಯಾಗಿ ಅಳವಡಿಸಲು ಬೆಸ್ಕಾಂ ಅಧಿಕಾರಿಗಳಿಗೆ ಆದೇಶಿಸಿದರು.

ರಸ್ತೆ ಬದಿಯಿರುವ ಚರಂಡಿಗೆ ನೇರವಾಗಿ ಸೀವೇಜ್ ನೀರನ್ನು ಬಿಡುತ್ತಿರುವುದನ್ನು ಗಮಿಸಿ ಜಲಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಚರಂಡಿಗೆ ನೇರವಾಗಿ ಸೀವೇಜ್ ನೀರನ್ನು ಬಿಟ್ಟಿರುವವರ ಮೇಲೆ ಕೂಡಲೆ ನೋಟಿಸ್ ಕೊಟ್ಟು ಸಂಪರ್ಕವನ್ನು ಕಡಿತಗೊಳಿಸಬೇಕು. ಅಲ್ಲದೆ ಸಂಪರ್ಕವಿರದ ಲೈನ್ ಗಳನ್ನು ಕೂಡಲೆ ಒಳಚರಂಡಿ ಲೈನ್ ಗೆ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಷ್ಯಂ ವೃತ್ತದಲ್ಲಿ ಮಳೆ ಬೀಳುವ ಸಮಸಯದಲ್ಲಿ ರಸ್ತೆ ಮೇಲೆ ನೀರು ನಿಲ್ಲುವುದನ್ನು ತಪ್ಪಿಸಲು ಶೋಲ್ಡರ್ ಡ್ರೈನ್ ಗೆ ನೀರು ಹೋಗಲು ವ್ಯವಸ್ಥೆ ಮಾಡಿರುವ ಸ್ಥಳದಲ್ಲಿ ಕಾಂಕ್ರೀಟ್ ಹಾಕಿ ಸರಾಗವಾಗಿ ನೀರು ಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಮೇಲೆ ನಿಲ್ಲುವ ನೀರು ಶೋಲ್ಡರ್ ಡ್ರೈನ್‌ಗೆ

ರಸ್ತೆ ಮೇಲೆ ನಿಲ್ಲುವ ನೀರು ಶೋಲ್ಡರ್ ಡ್ರೈನ್‌ಗೆ

ತುಮಕೂರು ಕಡೆ ಹೋಗುವ ಹೊರ ವರ್ತುಲ ರಸ್ತೆಯ ಎಂ.ಇ.ಐ ಜಂಕ್ಷನ್(ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್) ಬಳಿ ವಾಟರ್ ಲಾಗಿಂಗ್ ಪಾಯಿಂಟ್ ಸ್ಥಳದಲ್ಲಿ ನೀರು ನಿಲ್ಲದಂತೆ ಎತ್ತರವಾಗಿ ಡಾಂಬರೀಕರಣ ಮಾಡಲಾಗಿದ್ದು, ಶೋಲ್ಡರ್ ಡ್ರೈನ್ ಗೆ ನೀರು ಹೋಗಲು ವ್ಯಸವ್ತೆ ಮಾಡಬೇಕಿದ್ದು, ಕೂಡಲೇ ರಸ್ತೆ ಮೇಲೆ ನಿಲ್ಲುವ ನೀರು ಶೋಲ್ಡರ್ ಡ್ರೈನ್ ಗೆ ಸೇರುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ಆದೇಶ

ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ಆದೇಶ

ಮಹಾಲಕ್ಷ್ಮೀಪುರ ವಾರ್ಡ್ ಜೆ. ಎಸ್. ನಗರ 60 ಅಡಿ ರಸ್ತೆಯಲ್ಲಿ ವಾಟರ್ ಲಾಗಿಂಗ್ ಪಾಯಿಂಟ್ ಸ್ಥಳದಲ್ಲಿ ರಾಜಕಾಲುವೆ ಎತ್ತರಿಸಲಾಗಿದ್ದು, ಮಳೆ ನೀರು ರಾಜಕಾಲುವೆಗೆ ಹೋಗಲು ಪೈಪ್ ಹಾಗೂ ಸಬ್ ಡ್ರೈನ್ ಕಾಮಗಾರಿ ಪ್ರಗತಿಯಲ್ಲಿದೆ. ಸೈಡ್ ಡ್ರೈನ್ ಗಳನ್ನು ಅಗಲ ಮಾಡಿ

ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೆ. ಸಿ ನಗರದ ಬಳಿಯಿರುವ ವೃಷಭಾವತಿ ಕಾಲುವೆಯ ತಡೆಗೋಡೆಗೆ ತಾತ್ಕಾಲಿಕವಾಗಿ ಸ್ಯಡ್ ಬ್ಯಾಗ್ ಗಳನ್ನು ಅಳವಡಿಸಿಸಿದ್ದು, ತಡೆಗೋಡೆಯ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಲು ರಾಜಕಾಲುವೆ ವೇಳೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸುಜಾತ ಟಾಕೀಸ್ ಬಳಿ ಕೆಳಸೇತುವೆಯ ಪರಿಶೀಲನೆ

ಸುಜಾತ ಟಾಕೀಸ್ ಬಳಿ ಕೆಳಸೇತುವೆಯ ಪರಿಶೀಲನೆ

ಮಾಗಡಿ ಮುಖ್ಯ ರಸ್ತೆ ಮೂಲಕ ಹೆಚ್ಚು ವಾಹನಗಳು ಸಂಚರಿಸುವ ನಿಟ್ಟಿನಲ್ಲಿ ವಿರೇಶ್ ಚಿತ್ರ ಮಂದಿರದ ಬಳಿ ಪಾದಚಾರಿಗಳು ರಸ್ತೆ ದಾಟಲು ಸಮಸ್ಯೆಯಾಗುವುದನ್ನು ಗಮನಿಸಿ, ಸ್ಥಳದಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಪಾದಚಾರಿ ಮೇಲುಸೇತುವೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಸುಜಾತ ಟಾಕೀಸ್ ಕೆಳಸೇತುವೆಯ ವಾಟರ್ ಲಾಗಿಂಗ್ ಸ್ಥಳ ಪರಿಶೀಲಿಸಿ, ನೀರು ನಿಲ್ಲದಂತೆ ಮಾಡಲು ಸೂಚಿಸಿದರು.

ರೈಲ್ವೇ ನಿಲ್ದಾಣಕ್ಕೆ ಸಂರ್ಕಿಸುವ ಮೇಲ್ಸೆತುವೆ

ರೈಲ್ವೇ ನಿಲ್ದಾಣಕ್ಕೆ ಸಂರ್ಕಿಸುವ ಮೇಲ್ಸೆತುವೆ

ಓಕಳಿಪುರ ಅಷ್ಟಪಥ ಕಾರಿಡಾರ್ ಬಳಿ ರೈಲ್ವೆ ಇಲಾಖೆ ವತಿಯಿಂದ ರೈಲ್ವೆ ಹಳಿ ಕೆಳಭಾಗದಲ್ಲಿ ಬಾಕ್ಸ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ರೈಲ್ವೆ ಅಧಿಕಾರಿಗಳ ಜೊತೆ ಮಾತನಾಡಿ ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಬೇಕು ಹಾಗೂ ರಾಜಾಜಿನಗರ ಹಾಗೂ ಮಲ್ಲೇಶ್ವರ ಕಡೆಯಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೇಲುಸೇತುವೆ ಕಾಮಗಾರಿಯನ್ನು, ಇನ್ನೊಂದು ತಿಂಗಳಲ್ಲಿ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಯೋಜನಾ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್‌ಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು. ಅಲ್ಲದೆ ರಸ್ತೆಯಲ್ಲಿ ವಾಟರ್ ಲಾಗಿಂಗ್ ಆಗುವುದನ್ನು ತಪ್ಪಿಸಲು ತಿಳಿಸಿದರು.

ಈ ವೇಳೆ ವಲಯ ಆಯುಕ್ತರಾದ ಡಾ. ದೀಪಕ್, ವಲಯ ಜಂಟಿ ಆಯುಕ್ತರಾದ ಶ್ರೀನಿವಾಸ್, ಮುಖ್ಯ ಅಭಿಯಂತರರಾದ ದೊಡ್ಡಯ್ಯ, ಲೋಕೇಶ್, ಜಲಮಂಡಳಿ, ಬೆಸ್ಕಾಂ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Recommended Video

ಬಂಗಾರದ ಮನುಷ್ಯನ ಗೋಲ್ಡನ್ ಹಾರ್ಟ್: Neeraj Chopra ವಿನಮ್ರತೆ ನೋಡಿ ನೆಟ್ಟಿಗರು ಫಿದಾ |*Sports |OneIndia Kannada

English summary
Tushar Girinath, bbmp Chief Commissioner for various development works in west Regional Zone, inspected the progress with the concerned authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X