ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಡ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್ ಉಡುಗೊರೆ ನೀಡಿದ ಐಎಎಸ್ ಅಧಿಕಾರಿ!

|
Google Oneindia Kannada News

ಬೆಂಗಳೂರು, ಜೂ. 29: ಮುಂದಿನ ಎಸ್ಎಸ್ಎಲ್‌ಸಿ ವಿದ್ಯಾಭ್ಯಾಸಕ್ಕಾಗಿ ಆ ಬಾಲಕಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಹೂವು ಮಾರಿ ಜೀವನ ನಡೆಸುವ ಅಮ್ಮನಿಗೆ ಕಷ್ಟ ಕೊಡಲು ಇಷ್ಟವಿಲ್ಲ. ಈ ಬಾಲಕಿಯನ್ನು ನೋಡಿದ ಬೆಂಗಳೂರು ಮಹಾ ನಗರ ಪಾಲಿಕೆಯ ಐಎಎಸ್ ಅಧಿಕಾರಿ ಆ ಬಾಲಕಿಗೆ ಲ್ಯಾಪ್‌ಟಾಪ್ ಕೊಡಿಸಿ ತನ್ನ ಹೃದಯ ಶ್ರೀಮಂತಿಕೆ ತೋರಿದ್ದಾರೆ.

ಖಾಸಗಿ ಶಾಲೆಗಳ ಶುಲ್ಕ ವಿವಾದ: ಜುಲೈ 22ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್ಖಾಸಗಿ ಶಾಲೆಗಳ ಶುಲ್ಕ ವಿವಾದ: ಜುಲೈ 22ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಹೌದು. ಇದು ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರ ಕಥೆಯಿದು. ಬೆಂಗಳೂರಿನ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದ ಮುಖ್ಯ ಆಯುಕ್ತರಿಗೆ ಪಕ್ಕದಲ್ಲಿಯೇ ಹೂ ಮಾರುತ್ತಿದ್ದ ಬಾಲಕಿ ಕಣ್ಣಿಗೆ ಬಿದ್ದಿದ್ದಾರೆ. ಆಕೆಯ ಹೆಸರು ಬನಶಂಕರಿ. ಹೂ ಮಾರುತ್ತಿರುವ ಬಗ್ಗೆ ಕೇಳಿದಾಗ, ತಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ಮುಂದಿನ ಶಿಕ್ಷಣಕ್ಕಾಗಿ ದುಡಿದು ತಿನ್ನುವುದು ಅನಿವಾರ್ಯ ಎಂದು ತನ್ನ ಕುಟುಂಬದ ಸ್ಥಿತಿಯನ್ನು ಹೇಳಿದ್ದಾಳೆ. ಆ ವಿದ್ಯಾರ್ಥಿನಿಯ ನೋವಿನ ಮಾತು ಕೇಳಿದ ಕೂಡಲೇ ಪಾಲಿಕೆ ಮುಖ್ಯ ಆಯುಕ್ತರು ಕಷ್ಟಕ್ಕೆ ಸ್ಪಂದಿಸಿದ್ದಾರೆ.

BBMP chief commissioner gifted laptop to the poor girl who selling flowers in the street

Recommended Video

Indira Gandhi ಸೆಡ್ಡು ಹೊಡೆದು ಜೈಲು ಸೇರಿದ್ದ ಉಮ್ಮಣ್ಣನಿಗೆ ಸನ್ಮಾನ ಮಾಡಿದ Renukacharya | Oneindia Kannada

ಹೂ ಮಾರುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿ ಬನಶಂಕರಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಲ್ಯಾಪ್‌ಟಾಪ್ ಕೊಡಿಸುವುದಾಗಿ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತ ಭರವಸೆ ನೀಡಿದ್ದಾರೆ. ಗೌರಗ ಗುಪ್ತಾ ಅವರು ವಿದ್ಯಾರ್ಥಿನಿಗೆ ಲ್ಯಾಪ್‌ ಟಾಪ್ ಉಡುಗೊರೆ ನೀಡಿದ ವಿಚಾರ ತಿಳಿದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪ್ರಶಂಸೆ ಮಾಡಿದ್ದಾರೆ. ಬಿಬಿಎಂಪಿ ಆಯುಕ್ತರ ಈ ಹೃದಯ ಶ್ರೀಮಂತಿಕೆ ಮೆರೆದ ಪೋಟೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

English summary
Bruhath Bengaluru Mahanagara Palike chief commissioner Gourav Gupta has gifted a laptop to the poor student know more:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X