ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಲಿ ಕಟ್ಟಡದಲ್ಲಿ ಬದಲಾವಣೆ ಮಾಡಿಕೊಂಡರೆ ಅಭಿವೃದ್ಧಿ ಶುಲ್ಕ ವಿಧಿಸುವಂತಿಲ್ಲ- ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ಮೇ 23: ಹಾಲಿ ಇರುವ ಕಟ್ಟಡದಲ್ಲಿ ಕೆಲವೊಂದು ಬದಲಾವಣೆಗಳನ್ನು (ಆಲ್ಟ್ರೇಷನ್ಸ್ ) ಮಾಡಿಕೊಂಡರೆ ಅದರ ಮೇಲೆ ಅಭಿವೃದ್ಧಿ ಶುಲ್ಕ (ಬೆಟರ್ ಮೆಂಟ್ ಚಾರ್ಜ್ಸ್) ವಿಧಿಸುವಂತಿಲ್ಲ ಎಂದು ಮಹತ್ವದ ಹೈಕೋರ್ಟ್ ಆದೇಶ ನೀಡಿದೆ.

ಅಲ್ಲದೆ, ಬೆಂಗಳೂರು ನಗರದ ಮ್ಯೂಸಿಯಂ ರಸ್ತೆಯಲ್ಲಿರುವ 150 ವರ್ಷಗಳಷ್ಟು ಹಳೆಯದಾದ ಗುಡ್‌ ಶೆಪರ್ಡ್‌ ಕಾನ್ವೆಂಟ್‌ ಶಾಲೆ 69 ಲಕ್ಷ ಅಭಿವೃದ್ಧಿ ಶುಲ್ಕ ಪಾವತಿಸಬೇಕೆಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನೀಡಿದ್ದ ಡಿಮ್ಯಾಂಡ್ ನೋಟಿಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.

ಶಾಲೆಯ ಪ್ರತಿನಿಧಿ ಮರ್ಸಿ ಅಬ್ರಾಹಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ.

BBMP cannot levy betterment charge for alterations in the existing building: HC ordered

ಕೋರ್ಟ್ ಏನು ಹೇಳಿದೆ?

"ಶಾಲೆ ಹಾಲಿ ಕಟ್ಟಡವನ್ನು ಹೊಂದಿದೆ, ಅದು ತನ್ನ ಕ್ಯಾಂಪಸ್ ವಿಸ್ತರಣೆ ಸಲುವಾಗಿ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿ, ಕಟ್ಟಡ ವಿಸ್ತರಣೆ ಪ್ರಕ್ರಿಯೆಯಲ್ಲಿ ತೊಡಗಿದೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘಿಸಿಲ್ಲ'' ಎಂದು ಅಭಿಪ್ರಾಯಪಟ್ಟಿದೆ.

ಕೆಟಿಸಿಪಿ ಕಾಯ್ದೆ ಸೆಕ್ಷನ್ 18ಎ ಪ್ರಕಾರ ಬಿಬಿಎಂಪಿಗೆ ಭೂಮಿ ಅಥವಾ ಕಟ್ಟಡದ ಅಭಿವೃದ್ಧಿಗಾಗಿ ಅನುಮತಿ ನೀಡುವಾಗ ಅದು ನೀರು ಪೂರೈಕೆ ಯೋಜನೆಗಾಗಿ ಶುಲ್ಕ, ರಿಂಗ್ ರಸ್ತೆ ನಿರ್ಮಾಣಕ್ಕಾಗಿ ಸರ್ ಚಾರ್ಜ್, ಕೊಳಗೇರಿಗಳ ಅಭಿವೃದ್ದಿ ಶುಲ್ಕ ಮತ್ತು ಸಮೂಹ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಶುಲ್ಕಗಳನ್ನು ವಿಧಿಸುವ ಅಧಿಕಾರವಿದೆ. ಆದರೆ ಈ ಪ್ರಕರಣದಲ್ಲಿ ಭೂಮಿ ಅಥವಾ ಕಟ್ಟಡದ ಅಭಿವೃದ್ಧಿಗೆ ಅನುಮತಿ ಕೇಳಿಲ್ಲ. ಸದ್ಯ ಹಾಲಿ ಇರುವ ಕಟ್ಟಡದ ವಿಸ್ತರಣೆಗಾಗಿ ಅಥವಾ ಬದಲಾವಣೆಗಾಗಿ ಮಾತ್ರ, ಅದಕ್ಕೆ ಅಭಿವೃದ್ಧಿ ಶುಲ್ಕ ನೀಡಬೇಕಿಲ್ಲ'' ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

ನಗರದ ಹೃದಯ ಭಾಗದಲ್ಲಿರುವ ಗುಡ್‌ ಶೆಪರ್ಡ್‌ ಕಾನ್ವೆಂಟ್‌ ಶಾಲೆಯು 23 ಎಕರೆ ವಿಸ್ತಾರ ಪ್ರದೇಶದಲ್ಲಿದೆ. ಇದು 1854ರಲ್ಲಿ ಆರಂಭವಾಗಿತ್ತು. ಅದು ಹಾಲಿ ಇರುವ ಕಟ್ಟಡದ ಜೊತೆಗೆ ನಾಲ್ಕು ಹೆಚ್ಚುವರಿ ಅಂತಸ್ತುಗಳ ಕಟ್ಟಡ ನಿರ್ಮಾಣಕ್ಕಾಗಿ 2014ರಲ್ಲಿ ಬಿಬಿಎಂಪಿಗೆ ಅರ್ಜಿ ಸಲ್ಲಿಸಿತ್ತು. ಅಂತೆಯೇ, ಪರಿಶೀಲನಾ ಶುಲ್ಕವಾಗಿ 1,61,438 ರೂ.ಮೊತ್ತವನ್ನು ಪಾವತಿ ಮಾಡಿತ್ತು. ಆದರೆ, ಬಿಬಿಎಂಪಿ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಕಲಂ 18ರ ಅನ್ವಯ ₹ 69,70,520 ಅಭಿವೃದ್ಧಿ ಶುಲ್ಕ ಪಾವತಿಸುವಂತೆ ಡಿಮ್ಯಾಂಡ್‌ ನೋಟಿಸ್‌ ನೀಡಿತ್ತು. ಈ ನೋಟಿಸ್‌ ಅನ್ನು ಶಾಲೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

Recommended Video

Ab de Villiers ಮಾತಿಗೆ RCB ಅಭಿಮಾನಿಗಳು ಫುಲ್ ಖುಷ್ | #cricket #ipl2022 | Oneindia Kannada

English summary
The High Court has ruled that alterations to the existing building will not impose development fees (Betterment Charges).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X