ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್ ನಿಯಮ ಉಲ್ಲಂಘನೆ: 7 ಖಾಸಗಿ ಆಸ್ಪತ್ರೆಗಳ ನೋಂದಣಿ ರದ್ದುಗೊಳಿಸಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31:ಕೊವಿಡ್ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ 7 ಖಾಸಗಿ ಆಸ್ಪತ್ರೆಗಳ ನೋಂದಣಿಯನ್ನು ಬಿಬಿಎಂಪಿ ರದ್ದುಗೊಳಿಸಿದೆ.

ಪ್ರತಿ ಆಸ್ಪತ್ರೆಯಲ್ಲೂ ಶೇ.50ರಷ್ಟು ಕೊವಿಡ್ ರೋಗಿಗಳಿಗೆ ಮೀಸಲಿಡಬೇಕು ಎಂದು ಹೇಳಿದ್ದಾದರೂ ಆಸ್ಪತ್ರೆಗಳು ನಿಯಮಗಳನ್ನು ಉಲ್ಲಂಘಿಸಿದ್ದವು ಹೀಗಾಗಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಹಾಗೆಯೇ ಒಂದೇ ದಿನದಲ್ಲಿ ಉತ್ತರವನ್ನು ನೀಡಲು ತಿಳಿಸಿತ್ತು.

ಇದೀಗ ಕೆಪಿಎಂಪಿ ಕಾಯ್ದೆ ಪ್ರಕಾರ ರಂಗಾದೊರೈ, ಸಂಜೀವಿನಿ, ಡಾ. ಜಿವಿಜಿ ಹೆಲ್ತ್ ಕೇರ್,ಶ್ರೀನಿವಾಸ್, ಮೆಡ್‌ಸ್ಟಾರ್ ಆಸ್ಪತ್ರೆ, ನಂದನಾ ಹೆಲ್ತ್ ಕೇರ್ ಸರ್ವೀಸಸ್ ಲಿಮಿಟೆಡ್ ನ ನೋಂದಣಿಯನ್ನು ರದ್ದುಗೊಳಿಸಿದೆ.

Manjunath Prasad

ಆಸ್ಪತ್ರೆಗಳ ಒಪಿಡಿಯನ್ನು ಕೂಡ ಬಂದ್ ಮಾಡಿಸಿ, ಒಳರೋಗಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಎಚ್ಚರಿಕೆಯನ್ನು ಕೂಡ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೊರೊನಾ ನಿಯಮ ಪಾಲಿಸದ 7 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್ಕೊರೊನಾ ನಿಯಮ ಪಾಲಿಸದ 7 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್

ಆಸ್ಪತ್ರೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೋಟಿಸ್ ಜಾರಿ ಮಾಡಿದ್ದು, ಶೇ.50 ರಷ್ಟು ಕೋವಿಡ್ ಬೆಡ್ ನೀಡದ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಕೋರಿದ್ದಾರೆ. ಕೆಪಿಎಂಇ ಕಾಯ್ದೆ ಅನ್ವಯ ನೋಟಿಸ್ ನೀಡಲಾಗಿದೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೂರು ಆಸ್ಪತ್ರೆಗಳ ಮೇಲೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಾಗಿತ್ತು.

English summary
Covid 19 Rules Violition: Under KPME Act BBMP Commissioner Cancels Registration Of 7 private Hospitals Of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X