ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್ ಹೋರಾಟ: ವೈದ್ಯರು ಸೇರಿ ವಿವಿಧ ಹುದ್ದೆಗಳಿಗೆ ಬಿಬಿಎಂಪಿ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಜುಲೈ 10: ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಬಿಬಿಎಂಪಿ ಮತ್ತೊಂದು ಮಹತ್ವದ ಕೆಲಸಕ್ಕೆ ಮುಂದಾಗಿದೆ.

Recommended Video

ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದ ಕಾಮೇಗೌಡರು | KameGowda | Oneindia Kannada

ಕೊವಿಡ್ ರೋಗಿಗಳಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿಯ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕೆ, ತಾತ್ಕಲಿಕವಾಗಿ ವೈದ್ಯರು, ದಾದಿಯರು, ನರ್ಸ್, ಸಿಬ್ಬಂದಿ ಸೇರಿದಂತೆ ಇನ್ನಿತರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

1.25 ಕೋಟಿ ಉದ್ಯೋಗ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ1.25 ಕೋಟಿ ಉದ್ಯೋಗ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಇದು ಕೇವಲ ಆರು ತಿಂಗಳ ಅವಧಿಗೆ ಎಂದು ಬಿಬಿಎಂಪಿ ತಿಳಿಸಿದ್ದು ವಾಕ್‌ ಇನ್ ಸಂದರ್ಶನದ ಮೂಲಕ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಹಾಗಾದ್ರೆ, ಯಾವ ಹುದ್ದೆಗಳು, ಅದಕ್ಕೆ ಏನು ವಿದ್ಯಾರ್ಹತೆ ಮತ್ತು ವೇತನ ಕುರಿತಾದ ಇನ್ನಿತರ ಮಾಹಿತಿ ತಿಳಿಯಲು ಮುಂದೆ ಓದಿ....

ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಂಬಿಬಿಎಸ್/ಬಿಡಿಎಸ್ ಹಾಅಗೂ ಆಯುಷ್ ಡಾಕ್ಟರ್ಸ್‌ಗಳ ಹುದ್ದೆಗಳಿಗೆ ಆಸಕ್ತಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಿರ್ದಿಷ್ಟವಾಗಿ ಎಷ್ಟು ಹುದ್ದೆಗಳು ಎಂದು ತಿಳಿಸಿಲ್ಲ.
* ಅಂಗೀಕೃತ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಅನುಮೋದಿತ ಎಂಬಿಬಿಎಸ್ ಪದವಿ
* ಭಾರತೀಯ ದಂತ ವೈದ್ಯಕೀಯ ಸಂಸ್ಥೆಯಿಂದ ಅನುಮೋದಿತ ಬಿಡಿಎಸ್ ಪದವಿ
* ವೈದ್ಯಕೀಯ ಆಯುರ್ವೇದ ಸಂಸ್ಥೆಯಿಂದ ಅನುಮೋದಿತ ಬಿಎಸ್ಎಂಎಸ್ ಪದವಿ
* ಅಂಗೀಕೃತ ಯುನಾನಿ ಸಂಸ್ಥೆಯಿಂದ ಅನುಮೋದಿತ ಬಿಎಸ್ಎಂಎಸ್ ಪದವಿ
* ಸಂಸ್ಥೆಯಿಂದ ಹೋಮಿಯೋಪತಿ ಸಂಸ್ಥೆಯಿಂದ ಅನುಮೋದಿತ ಬಿಎಚ್ಎಂಎಸ್ ಪದವಿ

ಸ್ಟಾಫ್ ನರ್ಸ್ ಹುದ್ದೆಗಳು

ಸ್ಟಾಫ್ ನರ್ಸ್ ಹುದ್ದೆಗಳು

ವೈದ್ಯರು ಜೊತೆಯಲ್ಲಿ ದಾದಿಯರ (ಸ್ಟಾಫ್ ನರ್ಸ್) ಹುದ್ದೆಗಳಿಗೂ ಬಿಬಿಎಂಪಿ ಆಹ್ವಾನ ನೀಡಿದೆ. ಈ ಹುದ್ದೆಗೆ ವಿದ್ಯಾರ್ಹತೆ ಸಹ ತಿಳಿಸಲಾಗಿದೆ.
* ಅಂಗೀಕೃತ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎಸ್ಸಿ/ಜಿಎನ್ಎಂ/ಡಿಪ್ಲೋಮ ಇನ್ ನರ್ಸಿಂಗ್ ಕೋರ್ಸ್ ಪದವಿ ಪಡೆದಿರಬೇಕು.

ಈ ವರ್ಷ 550 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಫೋನ್‌ಪೇಈ ವರ್ಷ 550 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಫೋನ್‌ಪೇ

ಸಹಾಯಕರು ಮತ್ತು ಗ್ರೂಪ್ ಡಿ ನೌಕರರು

ಸಹಾಯಕರು ಮತ್ತು ಗ್ರೂಪ್ ಡಿ ನೌಕರರು

ಇನ್ನು ಕೊವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಸಹಾಯಕರು ಮತ್ತಿ ಗ್ರೂಪ್ ಡಿ ನೌಕರರ ಹುದ್ದೆಗೂ ಬಿಬಿಎಂಪಿ ಆಹ್ವಾನ ನೀಡಿದೆ.
* ಸಹಾಯಕರು ಹುದ್ದೆಗೆ 3 ವರ್ಷ ಪ್ಯಾರಾ ಮೆಡಿಕಲ್ ಕೋರ್ಸ್ ಮಾಡಿರಬೇಕು
* ಎಸ್ಎಸ್ಎಲ್ ಸಿ ಪಾಸಾಗಿರಬೇಕು

ವೇತನದ ವಿವರ

ವೇತನದ ವಿವರ

* ವೈದ್ಯರಿಗೆ 45000 ರೂಪಾಯಿ
* ಸ್ಟಾಫ್ ನರ್ಸ್ ಹುದ್ದೆಗೆ 20000 ರೂಪಾಯಿ
* ಸಹಾಕರು ಹುದ್ದೆಗೆ 15000 ರೂಪಾಯಿ
* ಗ್ರೂಪ್ ಡಿ ನೌಕರರಿಗೆ 12000 ರೂಪಾಯಿ ನೀಡಲಾಗುವುದು ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
* ಈ ಎಲ್ಲಾ ಹುದ್ದೆಗಳಿಗೂ ಕಡ್ಡಾಯ ಅರ್ಹತೆ ಅಂದ್ರೆ ಗರಿಷ್ಠ ವಯಸ್ಸು 50 ವರ್ಷ ಮೀರಿರಬಾರದು ಮತ್ತು ಕನ್ನಡ ಭಾಷೆ ಮಾತನಾಡಲು, ಓದಲು ಹಾಗು ಬರೆಯಲು ಬರಬೇಕು.

ಸಂದರ್ಶನದ ಸಮಯ ಮತ್ತು ಸ್ಥಳ

ಸಂದರ್ಶನದ ಸಮಯ ಮತ್ತು ಸ್ಥಳ

ಈ ಮೇಲ್ಕಂಡ ಎಲ್ಲ ಹುದ್ದೆಗಳಿಗೂ ವಾಕ್ ಇನ್ ಸಂದರ್ಶನ ನಡೆಯಲಿದೆ. ಶುಕ್ರವಾರ (10/7/2020) ಹಾಗೂ ಸೋಮವಾರ (11/7/2020) ದಿಂದ ಬುಧವಾರ (15/7/2020) ರವರೆಗೂ ನಡೆಯಲಿದೆ. ಟೌನ್‌ಹಾಲ್ ಬಳಿಯಿರುವ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 5ರವರೆಗೂ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆ ಸಂದರ್ಶನಕ್ಕೆ ಭಾಗಿಯಾಗಬಹುದು.

English summary
Notification for recruitment of temporary positions including doctors, nurses & support staff. Walk-in interviews start tomorrow. More details can be had here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X