ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆಬ್ರವರಿ 18ಕ್ಕೆ ಬಿಬಿಎಂಪಿ ಬಜೆಟ್, ಈ ಬಾರಿ ವಾಸ್ತವಿಕ ಬಜೆಟ್ ಮಂಡನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಲೋಕಸಭೆ ಚುನಾವಣೆ ಘೋಷಣೆ ಸಮೀಪದಲ್ಲಿರುವ ಕಾರಣ ಬಿಬಿಎಂಪಿಯು ಸ್ವಲ್ಪ ಮುಂಚಿತವಾಗಿಯೇ ಬಜೆಟ್ ಮಂಡಿಸಲು ಹೊರಟಿದ್ದು, ಫೆಬ್ರವರಿ 18 ರಂದು ಬಜೆಟ್‌ ಮಂಡನೆಗೆ ದಿನಾಂಕ ನಿಗದಿ ಮಾಡಿಕೊಂಡಿದೆ.

ಬೆಂಗಳೂರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಫೆ.14ರಂದು ಸಿವಿಕ್ ಫೆಸ್ಟ್‌ ಬೆಂಗಳೂರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಫೆ.14ರಂದು ಸಿವಿಕ್ ಫೆಸ್ಟ್‌

ಈ ಮೊದಲು ಫೆಬ್ರವರಿ 15 ರಂದು ಬಜೆಟ್ ಮಂಡಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ಫೆಬ್ರವರಿ 18 ಕ್ಕೆ ಬಜೆಟ್ ಮಂಡಿಸಲಾಗುವುದು ಎಂಬ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ.

ಸಾಲದ ಬಗ್ಗೆ ಶ್ವೇತ ಪತ್ರ ಹೊರಡಿಸಿ: ಬಿಬಿಎಂಪಿಗೆ ಸರ್ಕಾರ ಆದೇಶ ಸಾಲದ ಬಗ್ಗೆ ಶ್ವೇತ ಪತ್ರ ಹೊರಡಿಸಿ: ಬಿಬಿಎಂಪಿಗೆ ಸರ್ಕಾರ ಆದೇಶ

ಈ ಬಾರಿ ಬಿಬಿಎಂಪಿ ಬಜೆಟ್ ಗಾತ್ರ 15000 ಕೋಟಿ ಆಗಿರಲಿದೆ ಎನ್ನಲಾಗಿದೆ. ಈ ಬಾರಿ ವಾಸ್ತವಿಕ ಬಜೆಟ್ ಮಂಡಿಸಲಾಗುವುದು ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಹೇಳಿದ್ದಾರೆ.

BBMP budget presentation on February 18

ಬಿಬಿಎಂಪಿ ಬಜೆಟ್ ಕುರಿತು ಸಲಹೆಗಳಿಗೆಂದು ಇಂದು ಮಾಧ್ಯಮವರೊಂದಿಗೆ ಸಭೆ ನಡೆಸಲಾಗಿದ್ದು, ಈಗಾಗಲೇ ನಗರದ ಪ್ರಮುಖ ಸಂಘಟನೆಗಳು, ಆರ್ಥಿಕ ತಜ್ಞರು, ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ರಾಜಾಜಿನಗರದಿಂದ ಔಟರ್‌ ರಿಂಗ್ ರೋಡ್‌ವರೆಗೆ ರಸ್ತೆ ಅಗಲೀಕರಣರಾಜಾಜಿನಗರದಿಂದ ಔಟರ್‌ ರಿಂಗ್ ರೋಡ್‌ವರೆಗೆ ರಸ್ತೆ ಅಗಲೀಕರಣ

ಕುಮಾರಸ್ವಾಮಿ ಅವರು ಮಂಡಿಸಿದ್ದ ಬಜೆಟ್ ನಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು, ಅದರ ಜೊತೆಗೆ ಬಿಬಿಎಂಪಿಯ ಬಜೆಟ್ ಬೆಂಗಳೂರನ್ನು ಇನ್ನಷ್ಟು ಉತ್ತಮಗೊಳಿಸಲಿದೆ ಎಂದು ಹೇಮಲತಾ ಗೋಪಾಲಯ್ಯ ಹೇಳಿದ್ದಾರೆ.

English summary
BBMP budget presentation is on February 18. BBMP budget will be 15000 crore size.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X