ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಬಜೆಟ್ 2021: ಕೆರೆಗಳ ಪುನಶ್ಚೇತನ, ರಸ್ತೆಗಳ ನವೀಕರಣಕ್ಕೆ ಹೆಚ್ಚಿನ ಒತ್ತು

|
Google Oneindia Kannada News

ಬೆಂಗಳೂರು, ಮಾರ್ಚ್ 29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2021-2022ರ ಬಜೆಟ್ ಮಂಡನೆ ಮಾಡಿದೆ. ಈ ಬಾರಿಯ ಬಜೆಟ್‌ನಲ್ಲಿ ಕೆರೆಗಳ ಪುನಶ್ಚೇತನ ಹಾಗೂ ರಸ್ತೆಗಳ ನವೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಕೋವಿಡ್ ಸಂಕಷ್ಟದಲ್ಲೂ ಕೂಡಾ 2021 -2022 ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ. ಈ ಬಾರಿ ಕೋವಿಡ್ ಆರ್ಥಿಕ ಸಂಕಷ್ಟ ಇರುವುದರಿಂದ ಹೊಸ ನಿರೀಕ್ಷೆ ಸಂಪನ್ಮೂಲಗಳ ಕ್ರೋಢೀಕರಣ ಮಾಡೋದು ಕಷ್ಟದ ಕೆಲಸ‌.

ಬೆಂಗಳೂರು ನಗರದ ಕಸ ನಿರ್ವಹಣೆಗೆ ಬಿಬಿಎಂಪಿ ಹೊಸ ಪ್ರಯತ್ನಬೆಂಗಳೂರು ನಗರದ ಕಸ ನಿರ್ವಹಣೆಗೆ ಬಿಬಿಎಂಪಿ ಹೊಸ ಪ್ರಯತ್ನ

ಬಿಬಿಎಂಪಿ ಯ ಐಪಿಪಿ ಕೇಂದ್ರದಲ್ಲಿ 9291 ಕೋಟಿ ಗಾತ್ರದ ಜನಸ್ನೇಹಿ ಬಜೆಟ್ ಅನ್ನು ಮಂಡಿಸಿದ್ದಾರೆ. ನಾಗರಿಕರು ಕಟ್ಟುವ ಆಸ್ತಿ ತೆರಿಗೆಯ ಶೇ. 1% ನಷ್ಟು ಹಣವನ್ನು ವಾಡ್೯ ಅಭಿವೃದ್ಧಿ ಗೆ ಮೀಸಲಿಟ್ಟಿದ್ದು, ಇ-ಆಸ್ತಿ ತಂತ್ರಾಂಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

BBMP Budget 2021-22: Rs 9,287.81 Crore Budget For Bengaluru: Here Are The Highlights

ಕೋವಿಡ್ ಸಂಕಷ್ಟ ಹಿನ್ನೆಲೆಯಲ್ಲಿ ವಿನಾಕಾರಣ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ. ಕುಡಿಯುವ ನೀರು ರಸ್ತೆ ಅಭಿವೃದ್ಧಿ, ಶಿಕ್ಷಣ, ಪಾಕ್೯, ಕೆರೆಗಳ ಅಭಿವೃದ್ಧಿ ಬಿಟ್ಟು ಬೇರೆ ಯಾವುದೇ ಹೊಸ ಕಾಮಗಾರಿಗಳಿಗೆ ಅನುಮತಿ ಇಲ್ಲ. ಸಂಪನ್ಮೂಲ ಕ್ರೋಢೀಕರಣಕ್ಕೆ, ಕೈಬಿಟ್ಟುಹೋಗಿರುವ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಿದೆ. ಕೆ.ಆರ್ ಮಾರುಕಟ್ಟೆ ಕಟ್ಟಡ ಅಡಮಾನ ಮುಕ್ತವಾಗಿಸಲಾಗಿದ್ದು, ಕೌನ್ಸಿಲ್ ಕಟ್ಟಡ ನವೀಕರಣಕ್ಕೆ 10 ಕೋಟಿ ರೂ ಮೀಸಲಿಡಲಾಗಿದೆ.

Recommended Video

CD ವಿಚಾರವಾಗಿ ಪ್ರಶ್ನೆ ಮಾಡೋದೇ ತಪ್ಪಾ ! | Mithun Rai | Oneindia Kannada

ಬಿಬಿಎಂಪಿ ಬಜೆಟ್ ಮುಖ್ಯಾಂಶಗಳು:
* ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಶೇ. 85 % ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ 25 ಸಾವಿರ ಪ್ರೋತ್ಸಾಹ ಧನ.
* ಕಸ ವಿಲೇವಾರಿ ಹಾಗೂ ಘನತ್ಯಾಜ್ಯಕ್ಕಾಗಿ 1622 ಕೋಟಿ ಮೀಸಲು
* ಒಸಿ ಮತ್ತು ಸಿಸಿ ಪಡೆಯಲು ಹೊಸ ತಂತ್ರಜ್ಞಾನ ಅಳವಡಿಕೆ
* ಬಿ ಖಾತೆಗಳನ್ನ ಎ ಖಾತೆಯಾಗಿ ಬದಲಾವಣೆ
* ಪಾಲಿಕೆ ಆಸ್ತಿಗಳ ಬಾಡಿಗೆ ಹೆಚ್ಚಳ ಇಲ್ಲ
* 67 ಹೊಸ ಸಾರ್ವಜನಿಕ ಶೌಚಾಲಯ ನಿರ್ಮಾಣ
* ನಗರದ ಸೌಂದರ್ಯಕ್ಕಾಗಿ 25 ಕೆರೆಗಳ ಪುನಶ್ಚೇತನ
* ಖಾತಾ, ಆಸ್ತಿ ತೆರಿಗೆ, ಜನನ ಮರಣ, ಪ್ರಮಾಣ ಪತ್ರ, ಉದ್ಯಮ ಪರವಾನಗಿ, ಕಟ್ಟಡ ನಕ್ಷೆ ,ಇತ್ಯಾದಿ ಸೇವೆಗಳಿಗೆ ಆನ್ ಲೈನ್ ವ್ಯವಸ್ಥೆ.
* ಕೋವಿಡ್ ನಿಯಂತ್ರಣಕ್ಕಾಗಿ 337 ಕೋಟಿ ಮೀಸಲು
* ಬೀದಿ ನಾಯಿಗಳ ಹಾವಳಿಗೆ ತಪ್ಪಿಸಲು 5 ಕೋಟಿ ಮೀಸಲು
* ಕೆರೆಗಳ ಸಂರಕ್ಷಣೆಗೆ 10 ಕೋಟಿ
* 2007 ರಲ್ಲಿ ಸೇರ್ಪಡೆ ಗೊಂಡ 110 ಹಳ್ಳಿಗಳ ಅಭಿವೃದ್ಧಿಗೆ 1000 ಕೋಟಿ ಮೀಸಲು

English summary
The Bruhat Bengaluru Mahanagara Palike (BBMP) on Saturday presented the budget for financial year 2021-22, with focus on decentralising the funds and accountability at zonal and ward-level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X