ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಬಜೆಟ್ 2019 : ಮಹಿಳೆಯರಿಗೇ ಮೇಲುಗೈ

|
Google Oneindia Kannada News

ಬೆಂಗಳೂರು, ಫೆಬ್ರವರಿ 18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2019ರ ಮಹತ್ವದ ಬಜೆಟ್ ಇಂದು ಮಂಡನೆಯಾಗಲಿದೆ.

ಫೆಬ್ರವರಿ 18ಕ್ಕೆ ಬಿಬಿಎಂಪಿ ಬಜೆಟ್, ಈ ಬಾರಿ ವಾಸ್ತವಿಕ ಬಜೆಟ್ ಮಂಡನೆ ಫೆಬ್ರವರಿ 18ಕ್ಕೆ ಬಿಬಿಎಂಪಿ ಬಜೆಟ್, ಈ ಬಾರಿ ವಾಸ್ತವಿಕ ಬಜೆಟ್ ಮಂಡನೆ

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರು ಬಜೆಟ್ ಮಂಡಿಸುತ್ತಿದ್ದು, ಇದೇ ಮೊದಲ ಬಾರಿಗೆ ಮಹಿಳಾ ಸದಸ್ಯರೊಬ್ಬರು ಬಜೆಟ್ ಮಂಡಿಸುತ್ತಿರುವುದು ವಿಶೇಷವಾಗಿದೆ.

ಮೂರು ವರ್ಷಗಳಲ್ಲಿ 479 ಒತ್ತುವರಿಗಳನ್ನು ತೆರವುಗೊಳಿಸಿದ ಬಿಬಿಎಂಪಿ ಮೂರು ವರ್ಷಗಳಲ್ಲಿ 479 ಒತ್ತುವರಿಗಳನ್ನು ತೆರವುಗೊಳಿಸಿದ ಬಿಬಿಎಂಪಿ

ಬಜೆಟ್ ಗಾತ್ರ ಸುಮಾರು 12 ಸಾವಿರ ಕೋಟಿ ತಲುಪುವ ನಿರೀಕ್ಷೆಯಿದ್ದು, ಈ ಬಾರಿ ಬಜೆಟ್‍ನಲ್ಲಿ ನಗರದ ಮಹಿಳೆಯರಿಗೆ ಹಲವು ಹೊಸ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ.

BBMP budget 2019 to be tabled on Monday

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಮ್ಯ ಶಿವಕುಮಾರ್ ಅವರು ಮಹಿಳಾ ಪರವಾದ ಹಲವು ಕಲ್ಯಾಣ ಯೋಜನೆಗಳನ್ನು ಕುರಿತು ಸಲಹೆ ನೀಡಿದ್ದು, ಸ್ವಯಂ ಉದ್ಯೋಗಿ ಮಹಿಳೆಯರಿಗೆ ಎಲೆಕ್ಟ್ರಿಕ್ ಮೊಪೈಡ್ ನೀಡುವಂತೆ ಮನವಿ ಮಾಡಿದ್ದಾರೆ.

ಬಿಬಿಎಂಪಿಗೆ ಮತ್ತೆ ಇಲಿಗಳ ಕಾಟವಂತೆ, ಒಂದು ಇಲಿ ಹಿಡಿದರೆ 10 ಸಾವಿರ ಬಿಬಿಎಂಪಿಗೆ ಮತ್ತೆ ಇಲಿಗಳ ಕಾಟವಂತೆ, ಒಂದು ಇಲಿ ಹಿಡಿದರೆ 10 ಸಾವಿರ

ವಿಧಾನ ಸಭಾ ಚುನಾವಣೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ನಿರ್ಲಕ್ಷ್ಯದಿಂದಾಗಿ 2018-19ನೇ ಸಾಲಿನ ಬಜೆಟ್ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿರಲಿಲ್ಲ. ಮೂಲಗಳ ಪ್ರಕಾರ 2018-19ನೇ ಸಾಲಿನ ಬಜೆಟ್ ಶೇ.55 ಮಾತ್ರ ಅನುಷ್ಠಾನಗೊಂಡಿದೆ.

ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಕೊಡುಗೆ ಸಾಧ್ಯತೆ: ಈ ಬಾರಿ ಮೇಯರ್ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಮಹಿಳೆಯಾಗಿರುವ ಕಾರಣ ಬಜೆಟ್ ನಲ್ಲಿ ಮಹಿಳೆಯರಿಗೆ ಹೆಚ್ಚಿನ ಕೊಡುಗೆ ಕೊಡುವ ನಿರೀಕ್ಷೆ ಇದೆ. ಪ್ರತಿ ವಾರ್ಡ್‌ನಲ್ಲಿ 20 ಮಹಿಳೆರಿಗೆ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಯಾಗುವ ಸಾಧ್ಯತೆ ಇದೆ.

Newest FirstOldest First
2:17 PM, 18 Feb

ಪ್ರತಿ ವಾರ್ಡ್‍ಗೆ 50 ಟೈಲರಿಂಗ್ ಯಂತ್ರಗಳು
2:16 PM, 18 Feb

ತೋಟಗಾರಿಕೆ, ಅರಣ್ಯ ಮತ್ತು ಕೆರೆ ಅಭಿವೃದ್ದಿಗೆ 69 ಕೋಟಿ
2:16 PM, 18 Feb

ಬಡಕ್ರೀಡಾಪಟುಗಳಿಗೆ ಒಂದು ಕೋಟಿ ರೂ. ಆರ್ಥಿಕ ಸಹಾಯ
2:16 PM, 18 Feb

ಪ್ರಾಣಿಗಳ ಚಿಕಿತ್ಸಾ ಕೇಂದ್ರಕ್ಕೆ 5 ಕೋಟಿ ರೂ.
2:15 PM, 18 Feb

ಕ್ವಿದಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಣಕ್ಕೆ 5 ಕೋಟಿ ರೂ.
2:15 PM, 18 Feb

ಸದರಿ ಅನುದಾನದಲ್ಲಿ ವೈಟ್ ಟಾಪಿಂಗ್,ಕೆರೆ ಅಭಿವೃದ್ದಿ, ಬೃಹತ್ ಮಳೆನೀರು ಕಾಲುವೆಗೆಳ ಅಭಿವೃದ್ದಿ, ಪಾದಚಾರಿ ಮಾರ್ಗಗಳ ಅಭಿವೃದ್ದಿಗೊಳಿಸಲು ತೀರ್ಮಾನ.
2:15 PM, 18 Feb

ನವಬೆಂಗಳೂರು ಯೋಜನೆಯಡಿ ರಾಜ್ಯ ಸರ್ಕಾರ 8,015 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಪ್ರಸಕ್ತ ವರ್ಷ 2300 ಕೋಟಿ ರೂ.ಗಳನ್ನು ನೀಡಿದೆ.
Advertisement
2:15 PM, 18 Feb

ಬೀದಿ ವ್ಯಾಪಾರಿಗಳ ಕಲ್ಯಾಣಕ್ಕೆ 25 ಲಕ್ಷ
2:14 PM, 18 Feb

ಪ್ರತಿ ವಾರ್ಡ್‍ಗೆ 50 ಸೈಕಲ್ ವಿತರಣೆಗೆ 4 ಕೋಟಿ
2:14 PM, 18 Feb

ದಿವ್ಯಾಂಗ ಚೇತನರ ಕಲ್ಯಾಣ ಕಾರ್ಯಕ್ರಮಕ್ಕೆ 75 ಕೋಟಿ
2:14 PM, 18 Feb

ಬಡವರ ಬಂಧು ಯೋಜನೆ ಅಡಿ ಪ್ರತಿ ವಾರ್ಡ್ ಗೆ 15 ತಳ್ಳುವ ಗಾಡಿ
2:14 PM, 18 Feb

ಕ್ಯಾನ್ಸರ್ ಚಿಕಿತ್ಸಾ ವಿಭಾಗ ಆರಂಬಕ್ಕೆ 50 ಲಕ್ಷ
Advertisement
2:13 PM, 18 Feb

ಕ್ಯಾನ್ಸರ್ ಕಾಯಿಲೆ ಪತ್ತೆಗೆ ಸಂಚಾರಿ ಬಸ್ ಖರೀಧಿಗೆ ಮೂರು ಕೋಟಿ
2:13 PM, 18 Feb

ಮಹಿಳೆಯರಿಗಾಗಿ ಆರೋಗ್ಯ ಕವಚ ಯೋಜನೆ ಜಾರಿ
2:13 PM, 18 Feb

ಮಹಿಳೆಯರಿಗಾಗಿ ಅನ್ನಪೂರ್ಣೇಶ್ವರಿ ಯೋಜನೆ ಜಾರಿ
2:13 PM, 18 Feb

ರ್ಷಪೂರ್ತಿ ಪಾಲಿಕೆ ಹೇರಿಗೆ ಆಸ್ಪತ್ರೆಯಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಒಂದು ಲಕ್ಷ, ( 60 ಕೋಟಿ ಮೀಸಲು)
2:13 PM, 18 Feb

ಮಹಾಲಕ್ಷ್ಮಿ ಯೋಜನೆಯಡಿ ಪಿಂಕ್ ಬೇಬಿ ಯೋಜನೆ ವಿಸ್ತರಣೆ.
2:12 PM, 18 Feb

ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಪ್ರತಿ ವಾರ್ಡ್‍ನಲ್ಲಿ ಐದು ಮನೆ
2:11 PM, 18 Feb

ಪೌರಕಾರ್ಮಿಕರ ಬಿಸಿ ಊಟಕ್ಕೆ 12 ಕೋಟಿ
2:11 PM, 18 Feb

ಹಾಲಿ ಮತ್ತು ನಿವೃತ್ತ ಸೈನಿಕರಿಗೆ ಶೇಕಡಾ ನೂರರಷ್ಟು ತೆರಿಗೆ ವಿನಾಯಿತಿ
2:11 PM, 18 Feb

ಪಾಲಿಕೆ ಎಂಟು ವಲಯಗಳಲ್ಲಿ ಟೋಟಲ್ ಸ್ಟೇಷನ್ ಸರ್ವೆಗೆ ಕ್ರಮ.
2:11 PM, 18 Feb

400 ಸ್ಥಳಗಳಲ್ಲಿ ಉಚಿತ ವೈಫೈ
2:11 PM, 18 Feb

ಓಎಫ್ ಸಿಯಿಂದ 175 ಕೋಟಿ, ಮೊಬೈಲ್ ಟವರ್ ಗಳಿಂದ 50 ಕೋಟಿ, ನಗರ ಯೋಜನೆ ವಿಭಾಗದಿಂದ 841 ಕೋಟಿ ರೂ ನಿರೀಕ್ಷೆ
2:11 PM, 18 Feb

ಟೋಟಲ್ ಸ್ಟೇಷನ್ ಸರ್ವೇ ನಡೆಸಿ ಬೃಹತ್ ಕಟ್ಟಡಗಳಿಂದ 400 ಕೋಟಿ ರೂ. ನಿರೀಕ್ಷೆ
2:10 PM, 18 Feb

ಉತ್ತಮ ಆಡಳಿತ ವ್ಯವಸ್ಥೆಗೆ ಏಕ ಕಡತ ನಿರ್ವಹಣೆ ಪದ್ಧತಿ ಜಾರಿ
2:10 PM, 18 Feb

ಬಿಬಿಎಂಪಿ ಆಸ್ಪತ್ರೆಗಳಿಗೆ ಅಡ್ವಾನ್ಸ್ಡ್ ಲೈಫ್ ಸಪೋರ್ಟರ್ ಅಂಬುಲೆನ್ಸ್ ಖರೀದಿ
2:10 PM, 18 Feb

ಪಿಂಕ್ ಬೇಬಿ ಯೋಜನೆ ವರ್ಷವಿಡಿ ಜಾರಿ
2:10 PM, 18 Feb

ಮಹಿಳೆಯರ ಆರ್ಥಿಕ ಸದೃಡತೆಗೆ ಕಿರು ಸಾಲ ಭಾಗ್ಯ
1:51 PM, 18 Feb

ಐಟಿ ಬಿಟಿ ಕಾರಿಡಾರ್ ನಿರ್ಮಾಣಕ್ಕೆ 125 ಕೋಟಿ
1:51 PM, 18 Feb

ಹೊಸ ವಾರ್ಡ್‌ಗಳ ನಿರ್ವಹಣಾ ಕಾಮಗಾರಿಗೆ 3 ಕೋಟಿ
READ MORE

English summary
A budget expected to be over Rs 12,000 crore will be presented by the Bruhat Bengaluru Mahanagara Palike (BBMP) on Monday. Former deputy mayor and JDS councillor S.P. Hemalatha, now chairperson of the Standing Committee on Taxation and Finance, will present the budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X