ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ವಾರಂಟೈನ್; ಹೋಟೆಲ್ ದರ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಮೇ 18 : ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಆದರೆ, ಬೇರೆ ರಾಜ್ಯ, ದೇಶದಿಂದ ಬೆಂಗಳೂರು ನಗರಕ್ಕೆ ಆಗಮಿಸಿದರೆ ಕ್ವಾರಂಟೈನ್ ಕಡ್ಡಾಯವಾಗಿದೆ. ಜನರು ಅವರ ಖರ್ಚಿನಲ್ಲಿಯೇ ಕ್ವಾರಂಟೈನ್‌ನಲ್ಲಿರಬೇಕು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರು ನಗರಕ್ಕೆ ಆಗಮಿಸುವ ಜನರ ಕ್ವಾರಂಟೈನ್ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದೆ. ಕ್ವಾರಂಟೈನ್‌ಗಾಗಿ ಹೋಟೆಲ್‌ಗಳನ್ನು ಬುಕ್ ಮಾಡಲಾಗಿದೆ. ಅದರ ಖರ್ಚನ್ನು ಜನರೇ ಭರಿಸಬೇಕು.

ಬಿಗ್ ನ್ಯೂಸ್; ಕ್ವಾರಂಟೈನ್ ನಿಯಮ ಸಡಿಲಿಸಿದ ಕರ್ನಾಟಕ ಸರ್ಕಾರ ಬಿಗ್ ನ್ಯೂಸ್; ಕ್ವಾರಂಟೈನ್ ನಿಯಮ ಸಡಿಲಿಸಿದ ಕರ್ನಾಟಕ ಸರ್ಕಾರ

ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ಗೆ ನಿಗದಿ ಮಾಡಿರುವ ದರಗಳನ್ನು ಬಿಬಿಎಂಪಿ ಬಿಡುಗಡೆ ಮಾಡಿದೆ. ಫೈವ್ ಸ್ಟಾರ್, 4/3 ಸ್ಟಾರ್, ಸಾಮಾನ್ಯ ಹೋಟೆಲ್, ಕಡಿಮೆ ದರದ ಹೋಟೆಲ್‌ ಎಂದು ವಿಭಾಗ ಮಾಡಿ ದರಗಳನ್ನು ನಿಗದಿ ಮಾಡಲಾಗಿದೆ.

ಕ್ವಾರಂಟೈನ್ ಡೈರಿ: ಹೋಟೆಲ್ ಶುಲ್ಕ, ವೈದ್ಯರ ನೆರವು ಹೇಗಿದೆ? ಕ್ವಾರಂಟೈನ್ ಡೈರಿ: ಹೋಟೆಲ್ ಶುಲ್ಕ, ವೈದ್ಯರ ನೆರವು ಹೇಗಿದೆ?

ಇಷ್ಟು ಮಾತ್ರವಲ್ಲದೇ ಸರ್ಕಾರದಿಂದಲೇ ಉಚಿತ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಜನರು ಬಯಸಿದರೆ ತಮ್ಮ ಖರ್ಚಿನಲ್ಲಿ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿರಬೇಕು. ಬೇರೆ ರಾಜ್ಯ ಅಥವ ದೇಶದಿಂದ ನಗರಕ್ಕೆ ಆಗಮಿಸಿದರೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ.

ಕೊರೊನಾ ಸಂಕಷ್ಟ: ಬಿಬಿಎಂಪಿ ಬಜೆಟ್ ಅನುದಾನ ಕಡಿತ ಮಾಡಿದ ಸರ್ಕಾರ!ಕೊರೊನಾ ಸಂಕಷ್ಟ: ಬಿಬಿಎಂಪಿ ಬಜೆಟ್ ಅನುದಾನ ಕಡಿತ ಮಾಡಿದ ಸರ್ಕಾರ!

ಕರ್ನಾಟಕಕ್ಕೆ ಬರುವಂತಿಲ್ಲ

ಕರ್ನಾಟಕಕ್ಕೆ ಬರುವಂತಿಲ್ಲ

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, "ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಕರ್ನಾಟಕಕ್ಕೆ ಮೇ 31ರ ತನಕ ಯಾರೂ ಸಹ ಆಗಮಿಸುವಂತಿಲ್ಲ" ಎಂದು ಹೇಳಿದ್ದಾರೆ.

ವಂದೇ ಭಾರತ್ ಮಿಷನ್

ವಂದೇ ಭಾರತ್ ಮಿಷನ್

ವಂದೇ ಭಾರತ್ ಮಿಷನ್ ಅಡಿ ವಿಶೇಷ ವಿಮಾನದಲ್ಲಿ ವಿದೇಶದಿಂದ ಕನ್ನಡಿಗರು ಬೆಂಗಳೂರಿಗೆ ಬರುತ್ತಿದ್ದಾರೆ. ದೆಹಲಿ- ಬೆಂಗಳೂರು ಎಸಿ ಸೂಪರ್ ಫಾಸ್ಟ್ ರೈಲು ಮೂಲಕ ದೆಹಲಿಯಿಂದ ಪ್ರಯಾಣಿಕರು ಬೆಂಗಳೂರಿಗೆ ಆಗಮಿಸುತ್ತಾರೆ. ಇವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

ಬಿಬಿಎಂಪಿ ದರಪಟ್ಟಿ

ಬಿಬಿಎಂಪಿ ದರಪಟ್ಟಿ

5 ಸ್ಟಾರ್ ಹೋಟೆಲ್‌ಗಳಲ್ಲಿ ಒಬ್ಬರಿಗೆ 3000ರೂ., ದಂಪತಿಗಳಿಗೆ 3700 ರೂ., (500 ರೂ. ಊಟ, 550 ರಾತ್ರಿಯ ಊಟದ ದರ) ನಿಗದಿ ಮಾಡಲಾಗಿದೆ. 4/3 ಸ್ಟಾರ್ ಹೋಟೆಲ್‌ನಲ್ಲಿ ಒಬ್ಬರಿಗೆ 1500 ರೂ.,ದಂಪತಿಗಳಿಗೆ 1750 ರೂ., (175 ಊಟ ಮತ್ತು ರಾತ್ರಿಯ ಊಟದ ದರ ಒಬ್ಬರಿಗೆ).

ಸಾಮಾನ್ಯ ದರದ ಹೋಟೆಲ್‌ನಲ್ಲಿ ಒಬ್ಬರಿಗೆ 1200 ರೂ., ದಂಪತಿಗಳಿಗೆ 1450 ರೂ. (ಊಟ, ತಿಂಡಿ, ತೆರಿಗೆ ಸೇರಿ)., ಕಡಿಮೆ ದರದ ಹೋಟೆಲ್‌ನಲ್ಲಿ ಒಬ್ಬರಿಗೆ 750 ರೂ. ದಂಪತಿಗಳಿಗೆ 900 ರೂ., (ಊಟ, ತಿಂಡಿ, ತೆರಿಗೆ ಸೇರಿ).

ಪ್ರಯಾಣಿಕರಿಗೆ ಜಾಗೃತಿ

ಪ್ರಯಾಣಿಕರಿಗೆ ಜಾಗೃತಿ

ಕಳೆದ ವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರಲ್ಲಿ ಸುಮಾರು 40 ಜನ ಕಡ್ಡಾಯ ಕ್ವಾರಂಟೈನ್‌ಗೆ ಒಪ್ಪಿಗೆ ನೀಡಲಿಲ್ಲ. ಆದ್ದರಿಂದ, ಅವರನ್ನು ದೆಹಲಿಗೆ ವಾಪಸ್ ಕಳಿಸಲಾಗಿದೆ. ಈಗ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ ಇದೆ ಎಂದು ಜಾಗೃತಿ ಮೂಡಿಸಲಾಗುತ್ತಿದೆ.

English summary
BBMP announced hotel price for the quarantine. People who return to Bengaluru city must undergo mandatory 14 day quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X