ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಹೀರಾತು ನೀತಿ ಆಗಸ್ಟ್ 31ಕ್ಕೆ ಪ್ರಕಟ: ಬಿಬಿಎಂಪಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 21: ಬೆಂಗಳೂರು ಫ್ಲೆಕ್ಸ್‌, ಬ್ಯಾನರ್‌ ತೆರವಿಗೆ ಕೋರಿ ಸಲ್ಲಿಸಿರುವ ಪಿಐಎಲ್‌ನ್ನು ಹೈಕೋರ್ಟ್‌ ಮಂಗಳವಾರ ವಿಚಾರಣೆ ನಡೆಸಿದೆ. ಜಾಹೀರಾತು ಫಲಕ ತೆರವಿಗೆ ಸಂಬಂಧಿಸಿದಂತೆ ನೋಟಿಸ್‌ಗೆ 1192 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.
ಈಗಲೂ ಕೆಲವು ಕಡೆ ಫ್ಲೆಕ್ಸ್ ಇರುವ ಬಗ್ಗೆ ಮಾಹಿತಿ ಬರುತ್ತಿದೆ, ಬೀಟ್ ಪೊಲೀಸರು ಅಧೀಕ್ಷಕರು ಏನು ಮಾಡುತ್ತಿದ್ದಾರೆ. ಫ್ಲೆಕ್ಸ್ ಇರುವವರೆಗೂ ನಿಮಗೆ ರಿಲ್ಯಾಕ್ಸ್ ಇಲ್ಲ, ಎಂದು ಬಿಬಿಎಂಪಿ, ಪೊಲೀಸರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.

ಆಗಸ್ಟ್ 27ರೊಳಗಾಗಿ ಅವುಗಳ ಪರಿಶೀಲನೆ ಅಂತ್ಯಗೊಳಿಸಲಾಗುವುದು, ಆ.31ರೊಳಗೆ ಜಾಹೀರಾತು ನೀತಿ ರೂಪಿಸಲಾಗುತ್ತದೆ ಎಂದು ಬಿಬಿಎಂಪಿ ಪರ ವಕೀಲ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

 ಫ್ಲೆಕ್ಸ್‌ ಸಮಸ್ಯೆ, ಆ.18ರೊಳಗೆ ಬಗೆಹರಿಸಲು ಹೈಕೋರ್ಟ್‌ ಆದೇಶ ಫ್ಲೆಕ್ಸ್‌ ಸಮಸ್ಯೆ, ಆ.18ರೊಳಗೆ ಬಗೆಹರಿಸಲು ಹೈಕೋರ್ಟ್‌ ಆದೇಶ

ರಾಜ್ಯವ್ಯಾಪಿ ಜಾಹೀರಾತು ನೀತಿ ರೂಪಿಸಲು ಹೈಕೋರ್ಟ್‌ ಸಲಹೆ ನೀಡಿದ್ದು, ಪದೇ ಪದೇ ಫ್ಲೆಕ್ಸ್‌ ಹಾಕುವವರ ವಿವರಗಳನ್ನು ಸಂಗ್ರಹಿಸಿ, ಮತ್ತೆ ಮತ್ತೆ ಕೃತ್ಯ ಎಸಗುವವರು ದಂಡ ಕಟ್ಟಿ ಪಾರಾಗುವಂತಿರಬಾರದು ಎಂದು ಸೂಚನೆ ನೀಡಿದೆ, ಫ್ಲೆಕ್ಸ್‌ ಇರುವವರೆಗೆ ನೀವು ರಿಲ್ಯಾಕ್ಸ್‌ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದು, ಆಗ.31ರೊಳಗೆ ಬೆಂಗಳೂರು ಮೊದಲಿನಂತಾಗಬೇಕುಯ, ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

 ಬೆಂಗಳೂರು ಪೊಲೀಸರಿಗೆ ಹೈಕೋರ್ಟ್‌ ಕಪಾಳಮೋಕ್ಷ: ಕಾರಣ ಇಲ್ಲಿದೆ ನೋಡಿ ಬೆಂಗಳೂರು ಪೊಲೀಸರಿಗೆ ಹೈಕೋರ್ಟ್‌ ಕಪಾಳಮೋಕ್ಷ: ಕಾರಣ ಇಲ್ಲಿದೆ ನೋಡಿ

BBMP assures on HC on Advertiesement policy before August 31

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಹೋರ್ಡಿಂಗ್ಸ್‌ಗಳ ತೆರವಿಗೆ ಸಂಬಂಧಿಸಿದಂತೆ ವರದಿ ನೀಡಲು ಹೈಕೋರ್ಟ್‌ ಬಿಬಿಎಂಪಿಗೆ ಸೂಚನೆ ನೀಡಿದ್ದು, ಆಗಸ್ಟ್ 18ರ ಗಡುವು ನೀಡಿತ್ತು ಈ ಕುರಿತು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್‌ ಆ.31ರೊಳಗಾಘಿ ಜಾಹೀರಾತು ನೀತಿಯನ್ನು ಸಿದ್ಧಪಡಿಸಲು ಗಡುವು ನೀಡಿದೆ.

English summary
BBMP has given a assurence to karnataka High court, then the authority will come out with appropriate advertisement policy before august 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X