ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

198 ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 198 ವಾರ್ಡ್‌ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಿದೆ. ಬಿಬಿಎಂಪಿ ಕೌನ್ಸಿಲ್ ಅವಧಿ ಮುಕ್ತಾಯಗೊಂಡಿದ್ದು, ಪಾಲಿಕೆ ಆಡಳಿತ ನೋಡಿಕೊಳ್ಳಲು ಸರ್ಕಾರ ಆಡಳಿತಾಧಿಕಾರಿ ನೇಮಿಸಿದೆ.

ಬಿಬಿಎಂಪಿ ಚುನಾಯಿತ ಸದಸ್ಯರ‌ ಅವಧಿ ಮುಕ್ತಾಯವಾಗಿರುವುದರಿಂದ, ಸಾರ್ವಜನಿಕರಿಗೆ ‌ಪರಿಣಾಮಕಾರಿಯಾದ ಸೇವೆಗಳನ್ನು ಒದಗಿಸಲು ಪ್ರತಿ ವಾರ್ಡ್‌ಗೆ ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ಕಾರ್ಮಿಕರಲ್ಲಿ ಹೆಚ್ಚಿದ ವೈರಸ್ ಪ್ರಕರಣ: ಕಾರ್ಖಾನೆಗಳಲ್ಲಿ ಬಿಬಿಎಂಪಿ ಕೋವಿಡ್ ಪರೀಕ್ಷೆ ಕಾರ್ಮಿಕರಲ್ಲಿ ಹೆಚ್ಚಿದ ವೈರಸ್ ಪ್ರಕರಣ: ಕಾರ್ಖಾನೆಗಳಲ್ಲಿ ಬಿಬಿಎಂಪಿ ಕೋವಿಡ್ ಪರೀಕ್ಷೆ

ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಎಲ್ಲಾ 198ವಾರ್ಡ್‌ಗಳಿಗೆ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಜನರು ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಗೌರವ್‌ ಗುಪ್ತ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಗೌರವ್‌ ಗುಪ್ತ

ಬೃತಹ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆದು, ಕಾರ್ಪೊರೇಟರ್ ಆಯ್ಕೆಯಾಗುವ ತನಕ ನೋಡೆಲ್ ಅಧಿಕಾರಿಗಳು ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಗಮನಹರಿಸಲಿದ್ದಾರೆ. ಡಿಸೆಂಬರ್ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಬಿಬಿಎಂಪಿ ಮೀಸಲಾತಿ ಪಟ್ಟಿ; ಮಾಜಿ ಮೇಯರ್‌ಗಳ ಕೈ ತಪ್ಪಿದ ವಾರ್ಡ್! ಬಿಬಿಎಂಪಿ ಮೀಸಲಾತಿ ಪಟ್ಟಿ; ಮಾಜಿ ಮೇಯರ್‌ಗಳ ಕೈ ತಪ್ಪಿದ ವಾರ್ಡ್!

ಕೌನ್ಸಿಲ್ ಅವಧಿ ಅಂತ್ಯ

ಕೌನ್ಸಿಲ್ ಅವಧಿ ಅಂತ್ಯ

2015ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಎಲ್ಲಾ 198 ವಾರ್ಡ್‌ಗಳ ಕಾರ್ಪೊರೇಟರ್‌ಗಳ ಅವಧಿ ಸೆಪ್ಟೆಂಬರ್ 10ರಂದು ಅಂತ್ಯಗೊಂಡಿದೆ. ಕೌನ್ಸಿಲ್ ಅವಧಿ ಅಂತ್ಯಗೊಂಡ ಹಿನ್ನಲೆಯಲ್ಲಿ ಈಗ ವಾರ್ಡ್‌ಗಳಲ್ಲಿ ಕಾರ್ಪೊರೇಟರ್‌ಗಳಿಲ್ಲ. ಬಿಬಿಎಂಪಿಯ ಆಡಳಿತ ಅಧಿಕಾರಿಗಳ ಕೈಯಲ್ಲಿ ಇದೆ.

ಗೌರವ್ ಗುಪ್ತಾ ಆಡಳಿತಾಧಿಕಾರಿ

ಗೌರವ್ ಗುಪ್ತಾ ಆಡಳಿತಾಧಿಕಾರಿ

ಕರ್ನಾಟಕ ಸರ್ಕಾರ 1990ನೇ ಬ್ಯಾಚ್ ಐಎಎಸ್ ಅಧಿಕಾರಿ ಗೌರವ್ ಗುಪ್ತರನ್ನು ಬಿಬಿಎಂಪಿ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದೆ. ಬಿಬಿಎಂಪಿ ಚುನಾವಣೆ ನಡೆದು ಹೊಸ ಕೌನ್ಸಿಲ್ ಅಸ್ತಿತ್ವಕ್ಕೆ ಬರುವ ತನಕ ಆಡಳಿತಾಧಿಕಾರಿಯೇ ಪಾಲಿಕೆಯ ಆಡಳಿತ ನೋಡಿಕೊಳ್ಳಲಿದ್ದಾರೆ.

ಸದ್ಯಕ್ಕೆ ಚುನಾವಣೆ ನಡೆಯಲ್ಲ

ಸದ್ಯಕ್ಕೆ ಚುನಾವಣೆ ನಡೆಯಲ್ಲ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದ್ಯ 198 ವಾರ್ಡ್‌ಗಳನ್ನು ಒಳಗೊಂಡಿದೆ. ಅದನ್ನು 225ಕ್ಕೆ ಹೆಚ್ಚಿಸಲು ಕರ್ನಾಟಕ ಸರ್ಕಾರ ಬಯಸಿದೆ. ಬಿಬಿಎಂಪಿ ಕಾಯ್ದೆಗೆ ತಿದ್ದುಪಡಿ ತರುವ ತನಕ ಪಾಲಿಕೆ ಚುನಾವಣೆ ನಡೆಯುದಿಲ್ಲ.

Recommended Video

Chahal ಎಸೆತಕ್ಕೆ Sun Risers ತತ್ತರ!! | Oneindia Kannada

ನೋಡಲ್ ಅಧಿಕಾರಿಗಳ ಪಟ್ಟಿ

ಸದ್ಯ 198 ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಯಾವ ವಾರ್ಡ್‌ಗೆ ಯಾರು ಅಧಿಕಾರಿಗಳು ಎಂಬ ಮಾಹಿತಿ ಇಲ್ಲಿದೆ.

English summary
BBMP appointed nodal officers for every ward. Citizens can approach their respective ward nodal officer for the ward issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X