ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌1ಎನ್‌1 ಜ್ವರ: ಆತಂಕ ಬೇಡ ಎಂದು ಬಿಬಿಎಂಪಿ ಮನವಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ಎಚ್‌1ಎನ್‌1 ಜ್ವರ ಸಾಮಾನ್ಯ ವೈರಸ್ ಜ್ವರವಾಗಿದ್ದು, ನಿರ್ದಿಷ್ಟ ಮತ್ತು ಸೂಕ್ತ ಚಿಕಿತ್ಸೆಯಿಂದ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಹಾಗಾಗಿ ಆತಂಕ ಬೇಡ ಎಂದು ಬಿಬಿಎಂಪಿ ಮನವಿ ಮಾಡಿದೆ.

ಈ ಕುರಿತು ಮೇಯರ್ ಗಂಗಾಂಬಿಕೆ ಟ್ವೀಟ್ ಮಾಡಿದ್ದು, ನಗರದ ವಿವಿಧ ಸ್ಥಳಗಳಲ್ಲಿ ಅನಿರೀಕ್ಷಿತ ತಪಾಸಣೆಯನ್ನು ನಡೆಸಿ, ಮಡಿವಾಳದ ಕೆಳ ಸೇತುವೆ ಬಳಿ ತಪಾಸಣೆಯನ್ನು ನಡೆಸಿ ಮಳೆ ಗಾಲದಲ್ಲಿ ನೀರು ಶೇಖರಣೆ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು, ಅಲ್ಲದೇ ರಸ್ತೆ ಬದಿಯಲ್ಲಿ ಶೇಖರಣೆ ಯಾಗಿರುವ ಮರಳುಗಳನ್ನು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಭಿಯಂತರರಿಗೆ ಆದೇಶಿಸಿದೆ.

ತದನಂತರ, ಹಬ್ಬದ ಹಿನ್ನಲೆಯಲ್ಲಿ ಕೆ.ಆರ್ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ, ಸ್ವಚ್ಛತೆ ಯನ್ನು ಕಾಪಾಡುವಂತೆ ವ್ಯಾಪರಸ್ಥರುಗಳಿಗೆ ಸೂಚನೆ ನೀಡಿ, ಬರುವ ಗ್ರಾಹಕರು ಸುಲಭವಾಗಿ ಒಡಾಡುವಂತೆ ವ್ಯವಸ್ಥಿತ ರೀತಿಯಲ್ಲಿ ವ್ಯಾಪಾರ ನಡೆಸಲು ಸೂಚಿಸಿದೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಜನವರಿ 2018ರಿಂದ ಇಲ್ಲಿಯವರಗೆ ಒಟ್ಟು 4902 ಜನರನ್ನು ಪರೀಕ್ಷಿಸಲಾಗಿದೆ. ಈ ಪೈಕಿ 456 ಪ್ರಕರಣಗಳು ಎಚ್‌1ಎನ್‌1 ರೋಗೋಣು ಇರುವುದು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಈ ಸಂಬಂಧ ಈಗಾಗಲೇ ಎಲ್ಲ ಭಾಗದ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.‌ ಯಾವುದೇ ರೀತಿಯ ಜ್ವರ ಕಂಡು ಬಂದರು ಅಥವಾ ಈ ರೋಗಾಣುವಿನ ಲಕ್ಷಣದ ಅನುಭವವಾದರೆ ಕೂಡಲೇ ಜನರು ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ.

ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ! ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ!

ಪ್ರತಿ ವರ್ಷ ಎಚ್‌1ಎನ್‌1 ಪ್ರಕರಣಗಳು ದಾಖಲಾಗುತ್ತಿವೆ. 2015 ರಲ್ಲಿಯೇ ಈ ರೋಗಾಣುವಿನಿಂದ 94 ಮಂದಿ ಸಾವನ್ನಪ್ಪಿದ್ದರು. ಆ ನಂತರದ ವರ್ಷದಲ್ಲಿ ಮುಂಜಾಗೃತಿ ವಹಿಸಿದ್ದರಿಂದ ಈ ರೋಗಾಣುವಿನಿಂದ ಸಾವನ್ನಪ್ಪಿದವರ ಸಂಖ್ಯೆ ಇಳಿಮುಖವಾಗಿದೆ. 2017 ರಲ್ಲಿ 3000 ಪ್ರಕರಣಗಳು ಪತ್ತೆಯಾಗಿದ್ದವು.‌ ಈ ವರ್ಷ ಕೂಡ ಎಚ್‌1ಎನ್‌1 ಆತಂಕ ಹರಡುತ್ತಿದೆ. ಈ ಬಗ್ಗೆ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆದರೆ ಗಾಬರಿಯಾಗದಂತೆ ಇಂಥ ಲಕ್ಷಣ ಕಂಡು ಬಂದರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಅನುಸರಿಸಬೇಕಾದ ಕ್ರಮಗಳು

ಅನುಸರಿಸಬೇಕಾದ ಕ್ರಮಗಳು

-ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಕಾಗದದಿಂದ ಮುಚ್ಚಿಕೊಳ್ಳಿ
-ನಿಮ್ಮ ಮೂಗು, ಕಣ್ಣು ಅಥವಾ ಬಾಯಿಯನ್ನು ಮುಟ್ಟಿಕೊಳ್ಳುವ ಮೊದಲು ಮತ್ತು ನಂತರ ನಿಮ್ಮ ಕೈಗೊಳನ್ನು ಸಾಬೂನಿನಿಂದ ಮತ್ತು ನೀರಿನಿಂದ ತೊಳೆದುಕೊಳ್ಳಿ
- ಚೆನ್ನಾಗಿ ನಿದ್ದೆ ಮಾಡಿ, ದೈಹಿಕವಾಗಿ ಚಟುವಟಿಕೆಯಿಂದಿರಿ ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರೆ- ಧಾರಾಳವಾಗಿ ನೀರು ಕುಡಿಯಿರಿ ಮತ್ತು ಪೌಷ್ಠಿಕಾಂಶವಿರುವ ಆಹಾರ ಸೇವಿಸಿ
-ಜನಸಂದಣಿಯಿರುವ ಸ್ಥಳಗಳಿಗೆ ಹೋದಾಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಮರೆಯದಿರಿ.

ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ

ಮಾಡಬಾರದ ಕ್ರಿಯೆಗಳು

ಮಾಡಬಾರದ ಕ್ರಿಯೆಗಳು

-ಹಸ್ತ ಲಾಘವ ಹಾಗೂ ಇತರೆ ರೂಪದ ದೈಹಿಕ ಸಂಪರ್ಕಸೊಂದಿಗೆ ಶುಭ ಕೋರಿಕೆ
-ವೈದ್ಯರುಗಳು ಇಲ್ಲವೇ ಔಷಧವನ್ನು ತೆಗೆದುಕೊಳ್ಳುವುದು
-ರಸ್ತೆಯಲ್ಲಿ, ಎಲ್ಲೆಂದರಲ್ಲಿ ಉಗುಳುವುದು
-ಅನಾವಶ್ಯಕವಾಗಿ ಜನ ಸಂದಣಿ ಪ್ರದೇಶಗಳಿಗೆ ಭೇಟಿ ನೀಡುವುದು
-ಪ್ಲೂ ತರಹದ ಚಿಹ್ನೆಗಳಿರುವ ಮಕ್ಕಳನ್ನು ಶಾಲೆಗೆ ಕಳುಹಿಸುವುದು

ಬೆಂಗಳೂರಲ್ಲಿ ಎಚ್‌1ಎನ್‌1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್ ಬೆಂಗಳೂರಲ್ಲಿ ಎಚ್‌1ಎನ್‌1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್

4902ಮಂದಿಯ ಪರೀಕ್ಷೆ, 456 ಮಂದಿಯಲ್ಲಿ ರೋಗಾಣು ಮತ್ತೆ

4902ಮಂದಿಯ ಪರೀಕ್ಷೆ, 456 ಮಂದಿಯಲ್ಲಿ ರೋಗಾಣು ಮತ್ತೆ

ಜನವರಿ 2018ರಿಂದ ಇಲ್ಲಿಯವರಗೆ ಒಟ್ಟು 4902 ಜನರನ್ನು ಪರೀಕ್ಷಿಸಲಾಗಿದೆ. ಈ ಪೈಕಿ 456 ಪ್ರಕರಣಗಳು ಎಚ್‌1ಎನ್‌1 ರೋಗೋಣು ಇರುವುದು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಈ ಸಂಬಂಧ ಈಗಾಗಲೇ ಎಲ್ಲ ಭಾಗದ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.‌ ಯಾವುದೇ ರೀತಿಯ ಜ್ವರ ಕಂಡು ಬಂದರು ಅಥವಾ ಈ ರೋಗಾಣುವಿನ ಲಕ್ಷಣದ ಅನುಭವವಾದರೆ ಕೂಡಲೇ ಜನರು ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದು ಮೇಯರ್ ತಿಳಿಸಿದ್ದಾರೆ.

ಎಚ್‌1 ಎನ್‌1 ರೋಗದ ಲಕ್ಷಣಗಳೇನು?

ಎಚ್‌1 ಎನ್‌1 ರೋಗದ ಲಕ್ಷಣಗಳೇನು?

ಮೂರನೇ ಹಂತದಲ್ಲಿ ತೀವ್ರ ಸ್ವರೂಪದ ಜ್ವರ ಕಫದಲ್ಲಿ ರಕ್ತ, ಉಬ್ಬಸ, ನ್ಯುಮೋನಿಯಾದೊಂದಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಹಂತದಲ್ಲಿ ರೋಗಿ ಗಂಭೀರ ಸ್ಥಿತಿಗೆ ತಲುಪುತ್ತಾನೆ. ಇದಕ್ಕೆ ಚಿಕಿತ್ಸೆ ಫಲಕಾರಿಯಾಗುವುದು ಕಷ್ಟ. 10ರಲ್ಲಿ ಒಂದಿಬ್ಬರು ಮಾತ್ರ ಬದುಕುವ ಸಾಧ್ಯತೆ ಇರುತ್ತದೆ.

English summary
BBMP has issued a public notice that appealing not to be panicked about H1N1 fever since it has proper treatment and vaccines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X