ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ. ಆರ್. ಪುರ, ಟಿನ್ ಫ್ಯಾಕ್ಟರಿ ಸಂಚಾರ ದಟ್ಟಣೆ ತಪ್ಪಿಸಲು ಹೊಸ ಐಡಿಯಾ

|
Google Oneindia Kannada News

ಬೆಂಗಳೂರು, ಜೂನ್ 29: ಬೆಂಗಳೂರಿನ ಮತ್ತೊಂದು ಜಂಕ್ಷನ್ ನಗರದಿಂದ ಹೊರ ಹೋಗುವ ಮತ್ತು ಒಳ ಬರುವ ಜನರನ್ನು ಹೈರಾಣಾಗಿಸಿದೆ. ಅದುವೇ ಕೆ. ಆರ್. ಪುರ ಸಮೀಪದ ಟಿನ್ ಫ್ಯಾಕ್ಟರಿ ಜಂಕ್ಷನ್. ಹೊಸಕೋಟೆ ಕೋಲಾರ, ಆಂಧ್ರ ಪ್ರದೇಶ, ತಿರುಪತಿಗೆ ಹೋಗುವ ಜನರು ಇದೇ ಮಾರ್ಗವನ್ನು ಬಳಸುತ್ತಾರೆ. ಈ ಜಂಕ್ಷನ್ ಅನ್ನು ದಾಟಿದರೆ ಸಾಕು 20 ಕಿ. ಮೀ. ಹೆಚ್ಚು ದೂರ ಕ್ರಮಿಸಿದಂತೆ ಅನಿಸದೇ ಇರಲ್ಲ.

ಕೃಷ್ಣರಾಜಪುರಕ್ಕೆ ಹೋಗುವ ಹಾದಿಯಲ್ಲಿ ಸಿಗುವುದೇ ಟಿನ್ ಫ್ಯಾಕ್ಟರಿ ಜಂಕ್ಷನ್. ಈ ಜಂಕ್ಷನ್‌ನಲ್ಲೇ ಬಸ್ ನಿಲ್ದಾಣವಿದೆ. ಮೇಲುಸೇತುವೆಯನ್ನು ಹತ್ತುವ ಬಸ್‌ಗಳು ಮುಖ್ಯರಸ್ತೆಯಲ್ಲೇ ನಿಲ್ಲುತ್ತವೆ. ಮೇಲ್ಸೆತುವೆ ಹತ್ತುವ ಭಾಗವು ತುಂಬಾ ಕಿರಿದಾಗಿದ್ದು ಸಂಚಾರ ದಟ್ಟಣೆ ನಿಂಯಂತ್ರಣಕ್ಕೆ ಸಿಲುಕದಂತೆ ಆಗಿದೆ.

ಕೆ. ಆರ್. ಪುರಕ್ಕೆ ಹೋಗುವ ಮಾರ್ಗದಲ್ಲಿರುವ ಟಿನ್ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ, ಸಂಚಾರಿ ಆಯುಕ್ತ ರವಿಕಾಂತೇಗೌಡ ಮತ್ತು ಇತರೆ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಎಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಯಾವ ಕ್ರಮದ ಮೂಲಕ ಸಂಚಾರ ದಟ್ಟಣೆಯನ್ನು ನಿಯಂತ್ರಣವನ್ನು ಮಾಡಬಹುದು ಎಂಬುದನ್ನು ಚರ್ಚಿಸಿ ತೀರ್ಮಾನ ತೆಗೆದುಕೊಂಡರು.

ದೇವಸ್ಥಾನ ಸ್ಥಳಾಂತರಿಸಿ ಬಸ್ ನಿಲುಗಡೆಗೆ ಅನುವು

ದೇವಸ್ಥಾನ ಸ್ಥಳಾಂತರಿಸಿ ಬಸ್ ನಿಲುಗಡೆಗೆ ಅನುವು

ಬೆಂಗಳೂರು ನಗರದ ಕೆ. ಆರ್. ಪುರ (ಟಿನ್ ಪ್ಯಾಕ್ಟರಿ) ಜಂಕ್ಷನ್ ಬಳಿ ಬಸ್ ಗಾಗಿ ಪ್ರಯಾಣಿಕರು/ ಸಾರ್ವಜನಿಕರು ಹ್ಯಾಂಗಿಂಗ್ ಮೇಲುಸೇತುವೆ ಪ್ರಾರಂಭದ ಬಳಿ ನಿಲ್ಲುತ್ತಾರೆ. ಇದರಿಂದ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಜೊತೆಗೆ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಮಾರ್ಗದಲ್ಲಿ ಬಸ್‌ಗಳು ನಿಲ್ಲುವುದರಿಂದ ಈ ಭಾಗದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಈ ಸಂಬಂಧ ರಸ್ತೆ ಬದಿಯಿದ್ದ ದೇವಸ್ಥಾನವನ್ನು ಸ್ಥಳಾಂತರಿಸಿ ಆ ಸ್ಥಳದಲ್ಲಿ ಬಸ್‌ಗಳು ನಿಲ್ಲಲು ಬಸ್ ಆದ್ಯತಾ ಮಾರ್ಗ(ಬಸ್ ಬೇ) ಮಾಡಲಾಗುತ್ತಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿದೆ.

ಸಂಚಾರಿ ಪೊಲೀಸ್ ವಿಭಾಗವು ಕ್ರಮ ಕೈಗೊಳ್ಳಲು ಸೂಚನೆ

ಸಂಚಾರಿ ಪೊಲೀಸ್ ವಿಭಾಗವು ಕ್ರಮ ಕೈಗೊಳ್ಳಲು ಸೂಚನೆ

ಟಿನ್ ಫ್ಯಾಕ್ಟರಿ ರಸ್ತೆಯಲ್ಲಿ ತ್ವರಿತವಾಗಿ ಕೆಲಸ ಮಾಡಿ ರಸ್ತೆಗೆ ಡಾಂಬರೀಕರಣ ಹಾಕಿ ಆ ಸ್ಥಳದಲ್ಲಿ ಬಸ್ ಗಳು ನಿಲ್ಲುವಂತೆ ಮಾಡಲು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದೇ ರೀತಿ ನಗರದೊಳಗೆ ಬರುವ ರಸ್ತೆ ಬದಿಯೂ ಬಸ್ ಬೇ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಆ ಸ್ಥಳದಲ್ಲಿ ಮಾತ್ರ ಬಸ್ ಗಳು ನಿಲ್ಲುವಂತೆ ಸಂಚಾರಿ ಪೊಲೀಸ್ ವಿಭಾಗವು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ದೀರ್ಘಾವಧಿ ಯೋಜನೆ:

ದೀರ್ಘಾವಧಿ ಯೋಜನೆ:

*ಬಸ್ ಆದ್ಯತಾ ಮಾರ್ಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ

*ಬೀದಿ ದೀಪ ಅಳವಡಿಕೆ

*ಪಾದಚಾರಿ ಮಾರ್ಗ ನಿರ್ಮಾಣ

*ರಸ್ತೆಯಲ್ಲಿ ಬಸ್ ಗಳು ನಿಲ್ಲದಂತೆ ಕ್ರಮವಹಿಸುವುದು

*ಸೈನೇಜ್ ಗಳ ಅಳವಡಿಕೆ

ದೀರ್ಘಾವಧಿ ಯೋಜನೆ:

*ರೈಲ್ವೆ ಬ್ರಿಡ್ಜ್ ಬಳಿ ಬಸ್ ಟರ್ಮಿನಲ್ ನಿರ್ಮಾಣ

ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿ

ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿ

ಸಂಚಾರ ದಟ್ಟಣೆ ಜಂಕ್ಷನ್ ಪರಿಶೀಲನೆಗೆ ಅಧಿಕಾರಿಗಳು ಸಹಕಾರವನ್ನು ನೀಡಿದ್ದಾರೆ. ಈ ವೇಳೆ ಜಲಮಂಡಳಿ ಅಧ್ಯಕ್ಷ ಜಯರಾಮ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೇ ಗೌಡ, ಸ್ಮಾರ್ಟ್ ಸಿಟಿ ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ರಾಜೇಂದ್ರ ಚೋಳನ್, ಪಾಲಿಕೆಯ ಎಲ್ಲಾ ವಲಯ/ ವಿಶೇಷ ಆಯುಕ್ತರುಗಳು, ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Recommended Video

HD Revanna ನವರು R Ashok ಹೇಳಿಕೆ ವಿರುದ್ಧ ತಿರುಗೇಟು ನೀಡಿದ್ದಾರೆ | Oneindia Kannada

English summary
BBMP and Bengaluru traffic police plan to control traffic issue in Kr pura Tin Factory Junction. Road connecting Bengaluru city and Hosakote, kolara, Andrapradesh, Thirupathi, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X