ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿಲಿಗೆ ಬರಿದಾಗುತ್ತಿದೆ ಅಂತರ್ಜಲ, ಜಲಮಂಡಳಿಯಿಂದ ಉಚಿತ ನೀರು ಪೂರೈಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 16: ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆ ಆರಂಭವಾಗಿದೆ. ವಿಪರೀತಿ ಬಿಸಿಲಿಂದಾಗಿ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಬಡಾವಣೆಗಳಿಗೆ ಬಿಬಿಎಂಪಿ ಮತ್ತು ಜಲಮಂಡಳಿಯಿಂದ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ.

ನೀರಿನ ಮಿತ ಬಳಕೆ ಜಾಗೃತಿಗೆ 'ಹಾಫ್ ಬಕೆಟ್ ಚಾಲೆಂಜ್': ನೀವೂ ಸ್ವೀಕರಿಸಿ ನೀರಿನ ಮಿತ ಬಳಕೆ ಜಾಗೃತಿಗೆ 'ಹಾಫ್ ಬಕೆಟ್ ಚಾಲೆಂಜ್': ನೀವೂ ಸ್ವೀಕರಿಸಿ

ಶುಕ್ರವಾರ ಬಿಬಿಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಳೆಯ ವಾರ್ಡ್‌ಗಳು ಮತ್ತು ಹೊಸದಾಗಿ ಸೇರ್ಪಡೆಗೊಂಡ 7 ಪುರಸಭೆ ಮತ್ತು 1 ನಗರಸಭೆಗೆ ಜಲಮಂಡಳಿ ನೀರು ಪೂರೈಸಲಿದೆ. 110 ಹಳ್ಳಿಗಳಿಗೆ ಬಿಬಿಎಂಪಿಯಿಂದ ನೀರು ಪೂರೈಸಲು ನಿರ್ಧರಿಸಲಾಗಿದೆ.

BBMP and BWSSB will provide free water during summer

ಪಾಲಿಕೆಯು 570 ಚದರ ಕಿ.ಮೀ ವ್ಯಾಪ್ತಿಯಲ್ಲಿ ಈಗಾಗಲೇ ಕಾವೇರಿ ನೀರು ಪೂರೈಸಲಾಗುತ್ತಿದೆ. ಒಂದು ವೇಳೆ ತಾಂತ್ರಿಕ ಸಮಸ್ಯೆ ಎದುರಾದರೆ ಜಲಮಂಡಳಿಯ 68 ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲಾಗುತ್ತದೆ.

ಉಳಿದಂತೆ 110 ಹಳ್ಳಿಗಳಿಗೆ ಅಲ್ಲಿರುವ ಜಲಮಂಡಳಿಯ 1286 ಬೋರ್‌ವೆಲ್ ಮತ್ತು 41 ಜಲಾಗಾರಗಳಿಂದ ಬಿಬಿಎಂಪಿಯು 267 ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಿದೆ. ಹೆಚ್ಚುವರಿ ಟ್ಯಾಂಕರ್ ಅಗತ್ಯವಿದ್ದರೆ ಟೆಂಡರ್ ಪ್ರಕ್ರಿಯೆ ನಡೆಸಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
To overcome the shortage of water during summer, BBMP and BWSSB have decided to supply free water tank to citizens of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X