ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂತು ಮಳೆಗಾಲ; ಬಿಬಿಎಂಪಿಯ ತಯಾರಿ ನೋಡಿದ್ರಾ!

|
Google Oneindia Kannada News

ಬೆಂಗಳೂರು, ಜೂನ್ 01 : ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಬಿಬಿಎಂಪಿ ಮಳೆಗಾಲದತ್ತ ಗಮನಹರಿಸಿದೆ. ಅಧಿಕೃತವಾಗಿ ಮುಂಗಾರು ಮಳೆ ಆರಂಭವಾಗಲು ಕೆಲವೇ ದಿನಗಳು ಉಳಿದಿವೆ. ಮಳೆಯಿಂದ ಸಮಸ್ಯೆಯಾದರೆ ಬಗೆ ಹರಿಸಲು ನಾವು ಸಿದ್ಧ ಎಂದು ಬಿಬಿಎಂಪಿ ಹೇಳಿದೆ.

Recommended Video

Padarayanapura corporator Imran Pasha shares special video from quaratine centre | Oneindia Kannada

ಸೋಮವಾರ ನಗರದ ಟೌನ್ ಹಾಲ್ ಮುಂಭಾಗ ಮಳೆಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ವಸ್ತು ಪ್ರದರ್ಶನ ನಡೆಸಲಾಯಿತು. ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಮತ್ತು ಕಂದಾಯ ಸಚಿವ ಆರ್. ಅಶೋಕ ವಸ್ತುಗಳನ್ನು ವೀಕ್ಷಣೆ ಮಾಡಿದರು.

ಬೆಂಗಳೂರಲ್ಲಿ ವರುಣನ ಅಬ್ಬರ; 45 ಮರಗಳು ಧರೆಗೆ ಬೆಂಗಳೂರಲ್ಲಿ ವರುಣನ ಅಬ್ಬರ; 45 ಮರಗಳು ಧರೆಗೆ

ಬಿಬಿಎಂಪಿ, ಅಗ್ನಿಶಾಮಕ ಇಲಾಖೆಯ ಮಳೆಯಿಂದ ಆಗುವ ಹಾನಿ ತಪ್ಪಿಸಲು ಬಳಸುವ ವಸ್ತುಗಳನ್ನು ಪ್ರದರ್ಶನ ಮಾಡಿದವು. ಮರಗಳನ್ನು ತೆರವುಗೊಳಿಸುವ ತಂಡ ಹಾಗೂ ಅವಶ್ಯಕ ಸಲಕರಣೆಗಳ ಜೊತೆ ಅಣಕು ಪ್ರದರ್ಶನ ನಡೆಸಿತು.

ಗುಡುಗು ಸಹಿತ ಮಳೆ; ರಾಜ್ಯದ 8 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ಗುಡುಗು ಸಹಿತ ಮಳೆ; ರಾಜ್ಯದ 8 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್

ಹೈ ಫ್ರಷರ್ ಪಂಪ್, ಅಗ್ನಿಶಾಮಕ ವಾಹನ, ಲೈಫ್ ಬೋಟ್, ಲೈಫ್ ಜಾಕೆಟ್ ಸೇರಿದಂತೆ ಇನ್ನಿತರೆ ಅವಶ್ಯಕ ಸಾಮಾಗ್ರಿಗಳನ್ನು ಮಳೆಗಾಲಕ್ಕಾಗಿ ಸಿದ್ಧಪಡಿಸಲಾಗಿದೆ. ಮುಂಗಾರು ಅಧಿಕೃತವಾಗಿ ಇಂದು ಕೇರಳಕ್ಕೆ ಪ್ರವೇಶ ಮಾಡಿದ್ದು, ಕರ್ನಾಟಕದಲ್ಲಿಯೂ ಮಳೆ ಆರಂಭವಾಗಲಿದೆ.

ಸಡನ್ನಾಗಿ ಸಕತ್ ಜೋರ್ ಮಳೆ, ಕಂಗಾಲಾದ ಬೆಂಗಳೂರಿಗರು ಸಡನ್ನಾಗಿ ಸಕತ್ ಜೋರ್ ಮಳೆ, ಕಂಗಾಲಾದ ಬೆಂಗಳೂರಿಗರು

ಮಳೆ, ಮರ, ವಿದ್ಯುತ್

ಮಳೆ, ಮರ, ವಿದ್ಯುತ್

ಬೆಂಗಳೂರು ನಗರದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮುಂಗಾರು ಪೂರ್ವ ಮಳೆಗೆ ಹಲವು ಮರಗಳು ಧರೆಗೆ ಉರುಳಿವೆ. ಮಳೆಗಾಲ ಆರಂಭವಾದರೆ ಮರ ಬೀಳುವುದು, ರಸ್ತೆಯಲ್ಲಿ ನೀರು ತುಂಬಿಕೊಳ್ಳುವುದು ಸಾಮಾನ್ಯ. ಆಗ ಬಿಬಿಎಂಪಿಗೆ ಕರೆ ಹೋಗುತ್ತದೆ.

ಸಿಬ್ಬಂದಿಗಳು ತಯಾರಿ

ಸಿಬ್ಬಂದಿಗಳು ತಯಾರಿ

ಮಳೆಗಾಲದಲ್ಲಿ ಬೆಂಗಳೂರು ನಗರದ ಸಮಸ್ಯೆಯನ್ನು ಎದುರಿಸಲು ಬಿಬಿಎಂಪಿ ವಿಶೇಷ ತಂಡ ರಚನೆ ಮಾಡಿರುತ್ತದೆ. ಮತ್ತೊಂದು ಕಡೆ ಅಗ್ನಿ ಶಾಮಕ ದಳ, ಬೆಸ್ಕಾಂ ತಂಡಗಳು ಸಹ ಸಮಸ್ಯೆ ಬಗೆಹರಿಸುವ ಕಾರ್ಯದಲ್ಲಿ ತೊಡಗುತ್ತವೆ.

ದೂರು ಕೊಡುವುದು ಹೇಗೆ?

ದೂರು ಕೊಡುವುದು ಹೇಗೆ?

ಬೆಂಗಳೂರು ನಗರದಲ್ಲಿ ಮಳೆಯಿಂದಾಗಿ ಸಮಸ್ಯೆ ಉಂಟಾದರೆ 080-22660000 ನಂಬರ್‌ಗೆ ಕರೆ ಮಾಡಿ ದೂರು ಕೊಡಬಹುದು. ವಾಟ್ಸಪ್‌ ಮಾಡಲು ಸಂಖ್ಯೆ 9480685700. ಇದರ ಜೊತೆಗೆ ಆಯಾ ವಲಯದ ವ್ಯಾಪ್ತಿಯಲ್ಲಿಯೂ ಸಹಾಯವಾಣಿಯನ್ನು ಬಿಬಿಎಂಪಿ ತೆರೆದಿದೆ.

ಏನು ಮಾಡಬಾರದು?

ಏನು ಮಾಡಬಾರದು?

* ಮಳೆಗಾಲದಲ್ಲಿ ಮನೆಯಿಂದ ಹೊರ ಹೋಗುವಾಗ ವಿದ್ಯುತ್ ಮತ್ತು ಗ್ಯಾಸ್ ಸಂಪರ್ಕವನ್ನು ಸ್ಥಗಿತಗೊಳಿಸಿ.

* ತುರ್ತು ಸಂದರ್ಭದಲ್ಲಿ ಆಪ್ತರಿಗೆ ನೀವು ತೆರಳುವ ಜಾಗದ ಬಗ್ಗೆ ಮಾಹಿತಿ ನೀಡಿರಿ.

* ಮಳೆ ಬರುವಾಗ, ನೀರು ತುಂಬಿದ ರಸ್ತೆ ದಾಟುವಾಗ ಜಾಗೃತೆ ಇರಲಿ, ವಾಹನ ಚಲಾಯಿಸುವಾಗಲೂ ಜಾಗೃತರಾಗಿರಿ.

* ವಿದ್ಯುತ್ ಕಂಬ, ತಂತಿ, ಮರಗಳ ಕೆಳಗೆ ನಿಲ್ಲದಿರಿ

* ರಸ್ತೆ ದಾಟುವಾಗ ಮಕ್ಕಳ ಬಗ್ಗೆ ಗಮನವಿರಲಿ

English summary
Bruhat Bengaluru Mahanagara Palike (BBMP) all set for face monsoon rain. Fire brigade and BBMP team conduct the mock drill on June 1, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X