ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ಕೂಸು ಹುಟ್ಟುವ ಮುನ್ನವೇ ಖುರ್ಚಿಗಾಗಿ ಹತ್ತು ಕೋಟಿ ವ್ಯಯ

|
Google Oneindia Kannada News

ಬೆಂಗಳೂರು, ಮೇ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ರಾಜನಾಗುವ ಮೊದಲೇ ಸಿಂ"ಆಸನ'ವನ್ನು ಸಕಲ ರೀತಿಯಲ್ಲೂ ಸಜ್ಜುಗೊಳಿಸಲಾಗುತ್ತಿದೆ. ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡುರಿವುದರಿಂದ ಪಾಲಿಗೆಯ ಕೇಂದ್ರ ಕಚೇರಿಯಲ್ಲಿ ಗರಿಗೆದರಿದ ವಾತಾವರಣ ನಿರ್ಮಾಣವಾಗುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿ, ಮೀಸಲಾತಿ ಅನ್ವಯ ಚುನಾವಣೆಯನ್ನು ನಡೆಸಲು ಸರ್ಕಾರ ಚಿಂತಿಸಿತ್ತು. ಅದರಂತೆ ಸುಪ್ರೀಂಕೋರ್ಟ್ 12 ವಾರಗಳಲ್ಲಿ ಎಲ್ಲಾ ಸಿದ್ದತೆಯನ್ನು ಮಾಡಿಕೊಂಡು ಚುನಾವಣೆಯನ್ನು ಎದುರಿಸುವಂತೆ ಆದೇಶಿಸಿತ್ತು. ಅದರಂತೆ ಬಿಬಿಎಂಪಿ ವಾರ್ಡ್‌ಗಳ ವಿಂಗಡನೆ ಕಾರ್ಯವನ್ನು ಮುಗಿಸಿ ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿಯನ್ನು ನೀಡಲು ಸಜ್ಜಾಗುತ್ತಿದೆ. ಅದರಂತೆ ಬಿಬಿಎಂಪಿಯಿಂದ ಹೊಸದಾಗಿ ಆಯ್ಕೆಯಾಗಿ ಬರುವ ಪಾಲಿಕೆಯ ನೂತನ ಸದಸ್ಯರಿಗೆ ಹೊಸ ಕೌನ್ಸಿಲ್ ಹೌಸ್ ನಿರ್ಮಾಣವಾಗಲಿದೆ.

ಬಿಬಿಎಂಪಿಯ ವಾರ್ಡ್ ವಿಂಗಡನೆಯ ಕಾರ್ಯವನ್ನು ಮುಗಿಸಿದ್ದು, ಒಂದು ವಾರ್ಡ್ ಎರಡು ವಿಧಾನಸಭಾ ಕ್ಷೇತ್ರ ಹಂಚಿಕೆಯಾಗದಂತೆ ಕ್ರಮ ವಹಿಸಲಾಗಿದೆ. ಸರ್ಕಾರಕ್ಕೆ ವರದಿಯನ್ನು ನೀಡಲಿದ್ದೇವೆ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ 243 ವಾರ್ಡ್‌ಗಳಾಗಿ ಚುನಾವಣೆ ನಡೆಯೋದು ನಿಶ್ಚಿತವಾಗಿರುವುದರಿಂದ ಕೌನ್ಸಿಲ್ ಹೌಸ್ ಪುನರ್ ನವೀಕರಣಗೊಳ್ಳಲಿದೆ. 243 ಕಾರ್ಪೊರೇಟರ್‌ಗಳು, ಬೆಂಗಳೂರು ನಗರ ವ್ಯಾಪ್ತಿಯ ಸಚಿವರು, ಶಾಸಕರು, ಸಂಸದರು, ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಸಹಿತ 364 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.

ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶ

ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶ

ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶವನ್ನು ಬಿಬಿಎಂಪಿ ನೀಡುತ್ತಿದೆ. ಬಿಬಿಎಂಪಿಯ ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ಪಾಲಿಕೆ ಅಡಳಿತಾಧಿಕಾರಿಯಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ವಾರ್ಡ್ ವಿಂಗಡನೆಯಂತೆ ಬಿಬಿಎಂಪಿ ಸದಸ್ಯರ ಸಂಖ್ಯೆಯು ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಕೌನ್ಸಿಲ್ ಕಟ್ಟಡವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಬಿಬಿಎಂಪಿಯಲ್ಲಿ 198 ವಾರ್ಡ್‌ಗಳಿದ್ದವು ವಾರ್ಡ್ ವಿಂಗಡನೆ ಬಳಿಕ 243 ವಾರ್ಡ್‌ಗಳು ರಚನೆಯಾಗಲಿದೆ. ಇದರಿಂದಾಗಿ ಕೌನ್ಸಿಲ್ ಕಟ್ಟಡದ ಮರು ವಿನ್ಯಾಸದ ಜೊತೆ ಹೈಟೆಕ್ ತಂತ್ರಜ್ಞಾನವನ್ನು ಅಳವಡಿಸಲು ಬಿಬಿಎಂಪಿ ಚಿಂತಿಸಿದೆ.

10 ಕೋಟಿ ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ವಿನ್ಯಾಸ

10 ಕೋಟಿ ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ವಿನ್ಯಾಸ

ಕೌನ್ಸಿಲ್ ಕಟ್ಟಡಕ್ಕೆ ಹೊಸ ಬ್ಲೂ ಪ್ರಿಂಟನ್ನು ಬಿಬಿಎಂಪಿ ಸಿದ್ದ ಪಡಿಸಿದೆ. ಅಂದಾಜು 10 ಕೋಟಿ ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ವಿನ್ಯಾಸ ನಡೆಯಲಿದೆ. ಕೌನ್ಸಿಲ್ ಕಟ್ಟಡದಲ್ಲಿ ಇಲ್ಲಿಯವರೆಗೂ 270 ಮಂದಿ ಕೂರಲು ಅವಕಾಶವಿತ್ತು. ಕೌನ್ಸಿಲ್ ಸಭಾಂಗಣ

ಪಾಲಿಕೆ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಶಾಸಕರು, ಸಂಸದರು ಪರಿಷತ್ ಸದಸ್ಯರಿಗೆ ಸೀಮಿತವಾಗಿದ್ದ 270 ಸ್ಥಾನ ಈಗ 364 ಮಂದಿಗೆ ಕುರ್ಚಿಗಳಿಗೆ ಏರಿಸಿದೆ. ಪಾಲಿಕೆ ಕೌನ್ಸಿಲ್ ಪ್ರತಿ ಸದಸ್ಯರ ಆಸನದಲ್ಲಿ ಮೈಕ್ ಅಳವಾಡಿಕೆ ಜೊತೆ ಸೌಂಡ್ ಪ್ರೂಫ್ ಸಭಾಂಗಣ ವ್ಯವಸ್ಥೆ, ಕೌನ್ಸಿಲ್ ಹೌಸ್ ನಲ್ಲಿ ಸಿಸಿ ಕ್ಯಾಮಾರ ಅಳವಡಿಕೆ ಸಾರ್ವಜನಿಕರಿಗೆ ಹಾಗೂ ಮಾದ್ಯಮದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಮಾಡಲಿದೆ.

ಸೀಟು ಮೀಸಲು ನಿಗದಿ

ಸೀಟು ಮೀಸಲು ನಿಗದಿ

ಕೌನ್ಸಿಲ್ ಕಟ್ಟಡದಲ್ಲಿ ಬಿಬಿಎಂಪಿ ಕಾರ್ಪೋರೇಟರ್, ನಾಮನಿರ್ದೇಶಿತರು, ಶಾಸಕರು ಮತ್ತು ಸಂಸದರು, ಸಚಿವರು ಅಧಿಕಾರಿಳನ್ನು ಒಳಗೊಂಡಂತೆ ಆಸನದ ವ್ಯವಸ್ಥೆಯನ್ನು ಮಾಡಬೇಕಿದೆ ಇದಕ್ಕಾಗಿ ಕೌನ್ಸಿಲ್ ಕಟ್ಟಡ ನೀಲಿ ನಕ್ಷೆಯಲ್ಲಿ ಆಸನದ ಮೀಸಲು ಯಾವ ರೀತಿಯಲ್ಲಿರಲಿದೆ ಎಂದು ತೋರಿಸಿದ್ದಾರೆ.

ಪಾಲಿಕೆಯ ಕಾರ್ಪೋರೇಟರ್‌ಗಳು - 243

ಸರ್ಕಾರದ ಸಚಿವರು- 04

ಬೆಂಗಳೂರು ಸಂಸದರು - 03

ಬೆಂಗಳೂರು ಶಾಸಕರು - 28

ಬೆಂಗಳೂರು ವ್ಯಾಪ್ತಿ ವಿಧಾನ ಪರಿಷತ್ ಸದಸ್ಯರು-6

ನಾಮ ನಿರ್ದೇಶಿತ ಸದಸ್ಯರು -25

ಅಧಿಕಾರಿಗಳು : 55

ಒಟ್ಟು :364 ಸೀಟುಗಳನ್ನು ಬಿಬಿಎಂಪಿಯ ನೀಲಿ ನಕ್ಷೆಯಲ್ಲಿ ಗುರುತಿಸಲಾಗಿದ್ದು ಬಿಬಿಎಂಪಿ ಇದೇ ಆಧಾರದಲ್ಲಿ ಕೌನ್ಸಿಲ್ ಕಟ್ಟಡವನ್ನು ನಿರ್ಮಾಣ ಮಾಡಲಿದೆ.

ಕೌನ್ಸಿಲ್ ಕಟ್ಟಡ ಹೆಚ್ಚುವರಿ ವಿಸ್ತೀರ್ಣವೆಷ್ಟು..?

ಕೌನ್ಸಿಲ್ ಕಟ್ಟಡ ಹೆಚ್ಚುವರಿ ವಿಸ್ತೀರ್ಣವೆಷ್ಟು..?

ಬಿಬಿಎಂಪಿ ಕೌನ್ಸಿಲ್ ಕಟ್ಟಡವು 330.15sqm ವಿಸ್ತೀರ್ಣವನ್ನು ಹೊಂದಿದೆ. ಅದರಂತೆ 52.68sqm ಅನ್ನು ವಿಸ್ತರಿಸುತ್ತಿದ್ದು ವಿಸ್ತರಣೆ ನಂತರ ಕೌನ್ಸಿಲ್ ಕಟ್ಟಡವು 382.83sqmನ ವಿಸ್ತೀರ್ಣವನ್ನು ಹೊಂದಲಿದೆ. ಇದೇ ಕಟ್ಟಡದಲ್ಲಿ ಪತ್ರಕರ್ತರಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಮಾಡುತ್ತಿದೆ.


ಬಿಬಿಎಂಪಿ ಅಧಿಕಾರಿಗಳು ತಮ್ಮ ಆಸನವನ್ನು ಕೂಸು ಹುಟ್ಟುವ ಮೊದಲೇ ಬುಕ್ ಮಾಡುವಂತೆ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದರೇ ಬೆಂಗಳೂರು ಮತ್ತಷ್ಟು ವಿಜೃಂಭಿಸುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

Recommended Video

ಭಾರತ ರಾಷ್ಟ್ರನಾ ಅಥವಾ ದೇಶನಾ? ರಾಹುಲ್ ಗಾಂಧಿಗೆ ಫುಲ್ ಕನ್ಫ್ಯೂಷನ್! ಲಂಡನ್ ನಲ್ಲಿ‌ಎಡವಟ್ಟು | Oneindia Kannada

English summary
The Supreme Court has ordered the BBMP to hold elections. BBMP is also planning to renovate the Kempegowda Council building as the number of BBMP members increases
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X