ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ವಾರಂಟೈನ್: ಹೋಟೆಲ್ ಬಾತ್‌ರೂಮ್ ಸೀಲಿಂಗ್ ಕುಸಿತ, ಮಹಿಳೆ ಪಾರು

|
Google Oneindia Kannada News

ಬೆಂಗಳೂರು, ಮೇ 21: ಕೊರೊನಾ ಹಾವಳಿಯಿಂದ ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬಂದವರು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಅದರಲ್ಲೂ ಹೊರ ದೇಶಗಳಿಂದ ಬಂದವರು ಕ್ವಾರಂಟೈನ್ ತಪ್ಪಿಸಿಕೊಳ್ಳುವ ಹಾಗಿಲ್ಲ.

Recommended Video

ವೃದ್ಧೆ ಬಳಿ ತರಕಾರಿ ಖರೀದಿಸಿ ಮನೆಗೆ ಹೋಗಿ ಅಂತ ವಿನಂತಿಸಿದ ಜಿಲ್ಲಾಧಿಕಾರಿ | Oneindia Kannada

ಹೀಗೆ ಹೊರದೇಶದಿಂದ ಬಂದು ಬೆಂಗಳೂರಿನ ಮೆಜೆಸ್ಟಿಕ್ ಬಳಿ ಕ್ವಾರಂಟೈನ್‌ ನಲ್ಲಿ ಉಳಿದುಕೊಂಡಿರುವ ಕುಟುಂಬವೊಂದು ಹೋಟೆಲ್ ನಲ್ಲಿ ಸಂಭವಿಸಿದ ಅವಘಡದಿಂದ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಕತಾರಿನಿಂದ ಮಾತೃಭೂಮಿಗೆ ಮರಳುತ್ತಿರುವ ಕನ್ನಡಿಗರು ಕತಾರಿನಿಂದ ಮಾತೃಭೂಮಿಗೆ ಮರಳುತ್ತಿರುವ ಕನ್ನಡಿಗರು

ಹೌದು, ಹೊರದೇಶದಿಂದ ಬಂದು ಮೆಜೆಸ್ಟಿಕ ಬಳಿ ಹೋಟೆಲ್ ಒಂದರಲ್ಲಿ ಹಣ ಪಾವತಿಸಿ ಮೀನಾಕ್ಷಿ ವೆಂಕಟರಮಣ ಎನ್ನುವರ ಕುಟುಂಬ ತಂಗಿದೆ. ಬುಧವಾರ ಮೀನಾಕ್ಷಿ ಅವರು ಸ್ನಾನ ಮಾಡುವಾಗ ಹೋಟೆಲ್‌ನ ಬಾತ್‌ರೂಮ್‌ನ ಸೀಲಿಂಗ್ ಕುಸಿದು ಬಿದ್ದಿದೆ. ಘಟನೆ ನಡೆದಾಗ ಮೀನಾಕ್ಷಿ ಸ್ವಲ್ಪದರಲ್ಲೇ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸೀಲಿಂಗ್ ಅವಸ್ಥೆ ಬಗ್ಗೆ ಮೀನಾಕ್ಷಿ ಅವರು ಹೋಟೆಲ್ ಸಿಬ್ಬಂದಿ ಗಮನಕ್ಕೆ ತಂದಿದ್ದರೂ ಹೋಟೆಲ್‌ನವರು ನಿರ್ಲಕ್ಷ್ಯವಹಿಸಿದ್ದರು ಎಂದು ಮೀನಾಕ್ಷಿ ಆರೋಪಿಸಿದ್ದಾರೆ.

Bathroom Ceiling Collapses In Quarantine Hotel in Bengaluru, Woman Escapes

ಈ ಬಗ್ಗೆ ಮಾಹಿತಿಯನ್ನು ಮೀನಾಕ್ಷಿ ಅವರ ಮಗ ಟ್ವಿಟ್ಟರ್‌ಗೆ ಹಾಕಿ ಕ್ಟಾರಂಟೈನ್ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. "ನಾವು ಇಲ್ಲಿಗೆ ಏಳು ದಿನಗಳು ಬಂದಿದ್ದೇವೆ. ಆದರೆ, ನಮ್ಮ ಸ್ವ್ಯಾಬ್ ಪರೀಕ್ಷೆಯನ್ನು ಯಾವಾಗ ಮಾಡಲಾಗುತ್ತದೆ ಎಂದು ನಮಗೆ ತಿಳಿದಿಲ್ಲ. ನಾವು ವಿಚಾರಿಸಿದಾಗ, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪರೀಕ್ಷಿಸಲು ಅಧಿಕಾರಿಗಳಿಗೆ ಮಾತ್ರ ಆದೇಶವಿದೆ ಎಂದು ನಮಗೆ ತಿಳಿಸಿದ್ದಾರೆ. ಆದರೆ, ನಮ್ಮನ್ನು ಇಂತಹ ಕೆಟ್ಟ ಹೋಟೆಲ್‌ನಲ್ಲಿ ಉಳಿಯಲು ಬಿಟ್ಟು ಹೋಟೆಲ್ ಬಿಲ್ ಕಟ್ಟಿಸುತ್ತಿದ್ದಾರೆ'' ಎಂದು ಮೀನಾಕ್ಷಿ ಅವರು ದೂರಿರುವುದಾಗಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

English summary
Bathroom Ceiling Collapses In Quarantine Hotel in Bengaluru, Woman Escapes, woman upset with Quarantine system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X